ಜಾದಳ ಪಕ್ಷದ ವೀಕ್ಷಕರ ಸಭೆ : ಮುಖಂಡರ ಮಧ್ಯೆ ಭಿನ್ನಮತ

ನನ್ನನ್ನು ಸಂಘಟನೆ ಕೈಲಾಗದ ವ್ಯಕ್ತಿ ಎಂಬ ಪಟ್ಟ ಕಟ್ಟಿದ್ದಾರೆ ಎಂಬುವುದು ನನಗೆ ಗೊತ್ತಿದೆ. ಹೀಗೆ ಮಾತನಾಡುತ್ತಾ, ಆಲ್ ಇಂಡಿಯಾ ಮಟ್ಟದ ಕಮಿಟಿ ಸದಸ್ಯನಾದ ನನ್ನಂತಹ ಪರಿಸ್ಥಿತಿ ಬೇರೆ ಯಾರಿಗೂ ಬರಬಾರದೆಂದು ಹೇಳಿದ ಅವರು, ಪಕ್ಷದಲ್ಲಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ಬಹಳ ಮುಖ್ಯ. ಇಂದು ನೀವು ಟಿಕೆಟ್ ಬಗ್ಗೆ ಖಚಿತಪಡಿಸಿದರೇ, ಇಂದಿನಿಂದಲೇ ಸಂಘಟನೆ ಬಗ್ಗೆ ಆರಂಭಿಸುತ್ತೇವೆ.

0
132

ಜಾದಳ ಪಕ್ಷದ ವೀಕ್ಷಕರ ಸಭೆ : ಮುಖಂಡರ ಮಧ್ಯೆ ಭಿನ್ನಮತ

ಜಾದಳ ಪಕ್ಷದ ವೀಕ್ಷಕರ ಸಭೆ : ಮುಖಂಡರ ಮಧ್ಯೆ ಭಿನ್ನಮತ

ರಾಯಚೂರು.ಮಾ.01- ಸಂಘಟನೆ ಕೈಲಾಗದ ವ್ಯಕ್ತಿಯ ಎನ್ನುವ ನಿರ್ಧಾರ, ಇದೇ ಪರಿಸ್ಥಿತಿಯಿದ್ದರೇ, ಮುಂದಿನ ಚುನಾವಣೆಗೆ ನಾನು ಅಭ್ಯರ್ಥಿಯಾಗಿ ನಿಲ್ಲುವುದಿಲ್ಲ, ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಸಂಖ್ಯೆಯನ್ನಾಧರಿಸಿ ಮತ್ತು ಸಂಘಟನೆ ಸಾಮರ್ಥ್ಯ ಗುರುತಿಸಿ ಟಿಕೆಟ್ ನಿರ್ಧಾರ ಹೀಗೆ ಅನೇಕ ರೀತಿಯ ಪರಸ್ಪರ ಪರೋಕ್ಷ ಟೀಕೆ ಮತ್ತು ವಿರೋಧಿಗಳಿಗೆ ಪರೋಕ್ಷ ಎಚ್ಚರಿಕೆ ನೀಡುವಂತಹ ಘಟನಾವಳಿಗಳು ನಿನ್ನೆ ನಡೆದ ಜಾದಳ ಪಕ್ಷದ ವೀಕ್ಷಕರ ಸಭೆಯಲ್ಲಿ ಕಂಡು ಬಂತು.

