ಮಾಲು-ಮುದ್ದೆ’ಯ ಅಮಲಿಗೆ ಬಿದ್ದ ಅಬಕಾರಿ ಅಧಿಕಾರಿಗಳು…!

ಕೆಲದ ದಿನಗಳ ಹಿಂದೆ ಶಾಸಕ ವೆಂಕಟರಾವ್ ನಾಡಗೌಡ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಅಬಕಾರಿಗಳಿಗೆ ಸೂಚಿಸಿದ್ದಾರೆ. ಅದಾಗ್ಯೂ ಅಕ್ರಮ ಮಾರಾಟ ನಿಂತಿಲ್ಲ. ಅಧಿಕಾರಿಗಳೇ ಪರೋಕ್ಷವಾಗಿ ಅಕ್ರಮ ಮಾರಾಟಗಾರರ ಬೆಂಗಾವಲಾಗಿ ನಿಂತಿದ್ದಾರೆ ಎನ್ನುವ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

0
134

ಅಬಕಾರಿ ದಾಳಿ: ದಾಳಿಯಲ್ಲಿದ್ದ ಅಧಿಕಾರಿಗಳ ಶರವೇಗ ಎಫ್‌ಐಆರ್ ಮಾಡುವಾಗಿರಲಿಲ್ಲ…

‘ಮಾಲು-ಮುದ್ದೆ’ಯ ಅಮಲಿಗೆ ಬಿದ್ದ ಅಬಕಾರಿ ಅಧಿಕಾರಿಗಳು…!

ಸಿಂಧನೂರು.ಮಾ.04 – ಅಬಕಾರಿ ಇಲಾಖೆಯ ಕಲಬುರ್ಗಿ ಹಿರಿಯ ಅಧಿಕಾರಿ ನೇತೃತ್ವದ ಸ್ಥಳೀಯ ಅಧಿಕಾರಿಗಳ ತಂಡ ಶರವೇಗದಲ್ಲಿ ಮಿಂಚಿನ ದಾಳಿ ನಡೆಸಿ, ಅಕ್ರಮ ಸಾಗಾಣಿಕೆ ಮಾಡುತ್ತಿದ್ದ ಬಹುಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳುತ್ತಾರೆ. ಆದರೆ ಅದೇ ವೇಗ ಮತ್ತು ಕಾರ್ಯದಕ್ಷತೆ ಎಫ್‌ಐಆರ್ ಮಾಡುವಾಗ ಇರಲಿಲ್ಲ. ದೂರು ದಾಖಲಿಸಿಕೊಳ್ಳಲು ಅಧಿಕಾರಿಗಳು ರಾತ್ರಿ ಹಿಡಿ ಜಾಗರಣೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.

ಇಂತಹದ್ದೊAದು ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ರಾತ್ರಿ ರಸ್ತೆಗಾವಲಿಗೆ ನಿಂತ ಅಬಕಾರಿ ಪೊಲೀಸರು ನಗರದ ಕುಷ್ಟಗಿ ರಸ್ತೆಯ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ಹಾಗೂ ಕಾರನ್ನು ಜಪ್ತಿ ಮಾಡಲು ಮುಂದಾದರು. ನಂತರ ನಡೆದ ಘಟನಾವಳಿಗಳೇ ವಿಭಿನ್ನವಾಗಿದ್ದವು. ಅಕ್ರಮವನ್ನೆ ದಂಧೆ ಮಾಡಿಕೊಂಡಿರುವ ಕೆಲ ಪ್ರಭಾವಿಗಳ ಮಾಲುಮುದ್ದೆಗೆ ಆಸೆ ಬಿದ್ದಂತೆ ಮೇಲ್ನೊಟಕ್ಕೆ ಕಂಡು ಬಂತು. ಘಟನೆಗೆ ಸಂಬAಧಿಸಿದAತೆ ಪ್ರಭಾವಿಗಳ ಖೆಡ್ಡಕ್ಕೆ ಬಿದ್ದಿದ್ದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಳ್ಳಲು ಮೀನಾಮೇಷ ಎಣಿಸುತ್ತಾ ಕಾಲಹರಣ ಮಾಡಿದ ಪ್ರಸಂಗ ಜರುಗಿತು. ಜಪ್ತಿ ಮಾಡಿದ ದೊಡ್ಡ ಮಟ್ಟದ ಮದ್ಯದ ಪ್ರಕರಣವನ್ನು ಮುಚ್ಚಿ ಹಾಕಲು ಅಧಿಕಾರಿಗಳ ಮೇಲೆ ಪ್ರಭಾವಿಗಳು ಸಾಕಷ್ಟು ಒತ್ತಡ ಹೇರುತ್ತಿರುವ ದೃಶ್ಯ ಮಧ್ಯಾರಾತ್ರಿ ೧ಗಂಟೆಯವರೆಗೆ ಪೋನ್ ಹಿಡಿದುಕೊಂಡು ಅಧಿಕಾರಿಗಳು ತರಾತುರಿಯ ಓಡಾಟ ನಡೆಸುತ್ತಿರುವಾಗ ಸಾಬೀತಾಯಿತು. ದಾಳಿ ನಡೆದು ಅಕ್ರಮ ಮದ್ಯ ವಶಕ್ಕೆ ಪಡೆದ ಸುದ್ದಿ ಮಾದ್ಯಮಗಳಿಗೆ ತಿಳಿಯುದ್ದಂತೆ ಕೊನೆಗೆ ಮಾಧ್ಯಮ ಪ್ರತಿನಿಧಿಗಳ ಉಪಸ್ಥಿತಿಯಿಂದಾಗಿ ಅಳೆದು-ತೂಗಿ ಅನಿವಾರ್ಯವಾಗಿ ದೂರುದಾಖಲಿಸಿಕೊಳ್ಳಲು ಮುಂದಾದರು. ಅಧಿಕ ಮೌಲ್ಯದ ಮದ್ಯ ವಶಪಡಿಸಿಕೊಂಡರೂ ಬೆರಳೆಣಿಕೆಯ ಬಾಟಲ್‌ಗಳನ್ನು ಪ್ರದರ್ಶನ ಮಾಡಿದ್ದು, ಮಾತ್ರ ಸೋಜಿಗದ ಸಂಗತಿ.

