“ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಕೊಡಿ”ಆಂದೊಲನ. ಪೊಸ್ಟರ್ ಬಿಡುಗಡೆ.

ಸಿ ಎಫ್ಐ ನಿಂದ ಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಕೊಡಿ ಎಂದು ಆಂದೋಲನ

0
134

ಮಂಗಳೂರು :  ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರಾತಿ ವಿಳಂಬ ಮತ್ತು ಅವ್ಯವಸ್ಥೆ ಹಾಗೂ ಪಿಎಚ್ ಡಿ ಮತ್ತು ಎಂಫಿಲ್ ವಿದ್ಯಾರ್ಥಿಗಳ ಫೆಲೊಶಿಪ್ ಕಡಿತಗೊಳಿಸಿರುವುದರ ವಿರುದ್ಧ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾದ್ಯಂತ ‘ಸ್ಕಾಲರ್ ಶಿಪ್ ಕೊಡಿ’ ಆಂದೋಲನ ನಡೆಸುತ್ತಿದೆ ಎಂದು ಸಿಎಫ್ ಐ ಜಿಲ್ಲಾಧ್ಯಕ್ಷ ಹಸನ್ ಸಿರಾಜ್ ತಿಳಿಸಿದ್ದಾರೆ.

ಕ್ಯಾಂಪಸ್ ಫ್ರಂಟ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ನಡೆಸಲಾದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.

ರಾಜ್ಯ ವ್ಯಾಪಿ ನಡೆಯುತ್ತಿರುವ ಈ ಆಂದೋಲನದಲ್ಲಿ ಜಿಲ್ಲಾ ಸಮಿತಿಯೂ ಭಾಗವಹಿಸುತ್ತಿದೆ. ಸಮಸ್ಯೆ ಬಗೆಹರಿಯದಿದ್ದರೆ ಜಿಲ್ಲಾ ಅಲ್ಪಸಂಖ್ಯಾತ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಕ್ಯಾಂಪಸ್ ಫ್ರಂಟ್ ಮಂಗಳೂರು ಜಿಲ್ಲಾ ಕಾರ್ಯದರ್ಶಿ ಮುನೀರ್ ಬಜಾಲ್, ಕೋಶಾಧಿಕಾರಿ ಶರ್ಫುಧ್ಧೀನ್  ಬಜ್ಪೆ ಹಾಗು ಮಂಗಳೂರು ಪ್ರದೇಶ ಅಧ್ಯಕ್ಷೆ ಮೂರ್ಶಿದಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here