ಪುರಸಭೆ ಸ್ಥಾ.ಸ.ಅಧ್ಯಕ್ಷರಾಗಿ ಶೇಖ್ ಫರೀದ್‌ಉಮ್ರಿ ಆಯ್ಕೆ

ಪುರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಫರೀದ್ ಉಮರಿ ಅವಿರೋಧವಾಗಿ ಆಯ್ಕೆ.

0
31

ಮಾನ್ವಿ, ಃ ಮಾನ್ವಿ ಪುರಸಭೆ ಅಧ್ಯಕ್ಷೆ ಸುಫಿಯಾಬೇಗಂ ಅಧ್ಯಕ್ಷತೆಯಲ್ಲಿ ನಡೆದ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸದಸ್ಯ ಶೇಖ್ ಫರೀದ್ ಉಮ್ರಿ ಇವರಿಗೆ ೧೧ ಜನ ಸದಸ್ಯರು ಬೆಂಬಲ ಸೂಚಿಸಿದ್ದರಿಂದ ಪುರಸಭೆ ಸ್ಥಾಯಿ ಸಮಿತಿಗೆ ಶೇಖ್ ಫರೀದ್ ಉಮ್ರಿ ಅವಿರೋಧವಾಗಿ ಆಯ್ಕೆಗೊಂಡರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಮಾಡಲು ಕಾರಣೀಭೂತರಾದ ಮಾಜಿ ಎಂಎಲ್‌ಸಿ ಎನ್.ಎಸ್.ಬೋಸರಾಜ್, ಮಾಜಿಶಾಸಕ ಹಂಪಯ್ಯನಾಯಕ, ಮುಖಂಡರಾದ ರಾಜಾವಸಂತನಾಯಕ ಹಾಗೂ ಪುರಸಭೆ ಅಧ್ಯಕ್ಷೆ, ಉಪಾಧ್ಯಕ್ಷ, ಸದಸ್ಯರಿಗೆ ಮತ್ತು ಮುಖಂಡರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಈ ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ಕೆ.ಶುಕಮುನಿ, ಸಿಒ ಜಗದೀಶ ಭಂಡಾರಿ, ಸದಸ್ಯರಾದ ಲಕ್ಷ್ಮೀ ದೇವಿ ನಾಯಕ, ಸಾಬೀರ್‌ಪಾಷ, ರೇವಣ ಸಿದ್ದಯ್ಯಸ್ವಾಮಿ, ಆಮ್ಜದ್‌ಖಾನ್, ಶರಣಬಸವ, ಹುಸೇನ್‌ಭಾಷ, ಶ್ರೀ ಮತಿ ಸಂತೋಷಿ ಜಯಪ್ರಕಾಶ, ಶ್ರೀ ಮತಿ ಸೂರ್ಯಕುಮಾರಿ, ಭಾಷಸಾಬ್ ಸೇರಿದಂತೆ ಇನ್ನಿತರ ಸದಸ್ಯರಿದ್ದರು. ಅಭಿನಂದನೆ ಃ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶೇಖ್ ಫರೀದ್ ಉಮ್ರಿ ಇವರಿಗೆ ತಾ.ಪಂ.ಮಾಜಿ ಅಧ್ಯಕ್ಷ ರಾಜಾವಸಂತನಾಯಕ, ಜಿಲಾನಿ ಖುರೇಶಿ, ಜಯಪ್ರಕಾಶ, ಹನುಮಂತ ಭೋವಿ, ವಿರೇಶ, ಎಸ್.ಸುಬ್ರಮಣ್ಯಂ, ಮುಜಾಮಿಲ್‌ಖಾದ್ರಿ ಸೇರಿದಂತೆ ಪುರಸಭೆ ಅಧ್ಯಕ್ಷೆ, ಉಪಾಧ್ಯಕ್ಷ, ಸದಸ್ಯರು, ವೆಲ್ಪೇರ್ ಪಾರ್ಟಿ ಜಿಲ್ಲಾ ಕಾರ್ಯಾಧ್ಯಕ್ಷ ಅಬ್ದುಲ್ ಲತೀಫ್ ರಾಯಚೂರು. ಅಬ್ದುಲ್ ಹನಿ ರಾಯಚೂರು, ತಾಲೂಕ ಅಧ್ಯಕ್ಷ ಶೇಖ್ ಬಾಬಾ ಹುಸೇನ್, ಮುಖಂಡರಾದ ಎಂ.ಎ.ಎಚ್.ಮುಕೀಮ್, ನಾಸೀರ್‌ಅಲಿ ಸೇರಿದಂತೆ 25ನೇ ವಾರ್ಡಿನ ಯುವಕರು, ನಿವಾಸಿಗಳು ಮತ್ತುಇನ್ನಿತರರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here