ಸಿಕ್ಕ ಬಹುಮೌಲ್ಯದ ಮದ್ಯ, ಲೆಕ್ಕದಲ್ಲಿ ಇಲ್ಲವಾಯ್ತು:

ಕರ್ಲ್ಬುಗಿ ವಿಭಾಗದ ಎಸ್‌ಪಿ ಸಂಗನಗೌಡ, ಸ್ಥಳೀಯ ನಿರೀಕ್ಷಕ ಸಿದ್ದಾರೂಢ ಲೋಕಶೆಟ್ಟಿ ಸೇರಿ ಮೂವರು ನಿರೀಕ್ಷಿಕರು, ಒರ್ವ ಸಹಾಯಕ ನಿರೀಕ್ಷಕ ಹಾಗೂ ಸಿಬ್ಬಂದಿ ಒಳಗೊಂಡ ತಂಡ ದಾಳಿ ನಡೆಸಿದೆ. ದಾಳಿ ಸಂದರ್ಭದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ೮ಕ್ಕಿಂತ ಅಧಿಕ ದುಬಾರಿ ಮೌಲ್ಯದ ಐಎಂಎಲ್ ಲಿಕ್ಕರ್ ಬಾಕ್ಸ್ಗಳು ಕಾರಿನಲ್ಲಿ ಪತ್ತೆಯಾಗಿವೆ. ಕೂಡಲೇ ಕಾರನ್ನು ವಶಕ್ಕೆ ಪಡೆದು ಕಛೇರಿ ತರಲಾಯಿತು. ದಾಳಿ ವಿಷಯ ಗೊತ್ತಾಗುತ್ತಿದ್ದಂತೆ ಅಕ್ರಮ ಮದ್ಯ ಮಾರಾಟಗಾರರ ತಂಡವು ನೇರವಾಗಿ ಅಧಿಕಾರಿಗಳೊಂದಿಗೆ ವ್ಯವಹಾರಕ್ಕೆ ಮುಂದಾಗಿತ್ತು. ದಾಳಿಯಲ್ಲಿ ಸಿಕ್ಕ ಬಹುಮೌಲ್ಯದ ಮದ್ಯ, ಲೆಕ್ಕದಲ್ಲಿ ಇಲ್ಲದಂತಾಯಿತು.

