ರೈತ ವಿರೋಧಿ ಕೃಷಿ ಕಾನೂನು ಹಿಂಪಡೆಯಲು ಒತ್ತಾಯಿಸಿ ವೆಲ್ಫೇರ್ ಪಾರ್ಟಿ ಯಿಂದ ಧರಣಿ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಮೂರು ಮಹತ್ವದ ರೈತ ಮತ್ತು ಜನ ’ ವಿರೋಧಿ ಕಾಯಿದೆಗಳನ್ನು ಜಾರಿ ಮಾಡಲು ಹೊರಟಿವೆ.

0
158

ರಾಯಚೂರು.ಜ.25. ಕೇಂದ್ರ ಸರ್ಕಾರ ಜಾರಿಗೆ ತಂದ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಯಿತು.

ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸುತ್ತಾ ದೇಶದ ಕೃಷಿಯು ಅನೇಕ ಬಿಕ್ಕಟ್ಟುಗಳನ್ನು ಎದರುಸುತ್ತಿದೆ.ಇಂದು ರೈತರು ಬೆಳೆದ ಬೆಳೆಗಳಿಗೆ ಸೂಕ್ತ ನಿಗದಿತ ಬೆಲೆ ಮತ್ತು ಮಾರುಕಟ್ಟೆ ಇಲ್ಲ,ನೀರಾವರಿ ಸೌಲಭ್ಯ , ಬಿತ್ತನೆ ಬೀಜ , ರಸಗೊಬ್ಬರ, ವಿದ್ಯುತ್ ಪೂರೈಕೆ , ದಾಸ್ತಾನು ಕೊಠಡಿ , ಸಾಲ ಸೌಲಭ್ಯ , ತಂತ್ರಜ್ಞಾನಗಳು ಸರಿಯಾಗಿ ಸಿಗದ ಪರಿಣಾಮ ರೈತ ಆತ್ಮಹತ್ಯೆಗೆ ಶರಣಾಗುತ್ತಿತಿರುವುದು
ಮುಂದುವರಿಯುತ್ತಿದ್ದು ಅಸಂಖ್ಯಾತ ರೈತ ಮತ್ತು ಕೃಷಿ ಕೂಲಿಕಾರರು ಕೃಷಿಯಿಂದ ದೂರವಾಗಿ ಹೊಟ್ಟೆಪಾಡಿಗಾಗಿ ಹಳ್ಳಿಯಿಂದ ನಗರಗಳಿಗೆ ವಲಸೆ ಹೊರಡುತ್ತಿದ್ದಾರೆ.

ಇದರ ಬಗ್ಗೆ ಗಮನ ಹರಿಸಬೇಕಾದ ನಮ್ಮ ಸರ್ಕಾರಗಳು ತಮ್ಮ ಜವಾಬ್ದಾರಿಯನ್ನು ಮರೆತಿವೆ . ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಮೂರು ಮಹತ್ವದ ರೈತ ಮತ್ತು ಜನ ’ ವಿರೋಧಿ ಕಾಯಿದೆಗಳನ್ನು ಜಾರಿ ಮಾಡಲು ಹೊರಟಿವೆ. ಈ ಕಾಯಿದೆಗಳು ಜಾರಿಯಾದರೆ ದೇಶದ ಕೃಷಿ ದಿವಾಳಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ, ತಿದ್ದುಪಡಿಗೆ ಒಳಗಾದ ಮೂರು ಕಾಯಿದೆಗಳಾದ ಭೂ ಸುಧಾರಣೆ ತಿದ್ದುಪಡಿ ಕಾಯಿದೆ,ಕೃಷಿ ಉತ್ಪನ್ನ ಮತ್ತು ಸರಕು ಸೇವೆಗಳ ಮಾರಾಟ ಕಾಯಿದೆ ( ಎಪಿಎಂಸಿ ) ಮತ್ತು ವಿದ್ಯುಚ್ಛಕ್ತಿ ತಿದ್ದುಪಡಿ ಕಾಯಿದೆಗಳು ರೈತರಿಗೆ ಮಾರಕವಾಗಿ ಕೃಷಿಯನ್ನು ನಾಶಗೊಳಿಸಿ ಕಾರ್ಪೊರೇಟ್ ಸಂಸ್ಥೆಗಳ ಮುಖ್ಯಸ್ಥರಿಗೆ ಕೃಷಿಯನ್ನು ಒಪ್ಪಿಸಲಿವೆ ಅದ ಕಾರಣ ಕೂಡಲೇ ಈ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರಪತಿಗಳಿಗೆ  ಜಿಲ್ಲಾ ಅಧಿಕಾರಿ ಮುಖಾಂತರ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ  ಫರಿದ್ ಉಮ್ರಿ, ಹೈದ್ರಾಬಾದ್ ಕರ್ನಾಟಕ ಸಂಘದ ಅಧ್ಯಕ್ಷ ಖಾಜ ಅಸ್ಲಮ್, ಜನಶಕ್ತಿ ಸಂಘದ ಅಧ್ಯಕ್ಷ ಮಾರ್ಯಪ್ಪ, ಜಮಾಅತೆ ಇಸ್ಲಾಮಿಯ ಅಧ್ಯಕ್ಷ ಆಸಿಮುದ್ದೀನ್ ಅಕ್ತರ್, ಸಮಾಜ ಸೇವಕ ಬಾಶು ಮಿಯಾ ಸಿಂಧನೂರು, ಅಬ್ದುಲ್ ಲತೀಫ್ ಸಾಬ್, ಮಸೂದ್, ಮಕ್ಬೂಲ್ ಅಡ್ವೊಕೇಟ್, ಬಾಬೆಲಿನ ಹುಸೇನ್, ಮುಖೀಮ್ಅಬ್ದುಲ್ ಲತೀಫ್, ಅಬ್ದುಲ್ ಗನಿ,  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here