ದೇವದುರ್ಗದವರಿಗೆ ಯಾವುದೇ ರೀತಿಯ *ಕೋರೋಣ ವೈರಸ್ ದೃಢಪಟ್ಟಿಲ್ಲ*.

0
149

ರಾಯಚೂರು,ಮಾ.30 ಸೊಮವಾರ:- ಎಚ್ಚರಿಕೆ,
ಯಾವುದೇ ವಿಷಯದ ಬಗ್ಗೆ ವಿಶೇಷವಾಗಿ ಕೊರೊನ ವೈರಸ್ ಬಗ್ಗೆ ಮಾಹಿತಿ ಪರಿಶೀಲಿಸದೇ ಸಾಮಾಜಿಕ ಜಾಲತಾಣ ಫೇಸ್ಬುಕ್ ವಾಟ್ಸಾಪ್ ಮತ್ತು ಇತರೇ ಪೇಜ್ ಗಳಲ್ಲಿ ಶೇರ್ ಮಾಡುವುದು ಅಪರಾಧ. ಸುಳ್ಳು ಸುದ್ದಿ ಹರಡಿದರೆ, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಪ ವಿಭಾಗಾಧಿಕಾರಿ ಮತ್ತು ಉಪ ವಿಭಾಗಿಯ ದಂಡಾಧಿಕಾರಿ ರಾಯಚೂರು ಎಚ್ಚರಿಕೆ ನೀಡಿದರು.

ಅವರಿಂದು ಬೆಂಗಳೂರಿನಿಂದ ಆಗಮಿಸಿದ ದೇವದುರ್ಗ ತಾಲೂಕಿನ ವೆಂಗಳಾಪೂರ ತಾಂಡದ ನಿವಾಸಿಗಳಾದ ಕೂಲಿಕಾರ್ಮಿಕರ ಪೈಕಿ ಮೂವರಿಗೆ ಕೊರೊನಾ ವೈರಸ್ ಬಂದು ದೃಡಪಟ್ಟಿದೆ ಎಂದು  ಸುಳ್ಳು ಸುದ್ದಿ ಹರಡುತ್ತಿರುವವರಿಗೆ ಎಚ್ಚರಿಕೆ ನೀಡುವ ಮೂಲಕ ಮಾತನಾಡಿ  ದೇವದುರ್ಗದವರಿಗೆ ಯಾವುದೇ ರೀತಿಯ *ಕೋರೋಣ ದೃಢಪಟ್ಟಿಲ್ಲ*.. ನಾಲ್ಕು ಜನರು ದ್ವಿತೀಯ ಸಂಪರ್ಕದಲ್ಲಿ ಇರುವುದರಿಂದ ಮುಂಜಾಗೃತೆಗಾಗಿ, ಆಸ್ಪತ್ರೆಯಲ್ಲಿ ಇಟ್ಟು, ನಿಗಾ ವಹಿಸಲಾಗಿದೆ ಎಂದು ಹೇಳಿದರು

LEAVE A REPLY

Please enter your comment!
Please enter your name here