ರಮಜಾನ್ ತಿಂಗಳ ವಿಶೇಷತೆಗಳು

ಪವಿತ್ರ ಕುರ್ ಆನ್ ಮತ್ತು ಪ್ರವಾದಿ ಮೊಹಮ್ಮದ್ (ಅ) ಅವರ ವಚನಗಳಲ್ಲಿ ಕಂಡು ಬಂದ ರಮಜಾನ್ ವಿಶೇಷತೆಗಳು

0
198

ಎಲ್ಲರಿಗೂ ರಮಜಾನ್ ತಿಂಗಳ ಶುಭಾಶಯಗಳು. ಪವಿತ್ರ ಕುರ್ ಆನ್ ಮತ್ತು ಪ್ರವಾದಿ ಮೊಹಮ್ಮದ್ (ಅ) ಅವರ ವಚನಗಳಲ್ಲಿ ಕಂಡು ಬಂದ ರಮಜಾನ್ ವಿಶೇಷತೆಗಳು. 

ರಮಜಾನ್ ತಿಂಗಳು ಪವಿತ್ರ ಮತ್ತು ಪಾವನ ತಿಂಗಳಾಗಿದೆ ಪ್ರವಾದಿ ಮುಹಮ್ಮದ್ (ಅ)ರವರು ಹೇಳಿದಂತೆ ರಮಜಾನ್ ತಿಂಗಳು ಯಾವಾಗ ಬರುತ್ತೊ ಆವಾಗ ಸ್ವರ್ಗ ದ ಬಾಗಿಲು ತೆರೆಯಲ್ಪಡುತ್ತವೆ, ನರಕದ ದ್ವಾರಗಳು ಮುಚ್ಚಲ್ಪಡುತ್ತವೆ ಪಿಶಾಚಿಗಳನ್ನ ಸೆರೆಹಿಡಿಯಲಾಗುತ್ತೆದೆ.

ಈ ತಿಂಗಳ ಮಹತ್ವದ ಕುರಿತು ಪವಿತ್ರ ಕುರಾನ್ ಹೀಗೆ ಹೇಳುತ್ತೆ ಪವಿತ್ರ ಗ್ರಂಥ ಕುರ್ ಆನ್ ಅವತೀರ್ಣಗೊಂಡ ತಿಂಗಳು ರಮಜಾನ್ ಆಗಿದೆ ಇದು ಮಾನವರಿಗೆ ಸಾಧ್ಯಂತ ಸನ್ಮಾರ್ಗ ತೋರುವ ಸ್ಪಷ್ಟವಾದ ನಿದರ್ಶನಗಳನ್ನೊಳಗೊಂಡ ಸತ್ಯ ಮತ್ತು ನಿತ್ಯದ ನಡುವೆ ಇರುವ ಅಂತರವನ್ನ ತೋರಿಸಿ ಕೊಡುವ ಗ್ರಂಥ ಕುರಾನ್ ಆಗಿದೆ.

ಪವಿತ್ರ ಗ್ರಂಥ ರಮಜಾನ್ ತಿಂಗಳಿನಲ್ಲಿ ಅವತೀರ್ಣಗೊಂಡಿರುವ ಕಾರಣ ಮಾನವರ ಪೈಕಿ ಯಾರಾದರೂ ತಮ್ಮ ಬದುಕಿನಲ್ಲಿ ಈ ತಿಂಗಳ ವನ್ನು ಪಡೆದರೆ ಸಂಪೂರ್ಣ ತಿಂಗಳು ಅಲ್ಲಾಹನಿಗೆ ಕೃತಜ್ಞತೆಗಳನ್ನು ಸಲ್ಲಿಸಲಿಕ್ಕಾಗಿ ಉಪವಾಸ ವೃತವನ್ನಾಚರಿಸಿರಿ ಎಂದು ಕರ್ತನು ಆನ್ ಹೇಳಿದೆ.

