ನೂತನ ಕೃಷಿ ಕಾಯ್ದೆ ಹಿಂಪಡೆಗೆ ಜ 25 ರಂದು ಪ್ರತಿಭಟನೆ; ಶೇಕ್ ಬಾಬ ಹುಸೇನ್

WPI ವತಿಯಿಂದ ರೈತ ಭದ್ರತೆ ದೇಶ ಸುಭದ್ರತೆ ಜನ ಜಾಗೃತಿ ಅಭಿಯಾನ.

0
159

ಮಾನ್ವಿ.ಜ.20-ಬಿಜೆಪಿ ನೇತೃತ್ವದ ಸರ್ಕಾರ ಜನ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡಲು ಹೊರಟಿದ್ದು ಮೂರು ನೂತನ ಕೃಷಿ ಕಾಯ್ದಗಳನ್ನು ಹಿಂಪಡೆಯಲು ಆಗ್ರಹಿಸಿ ಜನವರಿ 25ರಂದು ರಾಯಚೂರಿನಲ್ಲಿ ಟೀಪುಸುಲ್ತಾನ್ ಚೌಕನಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಸಮಿತಿಯ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗವುದು ಎಂದು ಪಕ್ಷದ ತಾಲೂಕ ಅಧ್ಯಕ್ಷ ಬಾಬಾ ಹುಸೇನ್ ಅವರು ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ವಾಲ್ ಪೊಸ್ಟರ್ ಬಿಡುಗಡೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ಮಹತ್ವದ ರೈತ ಮತ್ತು ಜನ ವಿರೋಧಿ ನೀತಿಗಳು ಜಾರಿ ಮಾಡಲು ಹೊರಟಿದ್ದು ಈ ಕಾಯ್ದೆಗಳು ಜಾರಿಯಾದರೆ ದೇಶದ ಕೃಷಿ ದಿವಾಳಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದರು.

ಬಿಜೆಪಿ ಸರ್ಕಾರ ಬಂಡವಾಳಶಾಹಿಗಳ ಹಿತ ಕಾಯಲು ಮುಂದಾಗಿದೆ.
ಇಂತಹ ಸೂಕ್ಷ್ಮತೆಯನ್ನು ಅರಿತುಕೊಂಡು ಅನ್ನಧಾತರ ಜೊತೆಗೆ ನಿಲ್ಲಬೇಕಿದೆ ಎಂದು ಹೇಳಿದರು.
ಜನವರಿ ೦೮ ರಿಂದ ೩೦ ವರಗೆ ರಾಜ್ಯವ್ಯಾಪ್ತಿ ಜನತೆಯೊಂದಿಗೆ ಚರ್ಚ ಸಂವಾದ ಹೋರಾಟ ಪ್ರತಿಭಟನೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಜನವರಿ ೨೪ ರಂದು ಮಾನ್ವಿ ಶಾಸಕರಿಗೆ ಮನವಿ ಪತ್ರ ಸಲ್ಲಿಸಿಲಾಗುವುದು.

ಜ.೨೫ ರಂದು ರಾಯಚೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗವುದು ಎಂದು ಹೇಳಿದರು.
ಭೂ ಸುಧಾರಣೆ ಕಾಯ್ದೆ ಅಗತ್ಯ ವಸ್ತುಗಳ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆ ವಿದ್ಯುತ್ ತಿದ್ದುಪಡಿ ಕಾಯ್ದೆ ರೈತರಿಗೆ ಮಾರಕವಾಗಿವೆ ಎಂದು ಹೇಳಿದರು. ಜನತೆಗೆ ಕೃಷಿ ಕಾಯ್ದಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಅಭಿಯಾನ ನಡೆಸಲಾಗುವುದು ಜೊತೆಯಲ್ಲಿ ಕರೆ ಪತ್ರ ಹಂಚಿಕೆ ಮಾಡಿ ಜನರಿಗೆ ತಿಳಿವಳಿಕೆ ಮೂಡಿಸಲು ನಮ್ಮ ವೆಲ್ಫೇರ್ ಪಾರ್ಟ್ ಆಫ್ ಇಂಡಿಯಾ ವತಿಯಿಂದ ಅಭಿಯಾನ ಹಮ್ಮಿಕೊಂಡಿದು.

ರೈತರಿಗೆ ಬೆಳದ ಬೆಳಗಳಿಗೆ ನಿಗದಿ ಬೆಲೆ ಏರಿಕೆ ಇಲ್ಲ ನೀರಾವರಿ ಸೌಲಭ್ಯ. ಭೀತ್ತನೆ ಭೀಜ ರಸಗೊಬ್ಬರ ಪೂರೈಕೆ ದಾಸ್ತಾನು ಕೊಠಡಿ ಇನ್ನಿತರ ಮೂಲಭೂತ ಸಮಸ್ಯೆ ಗಳನ್ನು ಈಡೇರಿಸುವಂತೆ ಆಗ್ರಹಿಸಿ ದರು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ   ಶೇಖ್ ಫರೀದ್ ಉಮ್ರಿ. ಗುಲಾಂ ರಸೂಲ್. ನಾಸಿರ್ ಅಲಿ.ಎಂ ಎ ಎಚ್ ಮುಕೀಮ್ ಮತ್ತು. ಇನ್ನಿತರರು ಉಪಸ್ಧಿತಿರಿದ್ದರು.

LEAVE A REPLY

Please enter your comment!
Please enter your name here