ನಾಳೆ ಮಾರ್ಚ್ 4 ರಿಂದ ದ್ವಿತೀಯ ಪಿಯು ಪರೀಕ್ಷೆಗಳು

0
267

ರಾಯಚೂರು,ಮಾ.03.- ಇದೇ ಮಾರ್ಚ್ 4 ರಿಂದ 23 ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗಲಿದ್ದು, ಜಿಲ್ಲೆಯ 36 ಕೇಂದ್ರಗಳಲ್ಲಿ ಒಟ್ಟು 20,354 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ದ್ವಿತೀಯ ಪಿಯು ಪರೀಕ್ಷೆಯನ್ನು ಸುಸೂತ್ರವಾಗಿ ನಿರ್ವಹಿಸಲು ಜಿಲ್ಲಾಡಳಿತ ಎಲ್ಲ ಅಗತ್ಯ ಸಿದ್ದತೆ ಮಾಡಿಕೊಂಡಿದೆ. ಈಗಾಗಲೇ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ವಿತರಿಸಲಾಗಿದೆ. ಜಿಲ್ಲೆಯಾದ್ಯಂತ ಈ ಬಾರಿ ದ್ವಿತೀಯ ಪಿಯು ಪರೀಕ್ಷೆ ಬರೆಯಲು ಸುಮಾರು 20,354 ವಿದ್ಯಾರ್ಥಿಗಳು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 9065 ವಿದ್ಯಾರ್ಥಿನಿಯರು, 11,289 ವಿದ್ಯಾರ್ಥಿಗಳು ಇದ್ದಾರೆ. 4673 ಪುನಃ ಪರೀಕ್ಷೆ ಬರೆಯಲಿದ್ದಾರೆ. 14,651 ಹೊಸ ವಿದ್ಯಾರ್ಥಿಗಳು, 1013 ಖಾಸಗಿ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ.

