ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಯಚೂರು ಜಿಲ್ಲಾ ಸಮಿತಿ ರಚನೆ.

0
183

ರಾಯಚೂರು.15 ಜನವರಿ 2021 :- ಶೇಕ್ ಫರೀದ್ ಉಮರಿ ಉಮರಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಯಚೂರು ಜಿಲ್ಲಾ ಅಧ್ಯಕ್ಷರಾಗಿ ಎರಡನೇ ಅವಧಿಗೆ ಆಯ್ಕೆ . 

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಯಚೂರಿನಕಾರ್ಯಾಲಯದಲ್ಲಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.

ಚುನಾವಣಾ ವೀಕ್ಷಕರಾಗಿ ರಾಜ್ಯ ಕಾರ್ಯದರ್ಶಿ ಆದಿಲ್ ಪಟೇಲ್ ಕೊಪ್ಪಳ ಆಗಮಿಸಿದ್ದರು. ಜಿಲ್ಲೆಯ ವಿವಿಧ ತಾಲೂಕು ಗಳಿಂದ ಕಾರ್ಯಕರ್ತರು ಭಾಗವಹಿಸಿ ನೂತನ ನಾಯಕತ್ವವನ್ನ ಆಯ್ಕೆ ಮಾಡಿದರು ವಿವಿಧ ರೀತಿಯ ಚರ್ಚೆಗಳ ನಂತರ ಸಭಿಕರಿಂದ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಎರಡು ಹೆಸರುಗಳು ಪ್ರಸ್ತಾಪವಾದವು 1.ಫರೀದ್ ಉಮರಿ ಪುರಸಭೆ ಸದಸ್ಯರು ಮಾನವಿ. 2. ಅಬ್ದುಲ್ ಲತೀಫ್ ರಾಯಚೂರು.
ಎರಡು ಹೆಸರುಗಳು ಬಂದ ಕಾರಣ ರಾಜ್ಯ ಕಾರ್ಯದರ್ಶಿ ಆದಿಲ್ ಪಟೇಲ್ ತಮ್ಮ ವೀಕ್ಷಣೆಯಲ್ಲಿ ಮತದಾನ ಮಾಡಿಸಿದರು.
ಫರೀದ್ ಉಮರಿ ಶೇಕಡ 80ರಷ್ಟು ಮತಗಳನ್ನು ಪಡೆಯುವ ಮೂಲಕ ಜಿಲ್ಲಾ ಅಧ್ಯಕ್ಷ ರಾಗಿ ಎರಡನೇ ಅವಧಿಗೆ ಮುಂದುವರಿದರು.

ನಂತರ ನೂತನ ಜಿಲ್ಲಾಧ್ಯಕ್ಷರಿಗೆ ಹಾಗೂ ರಾಜ್ಯ ಕಾರ್ಯದರ್ಶಿ ಗಳಿಗೆ ಮತ್ತು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡ ಸದಸ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಪದಾಧಿಕಾರಿಗಳನ್ನ ಆಯ್ಕೆ ಮಾಡುವ ಮೂಲಕ ಜಿಲ್ಲಾ ಸಮಿತಿ ರಚನೆ ಮಾಡಲಾಯಿತು.
ಜಿಲ್ಲಾ ಸಮಿತಿಯ ಪದಾಧಿಕಾರಿಗಳ ಪಟ್ಟಿ :
ಜಿಲ್ಲಾ ಅಧ್ಯಕ್ಷ : ಶೇಕ್ ಫರೀದ್ ಉಮರಿ ಪುರಸಭೆ ಸದಸ್ಯರು ಮಾನವಿ.

ಪ್ರಧಾನ ಕಾರ್ಯದರ್ಶಿ: ಮೊಹಮ್ಮದ್ ಇಲ್ಯಾಸ್ ರಾಯಚೂರು.

ಉಪಾಧ್ಯಕ್ಷರು: 1.ಅಬ್ದುಲ್ ಗನಿ ಗುಂಜಳ್ಳಿ.
2. ಡಾ! ಶಫೀ ಸಿಂಧನೂರು.
3. ಜಾಫರ್ ಹುಸೇನ್ ಫೂಲ್ವಾಲೆ ಲಿಂಗಸುಗೂರು.
4. ಅಬ್ದುಲ್ ಗನಿ ಮಸ್ಕಿ.

ಕಾರ್ಯದರ್ಶಿ: 1.ಈಮಾನ್ವೇಲ್ ರಾಯಚೂರು.
2.ವೀರೇಶ ರಾಯಚೂರು.

ಸಂಘಟನಾ ಕಾರ್ಯದರ್ಶಿ; ಎಮ್ ಎ ಎಚ್ ಮುಖೀಮ್ ಮಾನವಿ.

ಖಜಾಂಚಿ: ಹಸನುದ್ದೀನ್ ರಾಯಚೂರು.

ಕಾನೂನು ಸಲಹೆ ಗಾರರು: ಮಕ್ಬೂಲ್ ಹುಸೇನ್ ವಕೀಲರು ರಾಯಚೂರು.

ಪದಾಧಿಕಾರಿಗಳು: ಚಾಂದ್ ಪಾಶ ದಿದ್ಗಿ. ಮಸೂದ್, ಫಾರೂಕ್ ಮನಿಯಾರ್, ಮಹಿಬೂಬ್ ಖಾನ್,

ಉಪಸ್ಥಿತಿ: ಅಬ್ದುಸ್ಸಮದ್, ರಸೂಲ್ ಮುಲ್ಲಾ, ಮಹಿಬೂಬ್ ಖಾನ್, ಖಾಲಿದ್ ಅಹಮದ್, ಫಾರೂಕ್ ಮನಿಯಾರ್ ಹಾಗೂ ಇತರೇ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here