11 ವಲಯ ಅಸಂಘಟಿತ ಕಾರ್ಮಿಕರಿಗೆ ಯೋಜನೆ ಸೌಲಭ್ಯ; ನಾಜಿಯಾ ಸುಲ್ತಾನ

ಕೇಂದ್ರ ಸರ್ಕಾರದ ಪಿಎಂಎಸ್‍ವೈಎಂ ಯೋಜನೆಯಡಿ 18 ರಿಂದ 40 ವರ್ಷ ವಯಸ್ಸಿನ ಅಸಂಘಟಿತ ಕಾರ್ಮಿಕರಾದ ಚಿಂದಿ ಹಾಯುವವರು, ಟೇಲರ್ಸ್, ಆಟೋ, ವಾಹನ ಚಾಲಕರು, ಕ್ಲೀನರ್ಸ್, ನಿರ್ವಾಹಕರು, ಕಟ್ಟಡ ಕಾರ್ಮಿಕರು, ಕೃಷಿ ಕಾರ್ಮಿಕರು ಸೇರಿದಂತೆ 11 ವಲಯ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ಶುಲ್ಕದೊಂದಿಗೆ ನೋಂದಣೆ ಮಾಡಿಸಿದವರು ವಿವಿಧ ಸೌಲಭ್ಯಗಳನ್ನು ಪಡೆಯಬಹುದಾಗಿದೆ

0
227

11 ವಲಯ ಅಸಂಘಟಿತ ಕಾರ್ಮಿಕರಿಗೆ ಯೋಜನೆ ಸೌಲಭ್ಯಃನಾಜಿಯಾ ಸುಲ್ತಾನ್

11 ವಲಯ ಅಸಂಘಟಿತ ಕಾರ್ಮಿಕರಿಗೆ ಯೋಜನೆ ಸೌಲಭ್ಯ; ನಾಜಿಯಾ ಸುಲ್ತಾನ

ಮಾನ್ವಿ, ಃ 11 ವಲಯ ಅಸಂಘಟಿತ ಕಾರ್ಮಿಕರು ಪ್ರಧಾನಮಂತ್ರಿ ಶ್ರಮಯೋಗಿ ಮಾನ್‍ಧನ್ ಯೋಜನೆ ಹಾಗೂ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಸೌಲಭ್ಯಗಳನ್ನು ಪಡೆಯಲು ಅಸಂಘಟಿತ ಕಾರ್ಮಿಕರು ಮುಂದಾಗಬೇಕೆಂದು ಜಿಲ್ಲಾ ಕಾರ್ಮಿಕ ಅಧಿಕಾರಿ ನಾಜಿಯಾ ಸುಲ್ತಾನ್ ಕರೆ ನೀಡಿದರು.

ಪಟ್ಟಣದ ಶಾರದಾ ಕಾಲೇಜ್‍ನಲ್ಲಿ ಪ್ರಧಾನಮಂತ್ರಿ ಶ್ರಮಯೋಗಿ ಮಾನ್‍ಧನ್ ಯೋಜನೆ ಹಾಗೂ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಮತ್ತು ಕ.ರಾ.ಖಾ.ವಾ.ಸಾ,ಕಾರ್ಮಿಕರ ಅಫಘಾತ ಪರಿಹಾರ ಯೋಜನೆಯ ಕಾರ್ಮಿಕ ಇಲಾಖೆ ಯೋಜನೆಗಳ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೇಂದ್ರ ಸರ್ಕಾರದ ಪಿಎಂಎಸ್‍ವೈಎಂ ಯೋಜನೆಯಡಿ 18 ರಿಂದ 40 ವರ್ಷ ವಯಸ್ಸಿನ ಅಸಂಘಟಿತ ಕಾರ್ಮಿಕರಾದ ಚಿಂದಿ ಹಾಯುವವರು, ಟೇಲರ್ಸ್, ಆಟೋ, ವಾಹನ ಚಾಲಕರು, ಕ್ಲೀನರ್ಸ್, ನಿರ್ವಾಹಕರು, ಕಟ್ಟಡ ಕಾರ್ಮಿಕರು, ಕೃಷಿ ಕಾರ್ಮಿಕರು ಸೇರಿದಂತೆ 11 ವಲಯ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ಶುಲ್ಕದೊಂದಿಗೆ ನೋಂದಣೆ ಮಾಡಿಸಿದವರು ವಿವಿಧ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದರು.

