ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ

ವೆಲ್ಫೇರ್ ಪಕ್ಷದ ಕಲ್ಯಾಣ ಭಾರತದ(Welfare state) ಕನಸನ್ನು ನನಸಾಗಿಲು ಈ ಪಕ್ಷವನ್ನು ಬೆಂಬಲಿಸಿ ಇದರ ಸದಸ್ಯರಾಗಬೇಕೆಂದು

0
145

ಅಕ್ಟೋಬರ್ 15 ರಿಂದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಸದಸ್ಯತ್ವ ನೋಂದಣಿ ಅಭಿಯಾನ ಆರಂಭ

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಸದಸ್ಯತ್ವ ನೋಂದಣಿ ಅಭಿಯಾನ ಅಕ್ಟೋಬರ್ 15 ರಿಂದ ಆರಂಭವಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಯಚೂರು ಜಿಲ್ಲಾ ಅಧ್ಯಕ್ಷ ಫರೀದ್ ಉಮರಿ ತಿಳಿಸಿದರು

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಸದಸ್ಯತ್ವ ನೋಂದಣಿ ಅಭಿಯಾನ ಅಕ್ಟೋಬರ್ 15 ರಿಂದ 31 ಅಕ್ಟೋಬರ್ ರವರೆಗೆ ನಡೆಯಲಿದೆ.ಸದಸ್ಯತ್ವ ನೊಂದಣಿ ಅಭಿಯಾನ ಪ್ರಕ್ರಿಯೆ ಮೇಲುಸ್ತುವಾರಿ ಸಮಿತಿಯ ಸಂಚಾಲಕ ಹೊಣೆಯನ್ನು ಜಿಲ್ಲಾ ಹಂತದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಯಚೂರು ಜಿಲ್ಲೆಯ ಉಪಾಧ್ಯಕ್ಷ ಅಬ್ದುಲ್ ಗನಿ ನಿಭಾಯಿಸಲಿದ್ದಾರೆ.

ಇಂದು ಭಾರತದಲ್ಲಿ ಸುಮಾರು 2300 ನೋಂದಾಯಿತ ರಾಜಕೀಯ ಪಕ್ಷಗಳಿವೆ.ಕೆಲವು ಪಕ್ಷಗಳು ಜಾತಿ ಆಧಾರಿತವಾದರೆ,ಕೆಲವು ಕೋಮು ಆಧಾರಿತ ಪಕ್ಷಗಳಾಗಿವೆ.ಕೆಲವು ಕುಟುಂಬ ಆಧಾರಿತವಾದರೆ ಇನ್ನು ಕೆಲವು ಸ್ವಪ್ರತಿಷ್ಠೆಗಾಗಿ ಹುಟ್ಟಿಕೊಂಡ ಪಕ್ಷಗಳಾಗಿವೆ.
ಹೀಗೆ ಹಲವು ಕಾರಣಗಳಿಗಾಗಿ ಹುಟ್ಟಿಕೊಂಡ ಪಕ್ಷಗಳಿಗೆ ದೇಶದ ಅಭಿವೃದ್ಧಿ, ಜನಸಾಮನ್ಯರ ಸಮಸ್ಯೆ ಗಳು ಮುಖ್ಯವಾಗಿರಲಿಲ್ಲ.ಸ್ವಾತಂತ್ರ್ಯ ಸಿಕ್ಕಿ ಏಳು ದಶಕಗಳು ಕಳೆದರೂ ಬಡತನ,ನಿರುದ್ಯೋಗ, ಕೆಲವರ್ಗದವರ ಮೇಲೆ ದೌರ್ಜನ್ಯ, ಹೀಗೆ ಹಲವಾರು ಸಮಸ್ಯೆ ಗಳು ಇನ್ನೂ ಕಾಡುತ್ತಿವೆ, ಕೇವಲ ಕೈ ಬದಲಾವಣೆ ಆಗಿದೆ ಹೊರತು ಆಡಳಿತ ಶೈಲಿ ಬದಲಾವಣೆ ಆಗಿಲ್ಲ . ಇವೆಲ್ಲವುಗಳಿಂದ ಜನರಿಗೆ ಬೇಸರ ಹುಟ್ಟಿದೆ.