ದಾಳಿಯಲ್ಲಿ ಸಿಕ್ಕ ಆರೋಪಿ, ಕ್ಷಣಮಾತ್ರದಲ್ಲಿ ಪರಾರಿ

ಅಕ್ರಮ ಮದ್ಯ ಮಾರಾಟಕ್ಕೆ ಸಂಬAಧಿಸಿದAತೆ ನಗರದ ಪ್ರತಿಷ್ಠಿಯ ಪ್ರಭಾವಿಗಳ ಒಡೆತನದಲ್ಲಿರುವ ವಾಣಿ ವೈನ್ಸ್ಗೆ ಸಂಬAಧಿಸಿದೆ ಎನ್ನಲಾದ ಅಕ್ರಮ ಮದ್ಯ ಸಾಗಾಣಿಕೆಗೆ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ರಾತ್ರಿ ೧೧ ಗಂಟೆ ಸುಮಾರಿಗೆ ಮಾಲಿನೊಂದಿಗೆ ಕಾರನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಆರೋಪಿಗಳನ್ನು ಹಿಡಿಯುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ದಾಳಿಯಲ್ಲಿ ಸಿಕ್ಕಿಬಿದ್ದ ಆರೋಪಿಯನ್ನು ಅಲ್ಲಿಂದ ಪರಾರಿ ಮಾಡಿಸಿಲಾಗಿದೆ. ಕೇವಲ ನಾಮಕಾವಾಸ್ತೆಯನ್ನುವಂತೆ ಕಾರನ್ನು ವಶಪಡಿಸಿಕೊಂಡು ಬಂದು ಅಧಿಕಾರಿಗಳು ಅನಿವಾರ್ಯಕ್ಕೆಂಬAತೆ ತಡರಾತ್ರಿ ಎಫ್‌ಐಆರ್ ದಾಖಲಿಸಿದ್ದಾರೆ. ದಾಳಿಯಲ್ಲಿ ಸಿಕ್ಕಿದ್ದ ಅಕ್ರಮ ಮದ್ಯ ಮಾರಾಟಗಾರ ಕ್ಷಣಮಾತ್ರದಲ್ಲಿ ಪರಾರಿಯಾಗಿದ್ದು, ದೂರಿನಲ್ಲಿ ಆರೋಪಿ ಯಾರು ಎನ್ನುವ ಬಗ್ಗೆ ತಿಳಿದಿಲ್ಲ ಎಂದು ದಾಖಲಿಸಿರುವದು ವಿಶೇಷವಾಗಿದೆ.

ಅಕ್ರಮ ಜೋರು:

ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟ ದಂಧೆ ಜೋರಾಗಿ ನಡೆಯುತ್ತಿದೆ. ಆದರೆ ಅಧಿಕಾರಿಗಳು ಮಾತ್ರ ಇಲ್ಲಿಯವರೆಗೆ ಜಾಣ ಕುರುಡತನ ಪ್ರದರ್ಶನ ಮಾಡುತ್ತಲೇ ಬಂದಿದ್ದಾರೆ. ಈಗಾಗಲೇ ಜಿಲ್ಲೆಯಾದ್ಯಂತ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕೆಂಬ ಮಹಿಳೆಯರ ಕೂಗು ಜೋರಾಗಿ ಎದ್ದಿದೆ. ದಿನನಿತ್ಯ ಪ್ರತಿಭಟನೆಗಳು ನಡೆಯುತ್ತಿವೆ. ಕೆಲದ ದಿನಗಳ ಹಿಂದೆ ಶಾಸಕ ವೆಂಕಟರಾವ್ ನಾಡಗೌಡ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಅಬಕಾರಿಗಳಿಗೆ ಸೂಚಿಸಿದ್ದಾರೆ. ಅದಾಗ್ಯೂ ಅಕ್ರಮ ಮಾರಾಟ ನಿಂತಿಲ್ಲ. ಅಧಿಕಾರಿಗಳೇ ಪರೋಕ್ಷವಾಗಿ ಅಕ್ರಮ ಮಾರಾಟಗಾರರ ಬೆಂಗಾವಲಾಗಿ ನಿಂತಿದ್ದಾರೆ ಎನ್ನುವ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಇನ್ನಾದರೂ ಮೇಲಾಧಿಕಾರಿಗಳು ಎಚ್ಚೆತ್ತುಕೊಂಡು ಈ ಬಗ್ಗೆ ಕ್ರಮ ಕೈಗೊಂಡು ಕಡಿವಾಣ ಹಾಕಬೇಕಿದೆ.

———————————————————————

‘ಅಕ್ರಮ ಮದ್ಯ ಮಾರಾಟಕ್ಕೆ ಸಂಬAಧಿಸಿದAತೆ ಸಾಕಷ್ಟು ದೂರುಗಳು ಬರುತ್ತಿವೆ. ಸಿಂಧನೂರಿನಲ್ಲಿ ನಡೆದ ಘಟನೆಗೆ ಸಂಬAಧಿಸಿದAತೆ ಅಬಕಾರಿ ಜಿಲ್ಲಾಧಿಕಾರಿಗಳೊಂದಿಗೆ ಕೂಡಲೇ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ’.

– ಎಂ.ಲೋಕೇಶ, ಅಬಕಾರಿ ಆಯುಕ್ತರು, ಬೆಂಗಳೂರು.

LEAVE A REPLY

Please enter your comment!
Please enter your name here