ಭಾರತೀಯ ವೈದ್ಯಕೀಯ ಸಂಘದಿಂದ ಡೆಂಗ್ಯೂ ಕುರಿತು ಜಾಗೃತಿ

ಮಾನ್ವಿ ಪಟ್ಟಣದ ವಿವಿಧ ವಾರ್ಡಗಳಲ್ಲಿ ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಜನರಲ್ಲಿ ಜಾಗೃತಿ ಮೂಡಿಸಲಾಯಿತು

0
101

ಮಾನವಿ ಪಟ್ಟಣದ ವಿವಿಧ ವಾರ್ಡಗಳಲ್ಲಿ ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಜನರಲ್ಲಿ ಜಾಗೃತಿ ಮೂಡಿಸಲಾಯಿತು

ಮಾನ್ವಿ: ಡೆಂಗ್ಯೂ ಜ್ವರ ಈಡಿಸ್ ಈಜಿಪ್ತೆ ವೈರಸ್ ಸೋಂಕಿತ ಸೊಳ್ಳೆ ಕಚ್ಚುವುದರಿಂದ ಬರುವುದರಿಂದ ಜನರು ಸಾಮೂಹಿಕವಾಗಿ ಸೊಳ್ಳೆ ನಿಯಂತ್ರಣ ಕೈಗೊಳ್ಳಬೇಕು ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಾ.ಅಧ್ಯಕ್ಷರು ಹಾಗೂ ತಾ.ಆರೋಗ್ಯಧಿಕಾರಿ ಡಾ.ಚಂದ್ರಶೇಖರ್ ಸ್ವಾಮಿ ತಿಳಿಸಿದರು
ಪಟ್ಟಣದ ನಾರಾಯಣ ತೀರ್ಥ, ಮಾರುತಿ ನಗರ, ನಮಾಜಗೆರೆ ಗುಡ್ಡದಲ್ಲಿ, ಮನೆ ಮನೆಗೆ ತೆರಳಿ ಸಂಗ್ರಹಿಸಿರುವ ನೀರಿನಲ್ಲಿ ಲಾರ್ವ ಸಮೀಕ್ಷೆ ಕಾರ್ಯ ಕೈಗೊಂಡು ಮಾತನಾಡಿದ ಅವರು ಪಟ್ಟಣದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿರುವ ವಾರ್ಡ್ಗಳಲ್ಲಿ ಐ.ಎಂ.ಎ.ವತಿಯಿಂದ ಜನರಲ್ಲಿ ಜಾಗೃತಿ ಮೂಡಿಸಲಾಯಿತು
ಡೆಂಗ್ಯೂ ಜ್ವರ ತಡೆಗಟ್ಟುವ ಮುಂಜಾಗ್ರತ ಕ್ರಮಗಳ ಬಗ್ಗೆ ಮಾಹಿತಿ ಇರುವ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು ಐ.ಎಂ.ಎ.ತಾ.ಕಾರ್ಯದರ್ಶಿ ಡಾ.ಶರಣಪ್ಪ,ಡಾ.ಬಸವ ಪ್ರಭು ಪಾಟೀಲ್ ಬೆಟ್ಟದೂರು,ಡಾ.ಶರಣಪ್ಪ ಬಲ್ಲಟಗಿ. ಡಾ.ರೋಹಿಣಿ ಮಾನ್ವಿಕರ್, ಡಾ.ಸಜ್ಜದ್ ಹುಸೇನ್, ಡಾ.ಆಸಿಫ್, ಡಾ.ರಮ್ಯಾ ವೀರವಲ್ಲಿ, ಪುರಸಭೆ ಮುಖ್ಯಧಿಕಾರಿ ಜಗಧೀಶ ಭಂಡಾರಿ , ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ಮಹ್ಮದ್ ಬೇಗ್,ಅಜಗರ್, ಪುರಸಭೆ ಸಿಬ್ಬಂದಿ ಹನುಮೇಶ್,ರಹೆಮತ್ ಉನ್ನಿಸ ,ಬಸವರಾಜ್ ಹೊಸಮನಿ ಸೇರಿದಂತೆ ಇನ್ನಿತರರು ಇದ್ದರು

LEAVE A REPLY

Please enter your comment!
Please enter your name here