ಸಂತೋಷ ಹೋಮ್‌ಟೆಲ್‌ನಲ್ಲಿ ನಡೆದ ವೀಕ್ಷಕರ ಸಭೆಯಲ್ಲಿ ಪಕ್ಷದ ಸಂಘಟನೆ ಮತ್ತು ಮುಂದಿನ ಚುನಾವಣಾ ಟಿಕೆಟ್ ಬಗ್ಗೆ ಗಂಭೀರ ಚರ್ಚೆ ನಡೆಯಿತು. ವೀಕ್ಷಕರನ್ನು ಮಾತ್ರ ವೇದಿಕೆ ಮೇಲೆ ಕರೆಯಬೇಕೆಂಬ ನಿಯಮದಲ್ಲಿ ಪಕ್ಷದ ಹಿರಿಯ ಮುಖಂಡರು ಮತ್ತು ಕೇಂದ್ರ ಸಮಿತಿಯ ಸದಸ್ಯರಾದಂತಹ ಮಹಾಂತೇಶ ಪಾಟೀಲ್ ಅವರನ್ನು ವೇದಿಕೆ ಮೇಲೆ ಕರೆಯದಿರುವುದು ವಿವಾದಕ್ಕೆ ಕಾರಣವಾಯಿತು. ನಗರ ವಿಧಾನಸಭಾ ಕ್ಷೇತ್ರದಲ್ಲಿ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ವಿತರಣೆಗೆ ಸಂಬಂಧಿಸಿ, ಕೇಳಿ ಬಂದ ಅಭಿಪ್ರಾಯಗಳು ಒಂದು ಕ್ಷಣ ಮಹಾಂತೇಶ ಪಾಟೀಲ್ ಅವರನ್ನು ಸಭೆಯಲ್ಲಿ ಗದ್ಗದಿಸಿ ಮಾತನಾಡುವಂತೆ ಮಾಡಿತ್ತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಮಹಾಂತೇಶ ಪಾಟೀಲ್ ಅವರು ನನ್ನನ್ನು ಸಂಘಟನೆ ಕೈಲಾಗದ ವ್ಯಕ್ತಿ ಎಂಬ ಪಟ್ಟ ಕಟ್ಟಿದ್ದಾರೆ ಎಂಬುವುದು ನನಗೆ ಗೊತ್ತಿದೆ. ಹೀಗೆ ಮಾತನಾಡುತ್ತಾ, ಆಲ್ ಇಂಡಿಯಾ ಮಟ್ಟದ ಕಮಿಟಿ ಸದಸ್ಯನಾದ ನನ್ನಂತಹ ಪರಿಸ್ಥಿತಿ ಬೇರೆ ಯಾರಿಗೂ ಬರಬಾರದೆಂದು ಹೇಳಿದ ಅವರು, ಪಕ್ಷದಲ್ಲಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ಬಹಳ ಮುಖ್ಯ. ಇಂದು ನೀವು ಟಿಕೆಟ್ ಬಗ್ಗೆ ಖಚಿತಪಡಿಸಿದರೇ, ಇಂದಿನಿಂದಲೇ ಸಂಘಟನೆ ಬಗ್ಗೆ ಆರಂಭಿಸುತ್ತೇವೆ. ಮುಂದೆ ಏನಾಗುತ್ತದೋ ನೋ‌ಡಲು ಸಿದ್ಧ. ಮುಂದೆ ಯಾರಿಗಾದರೂ ಟಿಕೆಟ್ ಸಿಗಲಿ. ಆದರೆ, ಸಂಘಟನೆ ಮಾಡಲು ಸಿದ್ಧರಿದ್ದೇವೆ. ಎಲ್ಲರೂ ಮಂತ್ರಿ, ಎಂಎಲ್‌ಎ ಆಗಲು ಸಾಧ್ಯವೆಲ್ಲ ಎಂಬುವುದು ನನಗೆ ಗೊತ್ತು. ಪಕ್ಷದಲ್ಲಿ ಏರುಪೇರು ಇರುತ್ತದೆ ಎಂಬ ಮನವರಿಕೆ ನನಗಿದೆ. ರಾಯಚೂರು ನಗರಕ್ಕೆ ಸಂಬಂಧಿಸಿ ನೀವು ಹಿರಿಯರು, ಸೂಕ್ತ ನಿರ್ಧಾರ ಕೈಗೊಳ್ಳಿ ಎಂದು ಹೇಳಲಾಯಿತು. ಆದರೆ, ಮತ್ತೊಂದು ಕಡೆ ರವಿ ಪಾಟೀಲ್ ಅವರು ಮಾತನಾಡುತ್ತಾ, ಜಿಲ್ಲೆಯಲ್ಲಿ ಸಂಘಟನಾ ಸ್ಥಿತಿ ಇದೇ ರೀತಿಯಲ್ಲಿದ್ದರೇ ನಾನು ಗ್ರಾಮಾಂತರ ಕ್ಷೇತ್ರದಿಂದ ಮುಂದಿನ ಸಲ ಚುನಾವಣೆಯಿಂದ ನಿಲ್ಲಲು ಸಿದ್ಧನಿಲ್ಲ.
ಈ ಹಿನ್ನೆಲೆಯಲ್ಲಿ ಸಂಘಟನೆ ಅತ್ಯಂತ ಮುಖ್ಯವಾಗಿದೆ. ಎಲ್ಲರೂ ಸಂಘಟನೆ ಮಾಡಿದರೇ, ಜಿಲ್ಲೆಯ 7 ಕ್ಷೇತ್ರಗಳಲ್ಲಿ ಸಂಘಟನೆ ಮಾಡಿದರೇ, 5 ಕ್ಷೇತ್ರಗಳಲ್ಲಿ ಗೆಲ್ಲುವ ಸಾಮರ್ಥ್ಯ ಪಕ್ಷಕ್ಕಿದೆಂದು ಅವರು ಹೇಳಿದರು. ನೀವು ದುಡಿಸಿಕೊಂಡರೇ ನಾವು ದುಡಿಯಲು ಸಿದ್ಧವೆಂದು ಸಭೆಯಲ್ಲಿ ತಿಳಿಸಿದರು. ಒಟ್ಟಾರೆಯಾಗಿ ಜಾದಳ ಸಭೆಯಲ್ಲಿ ಪಕ್ಷದ ಅಸಮಾಧಾನಗಳು ತೀವ್ರವಾಗಿ ವ್ಯಕ್ತಗೊಂಡವು. ರಾಯಚೂರು ತಾಲೂಕಿನಲ್ಲಿ ಈ ಅಸಮಾಧಾನ ಗಂಭೀರವಾಗಿರುವುದು ಕಂಡು ಬಂದಿತು. ಪಕ್ಷದ ಶಾಸಕರು ಮತ್ತು ಇತರೆ ಮುಖಂಡರ ಮಧ್ಯೆ ಹೊಂದಾಣಿಕೆ ಇಲ್ಲ ಎನ್ನುವುದು ಸ್ಪಷ್ಟವಾಗಿತ್ತು.

