ಕಡಲೆ ಖರೀದಿ ಕೇಂದ್ರ ಪ್ರಾರಂಬಿಸಲು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯ

0
119

ಲಿಂಗಸುಗೂರು.ಜ.28- ಈ ವರ್ಷ ಕಡಲೆ ಬೆಳೆಯು ಉತ್ತಮವಾಗಿ ಬಂದಿದ್ದು ಈ ಭಾಗದ ಎಲ್ಲಾ ರೈತರಿಗೆ ಕಡಲೆ ಖರೀದಿ ಕೇಂದ್ರ ಪ್ರಾರಂಭಿಸಲು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಕಡಲೆ ಬೆಳೆಯನ್ನು ಹೆಚ್ಚಾಗಿ ಬೆಳೆದಿದ್ದು ಕೇಂದ್ರ ಸರ್ಕಾರದ ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲಿ ಧರ ತೀವ್ರ ಕುಸಿತವಾಗಿದ್ದು 3500 ರಿಂದ 3800 ರೂ ವರೆಗೆ ವ್ಯಾಪರಸ್ಥರು ಬೇಕಾ ಬಿಟ್ಟಿಯಾಗಿ ಕೇಳುತ್ತಿದ್ದಾರೆ ಕಾರಣ ಕಡಲೆ ಬೆಳೆಗಾರರನ್ನು ರಕ್ಷಣೆ ಮಾಡಲು ರಾಜ್ಯ ಸರ್ಕಾರ ಪ್ರೂತ್ಸಾಹ ಧನ ಕೊಟ್ಟು ಕನಿಷ್ಠ 5500 ರೂ ರಂತೆ ಸರ್ಕಾರ ಖರೀದಿ ಮಾಡಲು ಮುಂದಾಗಬೇಕು,
ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಬೇಕಾಬಿಟ್ಟಿಯಾಗಿ ಟೆಂಡರ ಪ್ರಕ್ರಿಯೆ ನೆಡೆಯುತ್ತಿದ್ದು ಪ್ರತಿ ಶೇ. 2 ರಂತೆ ದಲ್ಲಾಲಿ ತೆಗೆಯುತ್ತಿದ್ದಾರೆ, ಮತ್ತು ಹೆಚ್ಚುವರಿಯಾಗಿ 500 ಗ್ರಾಂ ತೆಗೆಯುತ್ತಿದ್ದು ಮುದಗಲ್ ಮತ್ತು ಲಿಂಗಸುಗೂರ ಮಾರುಕಟ್ಟೆಗೆ ಸ್ವತಃ ಸಹಾಯಕ ಆಯುಕ್ತರು ಹಾಗೂ ಎಪಿಎಂಸಿ, ಕಾರ್ಯದರ್ಶಿಗಳು ಬೇಟಿ ಕೊಟ್ಟು ರೈತರಿಗೆ ಆಗುವ ಆನ್ಯಾಯವನ್ನು ಸರಿಪಡಿಸಬೇಕು, ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಪೋಡಿ ಮುಕ್ತ ಗ್ರಾಮ ಸರ್ವೆ ಕಾರ್ಯ ಸರಿಯಾಗಿ ನೆಡೆಯದೆ ಭಾರಿ ಅವ್ಯೆವಹಾರ ನಡೆಯುತ್ತಿದ್ದು ಹಣ ಕೂಟ್ಟ ರೈತರಿಗೆ ಮಾತ್ರ ಪೋಡಿ ಮಾಡಿಕೋಡುವ ಈ ವಿಷಯವನ್ನು ಗಂಬೀರವಾಗಿ ತೆಗೆದುಕೂಂಡು ಸರ್ವೆಯವರನ್ನು ಹಾಗೂ ಸರ್ವೆ ಅಧಿಕಾರಿಗಳನ್ನು ಮತ್ತು ರೈತರನ್ನು ಒಂದು ಸಭೆ ಕರೆದು ಈ ವ್ಯವಾಹರದಲ್ಲಿ ಭಾಗಿಯಾದ ಸರ್ವೆ ಅಧಿಕಾರಿಗಳ ಮೇಲೆ ತುರ್ತು ಕ್ರಮಜರುಗಿಸಿ ಪೋಡಿ ಮುಕ್ತ ಗ್ರಾಮವನ್ನಾಗಿ ಮಾಡಲು ಕ್ರಮ ಜರುಗಿಸಬೇಕು,
2018-19 ಹಿಂಗಾರು ಹಂಗಾಮಿನ ಬೆಳೆ ಪರಿಹಾರ ಮೋಬೈಲನಲ್ಲಿ ಸಂದೇಶ ತೋರಿಸುತ್ತಿದ್ದು ರೈತರು ಬ್ಯಾಂಕಗಳಲ್ಲಿ ವಿಚಾರಿಸಿದರೆ ಹಣ ಜಮಾ ಆಗಿರುವದಿಲ್ಲಾವೆಂದು ತಿಳಿದು ಬರುತ್ತಿದೆ ತಕ್ಷಣವೆ ಬೆಳೆ ನಷ್ಟ ಪರಿಹಾರದ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು
2019 ರ ನೆರೆಹಾವಳಿಗೆ ಲಿಂಗಸುಗೂರು ತಾಲ್ಲೂಕಿನ ಕಡದರಗಡ್ಡಿಯ ನೂರಾರು ಎಕರೆ ಭೂಮಿ ಹಾಳಾಗಿದ್ದು ಜೂತೆಗೆ ಯರಗೂಡಿ, ಶೀಲಹಳ್ಳಿ, ಹಂಚಿನಾಳ, ಯಳಗುಂದಿ ಕೃಷ್ಣಾ ನದಿ ಪಾತ್ರದಲ್ಲಿರುವ ಎಲ್ಲಾ ಹಳ್ಳಿಗಳಲ್ಲಿ ಬೆಳೆ ನಷ್ಟವಾಗಿದ್ದು ಇಲ್ಲಿಯವರೆಗೂ ಒಂದು ಬಿಡಿಕಾಸು ರೈತರಿಗೆ ಭೂನಷ್ಟ ಪರಿಹಾರ ದೊರೆಕಿರುವದಿಲ್ಲಾ ತಕ್ಷಣವೇ ಬೆಳೆ ನಷ್ಟ ಪರಿಹಾರ ಕೂಡಲು ಸರ್ಕಾರ ಮುಂದಾಗ ಬೇಕು
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ಮಲ್ಲಣ್ಣ ಗೌಡೂರು, ಮಾನಪ್ಪ ಭೋಗಾಪೂರು, ಶರಣಗೌಡ ಜೂಲಗುಡ್ಡ, ಹುಚ್ಚರೆಡ್ಡಿ, ಚನ್ನಬಸನಗೌಡ ಕೋಮಲಾಪೂರು, ಹನುಮಪ್ಪ ಪೂಜಾರಿ, ಅಮರೇಗೌಡ ಗೋನವಾಂಟ್ಲಾ, ಮೈಬುಸಾಬ, ಗ್ಯಾನನಗೌಡ ತಿಮ್ಮಾಪೂರು ಇತರರಿದ್ದರು.

ಪೋಟೊ:೦೧, ಕರ್ನಾಟಕ ರಾಜ್ಯ ರೈತ ಸಂಘ ಕಾರ್ಯಕರ್ತರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
=

LEAVE A REPLY

Please enter your comment!
Please enter your name here