ಪುರಸಭೆ ಸಾಮಾನ್ಯಸಭೆ, ಸದಸ್ಯರ ಪ್ರಶ್ನೆಗಳ ಸುರಿಮಳೆಗೆ ಗಲಿಬಿಲಿಯಾದ ಮುಖ್ಯಾಧಿಕಾರಿ.

ಮಾನವಿ ಪುರಸಭೆಯನ್ನ ನಗರಸಭೆ ಗೇರಿಸಬೇಕು, ಶ್ರೀಮತಿ ಲಕ್ಷ್ಮಿದೇವಿ ಪುರಸಭೆ ಸದಸ್ಯರು ಮಾನವಿ.

0
226

ಮಾನವಿ.ಫೆ.25:- ಬುಧವಾರ ಮಾನವಿಯಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ  ವಿರೋಧ ಪಕ್ಷದ ನಾಯಕರಾಗಿ ಶ್ರೀ ರಾಜ ಮಹೇಂದ್ರ ನಾಯಕ ರವರು ಆಯ್ಕೆ ಯಾದರು.

ಮುಖ್ಯಅಧಿಕಾರಿ ಜಗದೀಶ್ ಭಂಡಾರಿ ಸಭೆಯ ಅಜೆಂಡಾ ಮತ್ತು ಹಿಂದಿನ ಸಭೆಯ ನಡವಳಿಕೆ ಓದುತ್ತಿದ್ದಂತೆ ಮಧ್ಯದಲ್ಲಿ ಪುರಸಭೆ ಸದಸ್ಯ ರಾಜಾ ಮಹೀಂದ್ರ ನಾಯಕ ಪ್ರಶ್ನೆ ಗಳ ಸುರಿಮಳೆ ಮಾಡುವುದರ ಮೂಲಕ ಇಡೀ ಸಭೆಯನ್ನು ಸ್ತಬ್ಧಗೊಳಿಸಿದರು. ಪುರಸಭೆ ಮುಖ್ಯಾಧಿಕಾರಿ ಪ್ರತಿಯೊಂದು ಪ್ರಶ್ನೆ ಗೆ ಸಮರ್ಥನೆ ಮಾಡಿಕೊಂಡು ಗಲಿಬಿಲಿ ಯಾದ ಹಾಗೆ ಕಂಡು ಬಂತು.

ನಂತರ ಸ್ಥಾಯಿಸಮಿತಿ ರಚನೆ ವಿಷಯ ಪ್ರಸ್ತಾಪ ಬಂದಾಗ ಸದಸ್ಯ ಅಮ್ಜದ್ ಖಾನ್ ಎದ್ದು ನಿಂತು ಸ್ಥಾಯಿ ಸಮಿತಿ ರಚನೆ ಅಗತ್ಯವಿಲ್ಲ ಅದನ್ನು ಮಂದಿನ ಸಭೆಗೆ ಮುಂದೂಡಿ ಈಗ ಮೂಲಭೂತ ಸಮಸ್ಯೆಗಳನ್ನ ಚರ್ಚೆ ಮಾಡಿ ಎಂದು ಒತ್ತಾಯಿಸಿದರು.

ಮಾಜಿ ಪುರಸಭೆ ಅಧ್ಯಕ್ಷೆ ಶ್ರೀಮತಿ ಲಕ್ಷ್ಮಿ ದೇವಿ ಎದ್ದು ನಿಂತು ಸಭೆಯ ಅಜೆಂಡಾ ದಲ್ಲಿ ಲಿಖಿತವಾದ ವಿಷಯಗಳ ಮೇಲೆ ಮೊದಲು ಚರ್ಚೆಮಾಡಿ ನಂತರ ಇತರೇ ವಿಷಗಳನ್ನು ಚರ್ಚಿಸಿರಿ ಲಿಖಿತ ವಿಷಯಗಳ ಪೈಕಿ ಸ್ಥಾಯಿಸಮಿತಿ ರಚಿಸಬೇಕೆಂದು ಒತ್ತಾಯಿಸಿದ ಕಾರಣ ಮತಚಲಾಯಿಸುವ ಮೂಲಕ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನ ಬೆಂಬಲಿತ 10 ಸದಸ್ಯರನ್ನು ಜೆಡಿಎಸ್ ನ ಒಬ್ಬ ಸದಸ್ಯನನ್ನು ಸೇರಿಸುವ ಮೂಲಕ ಒಟ್ಟು 11 ಸದಸ್ಯರನ್ನ ಸ್ಥಾಯಿ ಸಮಿತಿಗೆ ಆಯ್ಕೆ ಮಾಡಲಾಯಿತು. ಸ್ಥಾಯಿ ಸಮಿತಿಗೆ ಶ್ರೀ ಮತಿ ಲಕ್ಷ್ಮಿ ದೇವಿಯವರು 11 ಜನರ ಪಟ್ಟಿ ಕೊಟ್ಟರೆ ಜೆಡಿಎಸ್ ನ ಮಹೀಂದ್ರ ನಾಯಕ್ ರವರು ಸಮಾಜವಾದಿ ಪಕ್ಷದ ಹುಸೇನ್ ಬಾಷರವರನ್ನು ಸೇರಿಸಿಕೊಂಡು 05 ಜನರ ಪಟ್ಟಿ ಕೊಟ್ಟರು ಇವರುಗಳ ಪೈಕಿ ಶ್ರೀ ಮತಿ ಲಕ್ಷ್ಮಿ ದೇವಿಯವರು ಕೊಟ್ಟ ಪಟ್ಟಿ ಸದಸ್ಯರಿಂದ ಮತದಾನದ ಮೂಲಕ ಹಾಜರಿದ್ದ 22 ಸದಸ್ಯರ ಪೈಕಿ 16 ಮತಗಳ ಪಡೆಯುವುದರ ಮೂಲಕ ಬಹುಮತ ಸಾಬೀತು ಪಡಿಸಿತು.

