ಸೋಮಶೇಖರ ‌ರೆಡ್ಡಿಯವರ ಶಾಸಕ ಸ್ಥಾನವನ್ನು ವಜಾಗೊಳಿಸಬೇಕು: ರಾಜಾ ವಸಂತ ‌ನಾಯಕ

0
40
ಮಾನ್ವಿ: ಜ.7 ಸಮಾಜದಲ್ಲಿ ಶಾಂತಿ ‌ಕದಡುವು ಹೇಳಿಕೆ ನೀಡಿರುವಂತಹ ಬಳ್ಳಾರಿ ‌ಶಾಸಕರಾದ ಸೋಮಶೇಖರ ‌ರೆಡ್ಡಿಯವರ ಶಾಸಕ ಸ್ಥಾನವನ್ನು ರಾಜ್ಯ ಪಾಲರು ವಜಾಗೊಳಿಸಬೇಕೆಂದು ರಾಜ ವಸಂತ ‌ನಾಯಕ ಆಗ್ರಹಿಸಿದರು.
ಪಟ್ಟಣದ ‌ಗಂಗಾಮತ ಭವನದಲ್ಲಿ ‌ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪೌರತ್ವ ಜಾಗ್ರತಿ ಅಭಿಯಾನದ ‌ಕಾರ್ಯಕ್ರಮದಲ್ಲಿ ನಾವು ‌80 ಪ್ರತಿಶತ ‌ಇದ್ದು ನಾವು ಖಡ್ಗ ಕೈಯಲ್ಲಿ ಹಿಡಿದರೆ ನೀವು ಭೂಮಿ ‌ಮೇಲೆ‌ ಇರುವುದಿಲ್ಲ ಎನ್ನುವ ‌ಹೇಳಿಕೆ ಕೊಟ್ಟಿರುವ ಸೋಮಶೇಖರ ‌ರೆಡ್ಡಿಯವರಿಗೆ ಶೋಭೆ ತರುವಂತದ್ದಲ್ಲ ಇದು ‌ಜಾತ್ಯತೀತ ಧರ್ಮಾತೀತ ಭಾರತದಲ್ಲಿ ‌ಗಲಭೆ ಎಬ್ಬಿಸಿ ಅಮಾಯಕ ‌ ಹಿಂದೂ ಮುಸ್ಲಿಂ ‌ಜನಗಳ‌ ಮದ್ಯೆ ಗಲಭೆ ಹಚ್ಚುವ ಕೆಲಸಕ್ಕೆ ಕೈ ಹಾಕಿರುವುದು ನಿಜಕ್ಕೂ ‌ನಾಚಿಕೆಗೇಡಿನ‌ ಸಂಗತಿಯಾಗಿದೆ ಇಂತಹ ಪ್ರಚೋದನೆಕಾರಿ ಹೇಳಿಕೆ ನೀಡಿ ರಾಜ್ಯದಲ್ಲಿ ಕೋಮು ಗಲಭೆಗೆ ಅವಕಾಶ ‌ಮಾಡಿಕೊಟ್ಟಿರುವ ಬಳ್ಳಾರಿ ‌ಶಾಸಕ ಸೋಮಶೇಖರ ‌ರೆಡ್ಡಿಯವರ ಮೇಲೆ‌ ಕ್ರಿಮಿನಲ್ ‌ಪ್ರಕರಣ ದಾಖಲಿಸಿ ಬೇಕು ಮತ್ತು ಸಣ್ಣತನದ ಹೇಳಿಕೆ ‌ನೀಡಿ ಜನಸಾಮಾನ್ಯರ ‌ಬದುಕಿನಲ್ಲಿ ಧರ್ಮ ಬೇದ ಉಂಟು ಮಾಡುತ್ತಿರುವ ಇವರು ಶಾಸಕ ಸ್ಥಾನದಲ್ಲಿ ಮುಂದುವರೆಯಲು ‌ಯಾವುದೇ ಅರ್ಹತೆ ‌ಇಲ್ಲಾ‌ ಇವರನ್ನು ‌ಶಾಸಕ‌ ಸ್ಥಾನದಿಂದ ‌ವಜಾಗೊಳೊಸಿ ಪ್ರಜಾಪ್ರಭುತ್ವ ಎತ್ತಿ ಹಿಡಿಯಬೇಕು  ಎಂದು ‌ಹೇಳಿದರು.
ಈ‌ ಸಂಧರ್ಭದಲ್ಲಿ ‌ಎ.ಬಾಲಸ್ವಾಮಿ ಕೊಡ್ಲಿ, ಕೆ.ಕರಿಯಪ್ಪ, ಖಾಲಿಸ್ ಖಾದ್ರಿ ಗುರು, ಲಕ್ಷೀನಾರಯಣ ಯಾದವ್, ಮಹ್ಮದ್ ಇಸ್ಮಾಯಿಲ್, ಜೆ.ಪ್ರಕಾಶ್ ಕೋನಾಪುರ ಪೇಟೆ, ‌ರಾಮಕೃಷ್ಣ‌‌ ಕೋನಾಪುರ ಪೇಟೆ, ಸಯ್ಯಾದ್ ಮುಜಮುಲ್ ಗುರು, ಎಂ.ಡಿ.ಮೋಹಿನ್ ಖಾನ್, ಹಾಗೂ ಇನ್ನೂ ‌ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here