ಮಹಾಂತೇಶ ಪಾಟೀಲ್ ಅವರನ್ನು ಶಾಸಕ ವೆಂಕಟರಾವ್ ನಾಡಗೌಡ ಅವರು ಪರೋಕ್ಷವಾಗಿ ಪ್ರಶ್ನಿಸಿದರೇ, ಮತ್ತೊಂದು ಕಡೆ ಇನ್ನೂ ಕೆಲ ನಾಯಕರು ಮಹಾಂತೇಶ ಪಾಟೀಲ್ ಅವರಿಗೆ ಧೈರ್ಯ ತುಂಬುವ ಮೂಲಕ ವೆಂಕಟರಾವ್ ನಾಡಗೌಡ ಅವರ ವಿರುದ್ಧ ಧ್ವನಿಯೆತ್ತಿದಂತಹ ಘಟನೆ ನಡೆಯಿತು. ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮತ್ತು ಪದಾಧಿಕಾರಿಗಳ ನೇಮಕ ಮತ್ತು ಮುಂದಿನ ಚುನಾವಣೆಯಲ್ಲಿ ಕೈಗೊಳ್ಳಬಹುದಾದ ಎಚ್ಚರಿಕೆ ಕ್ರಮ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಯಿತು. ಸಭೆ ಮಧ್ಯೆ ವಿದ್ಯುತ್ ಕಡಿತ ಸಭೆಯಲ್ಲಿ ಮುಖಂಡರ ಮಧ್ಯೆ ಮತ್ತೊಂದಿಷ್ಟು ಭಿನ್ನಾಭಿಪ್ರಾಯಗಳಿಗೆ ಕಾರಣವಾಯಿತು.

ಮುಂಬರುವ ಚುನಾವಣೆಯಲ್ಲಿ ದೇವದುರ್ಗ ಕ್ಷೇತ್ರದಿಂದ ಕರೆಮ್ಮ ಅವರಿಗೆ, ಲಿಂಗಸೂಗೂರಿನಲ್ಲಿ ಸಿದ್ದುಬಂಡಿ ಇವರ ಹೆಸರು ಬಹುತೇಕ ಅಂತಿಮ ಎನ್ನುವ ರೀತಿಯಲ್ಲಿ ಸಭೆಯಲ್ಲಿ ಕಂಡು ಬಂದಿತು. ಈ ಸಭೆಗೆ ವೀಕ್ಷಕರಾಗಿ ಶಾಸಕರಾದ ವೆಂಕಟರಾವ್ ನಾಡಗೌಡ, ರಾಜಾ ವೆಂಕಟಪ್ಪ ನಾಯಕ, ತಿಮ್ಮಯ್ಯ ಪುರ್ಲೆ, ಮಠಪತಿ, ತಾಯಣ್ಣ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here