ನೀರಾವರಿ ಕಳುವು ಮಾಫಿಯಾಗಳಿಗೆ ಮಣಿದ ಸರ್ಕಾರ; ವೀರನಗೌಡ ರೈತ ಮುಖಂಡರು

ರೈತ ಪರ ಕೆಲಸ ಮಾಡುವ ಅಧಿಕಾರಿಗಳನ್ನು ಬದಲಾಯಿಸಿರುವುದು ಖಂಡನೀಯ

0
79

 ರೈತ ಪರ ಇರುವ ಅಧಿಕಾರಿಗಳನ್ನು ವರ್ಗಾಯಿಸುವ ಸರ್ಕಾರ ಬಿಜೆಪಿ ಸರ್ಕಾರ; ವೀರನಗೌಡ 

 ಮಾನವಿ : ತುಂಗಭದ್ರಾ ಟಿಎಲ್ ಬಿಸಿ ನಾಲೆಯಿಂದ ಜಿಲ್ಲೆಯ ಕೃಷಿ ಭೂಮಿಗೆ ತಲುಪುವ ನೀರು ಸಮಯಕ್ಕೆ ಸರಿಯಾಗಿ ತಲುಪದೇ ಇರುವ ಕಾರಣ ಅದೆಷ್ಟೊ ರೈತರು ಸಾಲಸೂಲ ಮಾಡಿ ಹೊಲಗಳಲ್ಲಿ ಬೆಳೆ ಬೆಳೆಸಿದ್ದಾರೆ ಆದರೆ ಸಮಯಕ್ಕೆ ಸರಿಯಾಗಿ ನೀರು ಸಿಗದೇ ಇರುವುದರಿಂದ ಬೆಳೆ ನಾಶವಾಗಲು ಸಿದ್ಧವಿದೆ ಆದಕಾರಣ ಭದ್ರಾ ಯೋಜನೆ ರೈತರ ಪಾಲಿಗೆ ನಷ್ಟ ಉಂಟುಮಾಡುವ ಯೋಜನೆಯಾಗಿ ಪರಿವರ್ತಿಸಿದೆ.

ಇಂದು ರೈತರು ಸಾಲವನ್ನು ಮಾಡಿದ ಸಾಲ ತೀರಿಸಲು ತನ್ನ ಆಸ್ತಿಗಳನ್ನು ಮಾರಾಟ ಮಾಡಿ ಸಾಲವನ್ನು ತೀರಿಸಲು ಪ್ರಯತ್ನ ಮಾಡಿದರೂ ಸಹ ಸಾಲ ತೀರಿಸಲಾಗದೆ ಅದೆಷ್ಟೋ ರೈತರು ಆತ್ಮಹತ್ಯೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ದಿನಾಂಕ 11-8-2021 ರಾತ್ರಿ 8:15 ರಿಂದ ಹತ್ತು ಮೂವತ್ತರ ವರೆಗೆ ಸುದೀರ್ಘ ಚರ್ಚೆ ನಡೆಸಿ ಇದಕ್ಕೆ ಪರಿಹಾರ ನೀಡಲು ಒತ್ತಾಯಿಸಿದಾಗ ಇದಕ್ಕೆ ಪರಿಹಾರ ನೀಡಲು ಮಾನ್ಯ ಉಸ್ತುವಾರಿ ಸಚಿವರು ಮೂರು ತಿಂಗಳು ಕಾಲಾವಕಾಶವನ್ನು ನಿಗದಿಪಡಿಸಿದ್ದರು ಆದರೆ ನೀರಾವರಿ ಕಳುವು ಮಾಫಿಯಾಗಳು ಸರ್ಕಾರದ ಮೇಲೆ ಒತ್ತಡ ತಂದು ಉಸ್ತುವಾರಿ ಸಚಿವರನ್ನೇ ಬದಲಾಯಿಸುವಂತೆ ಮಾಡಿದರು ನಂತರ ಈಗ ರೈತರಪರ ಕೆಲಸ ಮಾಡುತ್ತಿರುವ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ

ರೈತ ಪರ ಕೆಲಸ ಮಾಡುವ ಅಧಿಕಾರಿಗಳನ್ನು ಬದಲಾಯಿಸಿರುವುದು ಖಂಡನೀಯ ಕಾರಣ ಈ ಭಾಗದ ಎಲ್ಲಾ ರೈತ ಮುಖಂಡರು ವಿವಿಧ ಸಂಘ ಸಂಸ್ಥೆಯ ಮುಖ್ಯಸ್ಥರು ವಿವಿಧ ಜನಪ್ರತಿನಿಧಿಗಳು ಒಗ್ಗೂಡಿ ರೈತ ಪರ ಕೆಲಸ ಮಾಡುವ ಅಧಿಕಾರಿಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ನಮ್ಮ ದಕ್ಷ ಜಿಲ್ಲಾ ಅಧಿಕಾರಿಗಳನ್ನು ವಾಪಾಸು ಕರೆಸಿಕೊಳ್ಳಬೇಕು ಇಲ್ಲದಿದ್ದಲ್ಲಿ ನೀರಾವರಿ ಕಳುವು ಮಾಫಿಯಾ ಗಳನ್ನು ಸಹಕರಿಸಿದ ಹಾಗೆ ಆಗುತ್ತದೆ ಎಂದು ರೈತ ಮುಖಂಡ ವೀರನಗೌಡ ಅವರು ಪತ್ರಿಕಾ ಗೋಷ್ಠಿ ನಡೆಸುವ ಮೂಲಕ ಸರಕಾರದ ಕ್ರಮಕ್ಕೆ ವಿರೋಧಿ ಸಿದರು

 

LEAVE A REPLY

Please enter your comment!
Please enter your name here