ಈ ತಿಂಗಳು ತನ್ನ ಜೊತೆ ಅಪಾರ ಪ್ರಮಾಣದ ಅನುಗ್ರಹಗಳನ್ನು ತರುತ್ತದೆ. ರಮಜಾನ್ ತಿಂಗಳಿನಲ್ಲಿ ಅಧಿಕವಾಗಿ ದಾನಧರ್ಮ ಮಾಡುವುದು ಉತ್ತಮ ಕಾರ್ಯ ವಾಗಿದೆ. ರಮಜಾನ್ ತಿಂಗಳಿನಲ್ಲಿ ಉಪವಾಸ ಆಚರಿಸಲು ಸ್ವತಃ ಅಲ್ಲಾಹು ಆಜ್ಞಾಪಿಸಿದ್ದಾನೆ “ಓ ಸತ್ಯ ವಿಶ್ವಾಸಿಗಳೇ ನಿಮ್ಮಲ್ಲಿ ಭಯಭಕ್ತಿ ಉಂಟಾಗಲೆಂದು ನಿಮ್ಮ ಪೂರ್ವಿಕರ ಮೇಲೆ ಕಡ್ಡಾಯ ಗೊಳಿಸಿದಂತೆ ನಿಮ್ಮ ಮೇಲೂ ಸಹ ಉಪವಾಸ ವೃತವನ್ನು ಕಡ್ಡಾಯ ಗೊಳಿಸಲಾಗಿದೆ.

” ಓ ಒಳಿತು ಮಾಡುವವನೇ ನೀನು ಒಳಿತು ಮಾಡುವಲ್ಲಿ ಇನ್ನೂ ಮುಂದೆ ಸಾಗು, ಓ ಕೆಡುಕು ಮಾಡುವವನೇ ಕೆಡುಕಿನಿಂದ ದೂರವಾಗು” ಎಂದು ಈ ತಿಂಗಳಿನಲ್ಲಿ ಒಬ್ಬ ದೇವದೂತ ಪ್ರತಿದಿನ ಕೂಗಿ ಹೇಳುತ್ತಾನೆ.

ರಮಜಾನ್ ಮಾಸದಲ್ಲಿ ಯಾರು ದೃಢವಾಗಿ ಸತ್ಯ ವಿಶ್ವಾಸ ಮತ್ತು ಆತ್ಮಾವಲೊಕನದೊಂದಿಗೆ ಕಡ್ಡಾಯ ಉಪವಾಸ ವೃತವನ್ನು ಆಚರಿಸುತ್ತಾರೊ ಅವರ ಗತಕಾಲದ ಪಾಪಗಳನ್ನು ಕ್ಷಮಿಸಲಾಗುವುದು. ಅದೇ ರೀತಿ

ರಮಜಾನ್ ಮಾಸದ ರಾತ್ರಿಯಲ್ಲಿ ದೃಢವಾದ ಸತ್ಯ ವಿಶ್ವಾಸ ಮತ್ತು ಆತ್ಮಾವಲೊಕನದೊಂದಿಗೆ ನಮಾಜ್ ಆರಾಧನೆ ನಿರ್ವಹಿಸುತ್ತಾನೊ ಅವನ ಗತಕಾಲದ ಪಾಪಗಳನ್ನು ಕ್ಷಮಿಸಲಾಗುವುದು.

ಉಪವಾಸ ವೃತದ ಪ್ರತಿಫಲ ಪರಲೋಕದಲ್ಲಿ ಸ್ವರ್ಗದ ಬಾಗಿಲುಗಳ ಪೈಕಿ ಒಂದು ವಿಶೇಶ ಬಾಗಿಲು ಬಾಬುರ್ರೈಯ್ಯಾನ್(ಉಪವಾಸ ಆಚರಿಸಿದವರಿಗಾಗಿ ವಿಶೇಷ ಬಾಗಿಲು) ಎಂದು ವ್ಯವಸ್ಥೆ ಇರುತ್ತದೆ.

ಈ ರಮಜಾನ್ ತಿಂಗಳಿನಲ್ಲಿ ನರಕದಿಂದ ಅಧಿಕ ಜನರನ್ನು ರಕ್ಷಿಸಲಾಗುತ್ತದೆ.

ರಮಜಾನ್ ತಿಂಗಳಿನಲ್ಲಿ ಮಾಡುವ ಉಮ್ರಾ ಎನ್ನುವ ಆರಾಧನೆ ಕಾಬಾ ಭವನಕ್ಕೆ ಮಾಡುವ ಹಜ್ ಯಾತ್ರೆ ಗೆ ಸಮಾನ ಎಂದು ಹೇಳಲಾಗಿದೆ.