ನಂತರ ಶ್ರೀಮತಿ ಲಕ್ಷ್ಮಿ ದೇವಿಯವರು ಪುರಸಭೆ ಯನ್ನು ಮೇಲ್ದರ್ಜೆಗೇರಿಸಿ ನಗರಸಭೆ ಮಾಡಬೇಕೆಂದು ಪ್ರಸ್ತಾವನೆ ಕೊಟ್ಟರು ಎಲ್ಲಾ ಸದಸ್ಯರು ಅನುಮೋದನೆ ಕೊಟ್ಟರು.

ಸದಸ್ಯರಾದ ಶರಣಬಸವ ಗವಿಗಟ್,ವೆಂಕಟೇಶ ನಾಯಕ, ಬಸವರಾಜ ಭಜಂತ್ರಿ ಮತ್ತು ಅಮ್ಜದ್ ಖಾನ್ ಸೇರಿ ಈದ್ಗಾ ಟ್ಯಾಂಕ್ ಎಂದಿಗೂ ತುಂಬುವುದಿಲ್ಲ ನಮ್ಮ ವಾರ್ಡ್ ಗಳಿಗೆ ಕುಡಿಯುವ ನೀರು ಅಡಚಣೆ ಹೆಚ್ಚಾಗಿದೆ ಕಾರಣ ಗಾರ್ಡನ್ ನಿಂದ ಈದ್ಗಾ ಟ್ಯಾಂಕ್ ಗೆ ಹೊಗುವ ರೈಸಿಂಗ್  ಪೈಪ್ ಗೆ ಕೊಟ್ಟಿರುವ ನಳಗಳನ್ನ ಮತ್ತು ಅನಧಿಕೃತ ಪೈಪ್ ಗಳ ಸಂಪರ್ಕವನ್ನ ಕಟ್ ಮಾಡಬೇಕೆಂದು ಒತ್ತಾಯಿಸಿದರು.

ಸದಸ್ಯರಾದ ಶರಣಪ್ಪ ಮೇದ, ಸೂರ್ಯ ಕುಮಾರಿ, ಸಂತೊಷಿ ಕುಮಾರಿ ಜಯಪ್ರಕಾಶ್ ಮತ್ತು ಹುಸೇನ್ ಬಾಷ ಮಾತನಾಡಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕುರಿತು ಒತ್ತಾಯಿಸಿದರು ವಿಶೇಷವಾಗಿ ಕಂಬಗಳಿಗೆ ಲೈಟ್ ಗಳ ವೆವಸ್ಥೆ ಮಾಡಲು ಆಗ್ರಹಿಸಿದರು.

ನಂತರ ಶ್ರೀಮತಿ ಲಕ್ಷ್ಮಿ ದೇವಿಯವರು ನ,ಯೊ,ಪ್ರಾಧಿಕಾರಕ್ಕೆ ನಾಮನಿರ್ದೇಶನ ಕ್ಕಾಗಿ ರಸದಲ್ಲಿ ರೇವಣ ಸಿದ್ಧಯ್ಯ ಸ್ವಾಮಿಯವರ ಹೆಸರು ಪ್ರಸ್ತಾಪಿಸಿದರು ಸರ್ವ ಸದಸ್ಯರು ಅನುಮೊದಿಸಿದರು.

ಕೊನೆಗೆ ವಾರ್ಡ್ ನಂ 25ರ ಸದಸ್ಯ ಫರೀದ್ ಉಮರಿ ಎದ್ದು ನಿಂತು ಮಾನವಿ ಪುರಸಭೆ ಯ ಹದ್ದುಬಂದಿಯಲ್ಲಿರುವ ನಗರದ ವಿವಿಧ ರಾಜ ಮಾರ್ಗಗಳನ್ನು ಒತ್ತುವರಿ ಮಾಡಲಾಗಿದೆ ಒತ್ತುವರಿ ಗಳನ್ನು ತೆರವುಗೊಳಿಸಿ ಆ ಮಾರ್ಗಗಳನ್ನು ರಾಜಕಾಲುವೆ ಗಳಿಗೆ ಅನುವು ಮಾಡಿಕೊಡಬೇಕು ಮತ್ತು ಪುರಸಭಗೆ ಸಂಬಂಧಿಸಿದ ಕಟ್ಟಡಗಳು ಮತ್ತು ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಬೇಕು ಮತ್ತು ಫುಟ್ಪಾತ್ ಅತಿಕ್ರಮಣ ಒತ್ತುವರಿಗಳನ್ನ ತೆರವುಗೊಳಿಸಿ ಪಾದಚಾರಿಗಳನ್ನ ತಿರುಗಾಡಲು ಅನುವು ಮಾಡಿಕೊಡಬೇಕು, ಬೀದಿ ನಾಯಿ ಮತ್ತು ಹಂದಿಗಳ ಹಾವಳಿ ತಪ್ಪಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಮತ್ತು ಮುಖ್ಯಅಧಿಕಾರಿಗಳು ಸದಸ್ರ ಪ್ರಶ್ನೆ ಗಳಿಗೆ  ಉತ್ತರಿಸಿ ಸಮಾಧಾನ ಪಡಿಸಿದರು.

LEAVE A REPLY

Please enter your comment!
Please enter your name here