ಮುಖ್ಯ ಅಧಿಕಾರಿಗಳ ಕಾರ್ಯ ವೈಖರಿಗೆ ಬೇಸತ್ತು ರಾಜೀನಾಮೆ ಕೊಟ್ಟ ಪುರಸಭೆ ಹಿರಿಯ ಸದಸ್ಯ ಸೊಲಿಲ್ಲದ ಸರದಾರ ರಾಜಾ ಮಹೇಂದ್ರ ನಾಯಕ್

0
600

ಮಾನವಿ, 24 ಫೆ- ನಗರದ ವಾರ್ಡ್ 19ರ ಪುರಸಭೆ ಸದಸ್ಯ ಶ್ರೀ ರಾಜಾ ಮಹೇಂದ್ರ ನಾಯಕ ತಂದೆ ರಾಜಾ ಅಂಬಣ್ಣ ನಾಯಕ ಇವರು ಜಿಲ್ಲಾಧಿಕಾರಿಗಳಿಗೆ ರಾಜೀನಾಮೆ ಪತ್ರ ಕೊಡುವ ಮೂಲಕ ತನ್ನ ಪುರಸಭೆ ಸದಸ್ಯತ್ವಕ್ಕೆ ರಾಜಿನಾಮೆ ಕೊಟ್ಟಿದ್ದಾರೆ.

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಾನವಿ ನಗರದ 19 ನೇ ವಾರ್ಡಿನ ಪುರಸಭೆ ಸದಸ್ಯ ಶ್ರೀ ರಾಜಾ ಮಹೇಂದ್ರ ನಾಯಕ ತಂದೆ ರಾಜಾ ಅಂಬಣ್ಣ ನಾಯಕ ಇವರು ಸೊಮವಾರ ರಾಯಚೂರಿನಲ್ಲಿ ಅಪರ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಜೆಲ್ಲಾಧಿಕಾರಿಗಳಿಗೆ ಬರೆದ ರಾಜಿನಾಮೆ ಪತ್ರ ಜಿಲ್ಲಾಧಿಕಾರಿಗಳ ಕಾರ್ಯಾಲಯದ ನಗಾರಾಭಿವೃದ್ದಿ ಕೊಶದ ಯೊಜನಾಧಿಕಾರಿಗೆ  ಕೊಡುವ ಮೂಲಕ ತನ್ನ ಪುರಸಭೆ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ

 

ಕಾರಣ : ಮುಖ್ಯಾಧಿಕಾರಿಗಳಾದ ಶ್ರೀಮತಿ ವಿಜಯಲಕ್ಷ್ಮಿ ಹಾಗೂ ಕಿರಿಯ ಅಭಿಯಂತರರಾದ ಶರಣಪ್ಪ ಕೊಳೂರು ಇವರ ಕಾರ್ಯ ವೈಖರಿ ಮತ್ತು ವಾರ್ಡಿನ ಅಭಿವೃದ್ದಿಯಲ್ಲಿ ತೊರುತ್ತಿರುವ ನಿರ್ಲಕ್ಷದಿಂದ ಬೇಸತ್ತು ನಾನು ರಾಜಿನಾಮೆ ನೀಡುತ್ತಿದ್ದೇನೆ ಎಂದು ರಾಜಾ ಮಹೀಂದ್ರ ನಾಯಕ ಹೇಳಿರುವುದು ಆಶ್ಚರ್ಯ ಮೂಡಿಸಿದೆ.