ಪರೀಕ್ಷೆ ಕೇಂದ್ರಗಳ ವಿವಿರ ಇಂತಿದೆ:
ರಾಯಚೂರು ತಾಲೂಕು 12, ಮಾನ್ವಿ 04, ಸಿರವಾರ 01, ದೇವದುರ್ಗ 03, ಲಿಂಗಸೂಗೂರು 04, ಮುದಗಲ್ 01, ಹಟ್ಟಿ 01, ಮಸ್ಕಿ 02 ಮತ್ತು ಸಿಂಧನೂರು 08 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ.
ಜಿಲ್ಲೆಯಾದ್ಯಂತ ಈಗಾಗಲೇ 144 ಕಲಂ ನಿಷೇಧಿಸಲಾಗಿದೆ. ಪರೀಕ್ಷೆ ಕೇಂದ್ರದ ಸುತ್ತಮುತ್ತಲಿನ ಪ್ರದೇಶದ 100 ಮೀಟರ್ ಅಂತರದಲ್ಲಿ ಯಾವುದೇ ಜೆರಾಕ್ಸ್, ಕಂಪ್ಯೂಟರ್ ಅಂಗಡಿ ಮುಂಗಟುಗಳನ್ನು ತೆರಯಬಾರದು. ನಕಲುಗೆ ಅವಕಾಶ ಮಾಡಿಕೊಡದಂತೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸದಾಶಿವಪ್ಪ ಅವರು ತಿಳಿಸಿದ್ದಾರೆ.
ಪರೀಕ್ಷೆ ನಡೆಯುವ ವಿಷಯಗಳು:
2020ರ ಮಾರ್ಚ್ 04 ಬುಧವಾರದಂದು ಬೆಳಿಗ್ಗೆ 10.15 ರಿಂದ 01.30 ರವರೆಗೆ ಇತಿಹಾಸ, ಭೌತಶಾಸ್ತ್ರ, ಸಾಮಾನ್ಯ ಗಣಿತ, ಮಾರ್ಚ್ 05 ಗುರುವಾರದಂದು ಬೆಳಿಗ್ಗೆ 10.15 ರಿಂದ 1.30ರವರೆಗೆ ತಮಿಳು, ತೆಲುಗು, ಮಲಿಯಾಲಂ, ಮರಾಠಿ, ಅರೇಬಿಕ್, ಫ್ರೆಂಚ್, ಮಾರ್ಚ್ 06 ಶುಕ್ರವಾರಂದು ಬೆಳಿಗ್ಗೆ 10.15 ರಿಂದ 1.30 ರವರೆಗೆ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮಾರ್ಚ್ 07 ಶನಿವಾರದಂದು ಬೆಳಿಗ್ಗೆ 10.15 ರಿಂದ 1.30 ರವರೆಗೆ ವ್ಯವಹಾರ ಅಧ್ಯಯನ, ಸಮಾಜ ಶಾಸ್ತ್ರ, ರಾಸಾಯನಿಕಶಾಸ್ತ್ರ, ಮಾರ್ಚ್ 9 ಸೋಮವಾರದಂದು ಬೆಳಿಗ್ಗೆ 10.15 ರಿಂದ 1.30 ರವರೆಗೆ ತಂತ್ರಜ್ಞಾನ, ರೆಟೆಲ್, ಆಟೋಮೊಬೈಲ್, ಹೆಲ್ತ್ಕೇರ್, ಬ್ಯೂಟಿ ಮತ್ತು ವೆಲ್ನೇಸ್, ಮಾರ್ಚ್ 10 ಬೆಳಿಗ್ಗೆ 10.15 ರಿಂದ 1.30ರವರೆಗೆ ಉರ್ದು, ಮಾರ್ಚ್ 11 ಬುಧವಾರದಂದು ಬೆಳಿಗ್ಗೆ 10.15 ರಿಂದ 1.30 ರವರೆಗೆ ಐಚ್ಚಿಕ ಕನ್ನಡ, ಲೆಕ್ಕಶಾಸ್ತ್ರ, ಗಣಿತ, ಮಾರ್ಚ್ 12 ಗುರುವಾರ ಬೆಳಿಗ್ಗೆ 10.15 ರಿಂದ 1.30 ರವರೆಗೆ ಭೂಗೋಳಶಾಸ್ತ್ರ, ಮಾರ್ಚ್ 13 ಶುಕ್ರವಾರದಂದು ಬೆಳಿಗ್ಗೆ 1.15 ರಿಂದ 1.0 ರವರೆಗೆ ಶಿಕ್ಷಣಶಾಸ್ತ್ರ, ಮಾರ್ಚ್ 14 ಶನಿವಾರ ದಂದು ಬೆಳಿಗ್ಗೆ 10.15 ರಿಂದ 1.30 ರವರೆಗೆ ಮನೋವೈಜ್ಞಾನಿಕ ಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಮಾರ್ಚ್ 16 ಸೋಮವಾರದಂದು ಬೆಳಿಗ್ಗೆ 10.15 ರಿಂದ 1.30 ರವರೆಗೆ ತರ್ಕಶಾಸ್ತ್ರ, ಪ್ರಾಣಿಶಾಸ್ತ್ರ, ಹೋಮ್‌ಸೈನ್ಸ್, ಮಾರ್ಚ್ 17 ಮಂಗಳವಾರದಂದು ಬೆಳಿಗ್ಗೆ 10.15 ರಿಂದ 1.3 ರವರೆಗೆ ಅರ್ಥಶಾಸ್ತ್ರ, ಜೀವಶಾಸ್ತ್ರ, ಮಾರ್ಚ್ 18 ಬುಧವಾರದಂದು ಬೆಳಿಗ್ಗೆ 10.15 ರಿಂದ 1.30 ರವರೆಗೆ ಹಿಂದಿ, ಮಾರ್ಚ್ 19 ಗುರುವಾರ ಬೆಳಿಗ್ಗೆ 10.15 ರಿಂದ 1.30 ರವರೆಗೆ ಕನ್ನಡ, ಮಾರ್ಚ್ 20 ಶುಕ್ರವಾರದಂದು ಬೆಳಿಗ್ಗೆ 10.15 ರಿಂದ 1.30 ರವರೆಗೆ ಸಂಸ್ಕೃತ್, ಮಾರ್ಚ್ 21 ಶನಿವಾರದಂದು ಬೆಳಿಗ್ಗೆ 10.15 ರಿಂದ 1.30 ರವರೆಗೆ ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಮಾರ್ಚ್ 23 ಸೋಮವಾರದಂದು ಬೆಳಿಗ್ಗೆ 10.15 ರಿಂದ 1.30 ರವರೆಗೆ ಇಂಗ್ಲೀಷ್ ವಿಷಯಗಳ ಕುರಿತು ಪರೀಕ್ಷೆ ನಡೆಯುವುದು.

LEAVE A REPLY

Please enter your comment!
Please enter your name here