ಆಶಾದೀಪಾ ಃ 18 ವರ್ಷ ವಯಸ್ಸಿನವರಿಗೆ 50 ರೂ.ಶುಲ್ಕ ಹಾಗೂ 40 ವರ್ಷ ವಯಸ್ಸಿನವರಗೆ 200 ರೂ.ಶುಲ್ಕ ಪಾವತಿಸಿ 60 ವರ್ಷ ನಂತರ ಪ್ರತಿತಿಂಗಳು 3 ಸಾವಿರ ರೂ.ವರಗೆ ಮಾಶಾಸನ ಪಡೆಯಲು ಆರ್ಹರಾಗುತ್ತಾರೆ. ವಾಹನ ಚಾಲಕರು ಅಪಘಾತದಲ್ಲಿ ಮೃತ ಹೊಂದಿದರೆ 5.ಲಕ್ಷ ಮತ್ತು ಕ್ಲೀನರ್‍ಗಳಿಗೆ 2.ಲಕ್ಷ ಹಾಗೂ ಗಾಯಗೊಂಡರೆ 50 ಸಾವಿರ ಪರಿಹಾರ ನೀಡಲಾಗುತ್ತದೆ. ಈ ದೇಶದಲ್ಲಿನ ಶೇ.60 ರಷ್ಟು ಅಸಂಘಟಿತ ಕಾರ್ಮಿಕರು ಆಶಾದೀಪಾವಿದ್ದಂತೆ ಈ ಎಲ್ಲಾ ಕಾರ್ಮಿಕರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪ್ರಧಾನಮಂತ್ರಿ ಶ್ರಮಯೋಗಿ ಮಾನ್‍ಧನ್ ಯೋಜನೆ ಹಾಗೂ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಮತ್ತು ಕ.ರಾ.ಖಾ.ವಾ.ಸಾ,ಕಾರ್ಮಿಕರ ಅಫಘಾತ ಪರಿಹಾರ ಯೋಜನೆಯ ಕಾರ್ಮಿಕ ಇಲಾಖೆ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ನಾಜಿಯಾ ಸುಲ್ತಾನ್ ತಿಳಿಸಿದರು.

ಕಾರ್ಮಿಕ ಸೌಲಭ್ಯ ಯೋಜನೆಗಳಿಗೆ 15 ಸಾವಿರಕ್ಕಿಂತ ಹೆಚ್ಚಿನ ಆದಾಯ ಹೊಂದಿದವರು ಮತ್ತು ಇಎಸ್‍ಐ, ಪಿಎಫ್‍ಐ, ತೆರಿಗೆ ಪಾವತಿಸುವವರು ಆನರ್ಹರಾಗಿರುತ್ತಾರೆ. ಹೆಚ್ಚಿನ ಮಾಹಿತಿಗೆ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿನ ಕಾರ್ಮಿಕ ಇಲಾಖೆಯ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದರು.

ಈ ವೇಳೆ ಸಿಐಟಿಯು ತಾಲೂಕಾಧ್ಯಕ್ಷ ಹೆಚ್.ಶರ್ಫುದ್ದೀನ್ ಪೋತ್ನಾಳ್, ಶಾರದಾ ಶಾಲೆ ಮುಖ್ಯಸ್ಥ ಕಿಶೋರ್‍ಕುಮಾರ ಗುಪ್ತಾ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ರುದ್ರಪ್ಪನಾಯಕ, ಟೇಲರ್ಸ್ ಆಶೋಷಿಯಸನ್ಸ್ ಅಧ್ಯಕ್ಷ ಹುಸೇನ್‍ಭಾಷ, ಈರಣ್ಣ ಮರ್ಲಟ್ಟಿ ಸೇರಿದಂತೆ ಕಾರ್ಮಿಕರು ಇದ್ದರು.

LEAVE A REPLY

Please enter your comment!
Please enter your name here