ಗುರುಕುಲ ವಿದ್ಯಾಕೇಂದ್ರ ಶಾಲೆಯಲ್ಲಿ ಸ್ವಾಮಿವಿವೇಕಾನಂದರ ಜಯಂತಿ: ಶಾಲೆ ಮಟ್ಟದಲ್ಲಿ ಮಕ್ಕಳಿಗೆ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸುವದು ಅಗತ್ಯ: ಶ್ರೀಧರರಾವ್ ದೇಸಾಯಿ

0
88

ಮಾನ್ವಿ: ಶಾಲೆ ಮಟ್ಟದಲ್ಲಿಯೇ ಮಕ್ಕಳನ್ನು ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಅವರಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸುವದು ತುಂಬ ಅಗತ್ಯವಾಗಿದೆ ಎಂದು ಕುಂಬರವಾಡಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಶ್ರೀಧರರಾವ್ ದೇಸಾಯಿ ಹೇಳಿದರು.
ಮಂಗಳವಾರ ಪಟ್ಟಣದ ಗುರುಕುಲ ವಿದ್ಯಾ ಕೇಂದ್ರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾಮಿವಿವೇಕಾನಂದರ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಅಂತರ ಶಾಲೆ ಮಟ್ಟದ ವಿವಿಧ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿ ಮಾತನಾಡಿದ ಅವರು, ಮಕ್ಕಳಲ್ಲಿ ಶಾಲೆ ಹಂತದಲ್ಲಿಯೇ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸುವ ಮೂಲಕ ಅವರಲ್ಲಿ ಸೋಲು ಗೆಲುವು ಸಹಜ ಒಂದೇ ನಾಣ್ಯದ ಎರಡು ಮುಖಗಳಂತೆ ನಾವು ಸ್ಪರ್ಧೆ ಮಾಡುವದು ಪ್ರಮುಖವಾದದ್ದು ಎನ್ನುವದನ್ನು ಕಲಿಸಬೇಕಾಗಿದೆ.
ವಿದ್ಯಾರ್ಥಿ ದಿಸೆಯಿಂದಲೇ ಮಕ್ಕಳಲ್ಲಿ ಸಾಹಿತ್ಯ, ಹಾಡು, ಭಾಷಣ, ಪ್ರಬಂಧ, ಅಶು ಭಾಷಣ ಇತ್ಯಾದಿಗಳಲ್ಲಿ ಆಸಕ್ತಿಯನ್ನು ಮೂಡಿಸಬೇಕಿದೆ. ಮಕ್ಕಳು ಮೊದಲು ಪುಸ್ತಕ ಪ್ರೇಮಿಗಳಾಗಬೇಕು ಕಥೆ,ಕಾದಂಬರಿ, ಮಹಾನೀಯರ ಇತಿಹಾಸವನ್ನು ಓದಿ ತಿಳಿದುಕೊಳ್ಳುವದು ತುಂಬ ಅಗತ್ಯವಾಗಿದೆ ಈ ನಿಟ್ಟಿನಲ್ಲಿ ಇಂದು ಗುರುಕುಲ ವಿದ್ಯಾಕೇಂದ್ರ ಶಾಲೆ ಅಂತರ ಶಾಲೆ ಮಟ್ಟದ ವಿದ್ಯಾರ್ಥಿಗಳ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿರುವದು ಸ್ವಾಗತರ್ಹ ಎಂದರು.

LEAVE A REPLY

Please enter your comment!
Please enter your name here