ಜನಸಾಮಾನ್ಯರಿಗೆ ರಾಜಕೀಯ ಪಕ್ಷಗಳೆಂದರೆ ಒಂದು ತರಹ ಅಲರ್ಜಿಯಾಗತೊಡಗಿದೆ.ಇಂತಹ ಸಂಧರ್ಭದಲ್ಲಿ, ರಾಜಕೀಯದಲ್ಲಿ ಮೌಲ್ಯ ದೊಂದಿಗೆ, ಭಾರತದ ಆರು ಸಾವಿರ ಗ್ರಾಮಗಳನ್ನು ಕಲ್ಯಾಣ ಗ್ರಾಮ ಮಾಡುವ ಕನಸಿನೊಂದಿಗೆ ಹುಟ್ಟಿಕೊಂಡ ಪಕ್ಷ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಗಿದೆ.
ಈಗಾಗಲೇ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವೆಲ್ಫೇರ್ ಪಕ್ಷದಿಂದ ಆರಿಸಿ ಬಂದಿರುವ ಸದಸ್ಯರು ತಮ್ಮ ವಾರ್ಡ್ ಗಳ್ಳನ್ನು ಮಾದರಿ ವಾರ್ಡಗಳನ್ನಾಗಿ ಮಾಡುವ ಕೆಲಸದಲ್ಲಿ ತೊಡಗಿರುವುದು ವಾಸ್ತವವಾಗಿದೆ.

ಈ ಪಕ್ಷದ ಸದಸ್ಯತ್ವ ಈ ಕೆಳಕಂಡ ನಂಬರ್ 9482874767 ಗೆ ಮಿಸ್ಡ್‌ ಕಾಲ್‌ ಮಾಡುವ ಮೂಲಕ ನೊಂದಾಯಿಸಬಹುದು.
ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯ ವಹಿಸಲಿದ್ದಾರೆ.

ಆದ್ದರಿಂದ ವೆಲ್ಫೇರ್ ಪಕ್ಷದ ಕಲ್ಯಾಣ ಭಾರತದ(Welfare state) ಕನಸನ್ನು ನನಸಾಗಿಲು ಈ ಪಕ್ಷವನ್ನು ಬೆಂಬಲಿಸಿ ಇದರ ಸದಸ್ಯರಾಗಬೇಕೆಂದು ಅವರು ಮನವಿ ಮಾಡಿದರು
.
ಈ ಅಭಿಯಾನದ ಸಂದರ್ಭದಲ್ಲಿ ಪೋಸ್ಟರ್, ಸ್ಟಿಕ್ಕರ್ ದಸ್ಯತ್ವದ ಕಾರ್ಡ್, ಕರಪತ್ರ ಬ್ಯಾನರ್ಸ್, ಆಡಿಯೋ ವಿಡಿಯೋಗಳನ್ನ ಬಳಸುವ ಮೂಲಕ ಅಭಿಯಾನದ ಪರಿಚಯ ಮಾಡಲಾಗುವುದು
ಸಾರ್ವಜನಿಕ ಸಭೆ ಸಮಾರಂಭ ವಿವಿಧ ನಗರದ ಪ್ರಮುಖ ರಸ್ತೆಗಳಲ್ಲಿ ಸದಸ್ಯತ್ವ ನೋಂದಣಿ ಕೌಂಟರ್ ಗಳನ್ನು ವ್ಯವಸ್ಥೆ ಮಾಡಲಾಗುವುದು. ಆನ್ಲೈನ್ ಸದಸ್ಯತ್ವ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಸಹ ಮಾಡಲಾಗುವುದು ಮಿಸ್ಡ್ ಕಾಲ್ ಹಾಗೂ ವಾಟ್ಸಪ್ ಮೂಲಕ ಸದಸ್ಯತ್ವ ನೋಂದಣಿ ಮಾಡಿಕೊಳ್ಳಲಾಗುವುದು.ಗುಂಪು ಸಭೆಗಳು ಕಾರ್ನರ್ ಮೀಟಿಂಗ್ ಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನದ ಪರಿಚಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ: ಜಿಲ್ಲಾ ಅಧ್ಯಕ್ಷ ಫರೀದ್ ಉಮರಿ. ಉಪಾಧ್ಯಕ್ಷ ಅಬ್ದುಲ್ ಗನಿ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಲಿಯಾಸ್, ಖಜಾಂಚಿ, ಹಸನ್ ಉದ್ದಿನ್ ಮಾನ್ವಿ ತಾಲೂಕ ಅಧ್ಯಕ್ಷರಾದ ಬಾಬಾ ಹುಸೇನ್ ಪದಾಧಿಕಾರಿಗಳಾದ ನಾಸಿರ್ ಅಲಿ, ಅಬ್ದುಲ್ ಲತೀಫ್ ಇರ್ಫಾನ್ ಮನಿಯರ್,ಅಲೀಮ್ ಖಾನ್, ಅಬ್ದುಲ್ ಸಮದ್, ಸಿಂಧನೂರಿನ ಮಸೂದ್, ಖಾನ್ ಸಾಬ್, ಮತ್ತು ಇತರ್ ಪದಾಧಿಕಾರಿಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here