ಸೊಲಿಲ್ಲದ ಸರದಾರ ಮತ್ತು  ಹಿರಿಯ ಸದಸ್ಸ್ಯರೆಂದೇ ಹೆಸರವೈಸಿಯಾದ ಸದಸ್ಯ ಶ್ರೀ ರಾಜಾ ಮಹೆಂದ್ರ ನಾಯಕ ಇವರು ಕೇವಲ ಸಾಮಾನ್ಯ ಸದಸ್ಯರಲ್ಲ ಬದಲಾಗಿ ಹಾಲೀ ಶಾಸಕ ಶ್ರೀ ರಾಜಾ ವೆಂಕಟಪ್ಪ ನಾಕ್ ಇವರ ಸಹೊದರರೂ ಆಗಿದ್ದಾರೆ ಇಂತಹ ಬಲಿಷ್ಠ ಬಾಹುಬಲಿ ಸದಸ್ಯರಿಗೆ ಪುರಸಭೆಯ ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ ಮತ್ತು ಅವರ ವಾರ್ಡಿನ ಅಭಿವೃದ್ದಿಯಲ್ಲಿ ನಿರ್ಲಕ್ಷ ತೊರುವ ವಿಷಯ ನೊಡಿದರೆ ಸಾಮಾನ್ಯ ಸದಸ್ಸ್ಯರು ಮತ್ತು ವಿಶೇಷವಾಗಿ ಪಕ್ಷೇತರ ಸದಸ್ಯರ ಗತಿ ಏನಾಗಿರಬಹುದು ಎಂದು ಊಹಿಸಲು ಸಾಧ್ಯವಿಲ್ಲ ಎಂದು ಜನ ಮಾತಾಡುತ್ತಿರುವುದು ಕಂಡುಬಂದಿದೆ

ಪುರಸಭೆಯ ಇತರೇ ಸದಸ್ಸ್ಯರುಗಳಿಗೆ ಮತ್ತು ಪಟ್ಟಣದ ಸಾರ್ವಜನಿಕರಿಗೆ ಈ ಸುದ್ದಿ ತಿಳಿಯುತ್ತಿದ್ದಂತೆ ಪುರಸಭೆಯ ಮುಖ್ಯಧಿಕಾರಿ ಹಾಗೂ ಇತರೇ ಅಭಿಯಂತರರು, ಅಧಿಕಾರಿಗಳು ತೊರುತ್ತಿರುವ ವಿರ್ಲಕ್ಷದಿಂದ ಎಲ್ಲಾ ಸದಸ್ಯರಿಗೂ ತೊಂದರೆಯಾಗಿರುವುದು ಬೆಳಕಿಗೆ ಬಂದಿದೆ.

ರಾಜಿನಾಮೆ ಕೊಡುವ ಹಾದಿಯಲ್ಲಿ

1) ಇತ್ತೀಚೆಗೆ ವಾರ್ಡ್ ನಂ 18 ರ ಸದಸ್ಯ ಹಾಗೂ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ಇಬ್ರಾಹೀಮ್ ಬಾಷ ಸಾಬ್ (ಸುಪ್ರೀಮ್ ಟೇಲರ್) ಪುರಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು ಆದರೇ ಶಾಸಕರು ಮತ್ತು ಪಕ್ಷದ ಮುಖಂಡರುಗಳು ಸಮಜಾಯಿಶಿ ಕೊಟ್ಟಿದ್ದರಿಂದ ಹಿಂದಕ್ಕೆ ಸರಿದರು ಎಂದು ಬಲ್ಲ ಮೂಲಗಳು ತಿಳಿಸಿವೆ.

2) ಇನ್ನೂ ಕಳೆದ ಬೇಸಿಗೆಯಲ್ಲಿ ಸಾರ್ವಜನಿಕಿರಿಗೆ ಕುಡಿಯುವ ನೀರಿನ ತೊಂದರೆ ಇದ್ದುದ್ದರಿಂದ ಪುರಸಭೆಯಿಂದ ಸಾವುದೇ ಸಹಕಾರ ಸಿಗದೇ ಇದ್ದ ಕಾರಣ ತನ್ನ ಸ್ವಂತ ದುಡ್ಡಿನಲ್ಲಿ ಲೆಕ್ಕವಿಲ್ಲದಷ್ಟು ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಹೈರಾಣಿಯಾಗಿರುವ ವಾರ್ಡ್ ನಂ 25ರ ಪುರಸಭೆ ಸದಸ್ಯ ಫರೀದ್ ಉಮರಿಯವರು ಸಹ ರಾಜೀನಾಮೆ ಕೊಡುವ ಬಗ್ಗೆ ವಿವಿಧ ಸದಸ್ಯರಲ್ಲಿ ಮತ್ತು ವಾರ್ಡಿನ ಮುಖಂಡರಲ್ಲಿ ಹೇಳಿಕೊಂಡಿರುವುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ

ಒತ್ತಾಯ: ಪುರಸಭೆಯ ಅಧಿಕಾರಿ ಶ್ರೀಮತಿ ವಿಜಯಲಕ್ಷ್ಮಿ ಮತ್ತು ಇತರೇ ಅಧಿಕಾರಿಗಳ ಕಾರ್ಯ ವೈಖರಿ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರು ಸಾಮೊಹಿಕ ರಾಜಿನಾಮೆ ಕೊಡುವ ಸಂದರ್ಭ ಬರುವ ಸಾಧ್ಯತೆಗಳು ಹೆಚ್ಚಾಗುತ್ತವೆ ಕಾರಣ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತು ಕೊಂಡು ವಿವಿಧ ವಾರ್ಡ್ ಗಳಲ್ಲಿ ಅಭಿವೃದ್ದಿಗೆ ಶ್ರಮಿಸಬೇಕು ಪುರಸಭೆ ಸದಸ್ಯರಿಗೆ ಪರಿಗಣಗೆ ತೆಗೆದುಕೊಂಡು ಸಹಕರಿಸಬೇಕೆಂದು ರಾಜ ಮಹೇಂದ್ರ ನಾಯಕ ಒತ್ತಾಯಿಸಿದ್ದಾರೆ

ಸದಸ್ಯರ ಗೊಳಾಟ: ಚುನಾಯಿತರಾಗಿ 18 ತಿಂಗಳು ಕಳೆದು ಹೊದರೂ ಇನ್ನೂ ಅಧಿಕಾರ ಸಿಗದೇ ಇರುವುದರಿಂದ ಪುರಸಭೆ ಸದಸ್ಯರು ದಿಕ್ಕು ತೊಚದೇ ಹೈರಾಣಾಗಿ ಮರುಭೂಮಿಯಲ್ಲಿ ತಿರುಗುವ ಒಂಟೆಗಳಂತೆ ಆಗಿದ್ದಾರೆಂದು ಸಾರ್ವಜನಿಕರಲ್ಲಿ ಕೇಳಿಬರುವ ಮಾತುಗಳು ಒಂದು ಕಡೆಯಾದರೆ ಸಾಲಸೂಲ ಮಾಡಿ ಬಡ್ಡಿಗೆ ಹಣ ತಂದು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಸದಸ್ಯರು ಈಗೈಗಲೇ ಮನೆಯಲ್ಲಿದ್ದ ಬಂಗಾರದ ಒಡವೆಗಳನ್ನ ಮಾರಾಟ ಮಾಡಿಕೊಂಡಿರುವುದು ಸುದ್ದಿಯಾಗಿದೆ ಇನ್ನು ಕೆಲವರು ಸಾಲ ಮತ್ತು ಬಡ್ಡಿ ಕಟ್ಟಲು ಆಗದೇ ಇರುವ ಕಾರಣ ತನ್ನ ಸ್ವಂತ ಮನೆಯನ್ನೇ ಮಾರಾಟ ಮಾಡುವ ಯೊಚನೆಯಲ್ಲಿದ್ದಾರೆಂದು ಹೆಸರು ಹೇಳಿಕೊಳ್ಳದ ಒಬ್ಬ ಸದಸ್ಯ ತನ್ನ ಗೊಳಾಟ ವ್ಯಕ್ತ ಪಡಿಸಿದ್ದಾರೆ.

ಬ್ರೊಕರ್ ಹಾವಳಿ ಪುರಸಭೆಯಲ್ಲಿ ವಿವಿಧ ಕೆಲಸ, ಖಾತಾ ನಕಲು ನೀಡುವಲ್ಲಿ ಮತ್ತು ಮುಟೇಶನ್ ಮಾಡಿಕೊಡುವುದರಲ್ಲಿ ಹಾಗೂ ಇತರೇ ಕಾರ್ಯಗಳಲ್ಲಿ ಮುಖ್ಯಧಿಕಾರಿಗಳು ಪುರಸಭೆ ಸದಸ್ಯರಿಗೆ ಗೌರವ ಕೊಡದೇ ಬ್ರೊಕರ್ ಗಳಿಗೆ ಹೆಚ್ಚಿನ ಮಾನ್ಯತೆ ನೀಡುತ್ತಿದ್ದಾರೆ ಎಂದು ಕೆಲ ಸದಸ್ಯರ ಅಭಿಪ್ರಾಯವಾಗಿದೆ.

 

 

LEAVE A REPLY

Please enter your comment!
Please enter your name here