ರಮಜಾನ್ ತಿಂಗಳಿನಲ್ಲಿ ಆಚರಿಸುವ ಉಪವಾಸದ ಪ್ರತಿಫಲವನ್ನು ಸ್ವತಃ ನಾನೇ ನೀಡುವೆ ಎಂದು ಅಲ್ಲಾಹು ಹೇಳಿದ್ದಾನೆ

ಮನುಷ್ಯನು ಮಾಡುವ ಪ್ರತಿಯೊಂದು ಪುಣ್ಯ ಕಾರ್ಯ ಕೇವಲ ಸ್ವತಃ ಅವನಿಗಾಗಿ ಇವೆ ಆದರೆ ಉಪವಾಸ ವೃತಾಚರಣೆ ಕೇವಲ ನನಗಾಗಿ ಇದೆ ನಾನು ನನ್ನ ಇಚ್ಛೆಯಂತೆ ಪ್ರತಿಫಲ ನೀಡುವೆ ಎಂದು ಪರಿಪಾಲಕ ಅಲ್ಲಾಹು ಹೇಳುತ್ತಾನೆ.

ರಮಜಾನ್ ತಿಂಗಳಿನಲ್ಲಿ ಒಂದು ಶ್ರೇಷ್ಠ ವಾದ ರಾತ್ರಿ ಇದೆ ಅದರಲ್ಲಿ ಮಾಡುವ ಆರಾಧನೆ ಸಾವಿರ ಮಾಸದ ಆರಾಧನೆ ಗಿಂತ ಶ್ರೇಷ್ಠ ವಾಗಿದ್ದು ಆ ರಾತ್ರಿಯಲ್ಲಿ ದೇವದೂತರ ಸರದಾರ ಜಿಬ್ರೀಲ್(ಅ) ಭೊಲೊಕಕ್ಕೆ ಆಗಮಿಸಿ ಇಡೀ ರಾತ್ರಿ ಜಗತ್ತನ್ನು ಸಂಚರಿಸಿ ಅನುಗ್ರಹಗಳನ್ನು ಹಂಚುತ್ತಾರೆ.

ಈ ತಿಂಗಳಲ್ಲಿ ಬಡವರಿಗೆ ದೀನ ದಲಿತರಿಗೆ ಊಟ ಮಾಡಿಸುವುದು ಬಟ್ಟೆ ಉಡಿಸುವುದು, ಧನಸಹಾಯ ಮಾಡುವುದು ಅತ್ಯಂತ ಉತ್ತಮ ಕಾರ್ಯ.

ರಮಜಾನ್ ತಿಂಗಳಿನಲ್ಲಿ ಮಾಡುವ ಒಂದು ಸತ್ಕರ್ಮದ ಪುಣ್ಯ ಪ್ರತಿಫಲ ಏಳು ನೂರು ಪಟ್ಟು ವೃದ್ಧಿಸಿ ಕೊಡಲಾಗುವುದು. ರಮಜಾನ್ ತಿಂಗಳು ಚಂದ್ರಿಮವನ್ನು ನೊಡಿ ಪ್ರಾರಂಭಿಸಲಾಗುತ್ತದೆ ಮತ್ತು ಚಂದ್ರಿಮವನ್ನು ನೊಡಿ ಉಪವಾಸದ ತಿಂಗಳು ಅಂತಿಮ ಗೊಳಿಸಲಾಗುತ್ತದೆ.

ರಮಜಾನ್ ತಿಂಗಳಿನಲ್ಲಿ ಪ್ರತಿ ರಾತ್ರಿ ವಿಶೇಷ ಸಾಮೊಹಿಕ ನಮಾಝ್ ತರಾವೀಹಃ ನಿರ್ವಹಿಸಲಾಗುತ್ತದೆ

ತಿಂಗಳಾದ್ಯಂತಕುರಾನ್ ನ 30 ಖಂಡಗಳ ಪೈಕಿ ಪ್ರತಿದಿನ ಒಂದು ಖಂಡವನ್ನು ಪಠಿಸುವ ಮೂಲಕ ಪೂರ್ಣ ಕುರಾನ್ ಅಧ್ಯಾಯ ಮಾಡಲಾಗುತ್ತದೆ.

ಬೆಳಗಿನ ಜಾವ ಎದ್ದು ಕೈಲಾದಷ್ಟು ಊಟಮಾಡಿ ಸಂಜೆ ವರೆಗೆ ಅನ್ನ ಪಾನೀಯ ಗಳಿಂದ ದೂರವಿದ್ದು ಸೂರ್ಯಾಸ್ತದ ನಂತರ ಉಪವಾಸ ಬಿಡಲಾಗುತ್ತದೆ.

ಲೇಖಕರು: ಮೌಲಾನಾ ಶೇಕ್ ಫರೀದ್ ಉಮರಿ.    ಅಧ್ಯಕ್ಷರು : ಇಖ್ರಾ ಫೌಂಡೇಶನ್ ಮಾನವಿ.

LEAVE A REPLY

Please enter your comment!
Please enter your name here