ಅಮೇರಿಕಾದಲ್ಲಿ ಟ್ರಂಪ್ ಮತ್ತು ಜೊಬಿಡೆನ್ ಬೆಂಬಲಿಗರಿಂದ ಭುಗಿಲೆದ್ದ ಹಿಂಸಾಚಾರ.

ಏಕಾಏಕಿ ಭುಗಿಲೆದ್ದ ಹಿಂಸಾಚಾರದಿಂದ ಸ್ಥಳಧಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಉಭಯ ಬಣಗಳನ್ನು ಸಮಾಧಾನಪಡಿಸಲು ಹರಸಾಹಸಪಡುತ್ತಿದ್ದಾರೆ ಎನ್ನಲಾಗಿದೆ

0
207

ಅಮೇರಿಕಾದಲ್ಲಿ ಟ್ರಂಪ್ ಮತ್ತು ಜೊಬಿಡೆನ್ ಬೆಂಬಲಿಗರಿಂದ ಭುಗಿಲೆದ್ದ ಹಿಂಸಾಚಾರ.

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಹಾಗೂ ಉಪಾಧ್ಯಕ್ಷೀಯ ಚುನಾವಣೆ ಫಲಿತಾಂಶ ಘೋಷಣೆಯಾದ ಬಳಿಕ, ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಪ್ರತಿಭಟನೆ ಹಮ್ಮಿಕೊಂಡಿದ್ದರು.

ಈ ವೇಳೆ ಡೆಮಾಕ್ರೆಟಿಕ್ ಪಕ್ಷದ ಜೋ ಬಿಡೆನ್ ಬೆಂಬಲಿಗರು ಹಾಗೂ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಬೆಂಬಲಿಗರ ನಡುವೆ ಮುಷ್ಠಿ ಕಾಳಗ ನಡೆದಿದೆ.

ಬ್ಲ್ಯಾಕ್ ಲೈವ್ಸ್ ಮ್ಯಾಟರ್(ಬಿಎಲ್‌ಎಂ) ಹಾಗೂ ಟ್ರಂಪ್ ಅವರನ್ನು ಬೆಂಬಲಿಸುವ ಪ್ರೌಡ್ ಬಾಯ್ಸ್ ಗ್ರೂಪ್ ನಡುವೆ ಜಟಾಪಟಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಷ್ಠಿ ಕಾಳಗದಲ್ಲಿ ಟ್ರಂಪ್ ಬೈಡೇನ್ ಬೆಂಬಲಿಗರು ಗಾಯಗೊಂಡಿದ್ದು, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೂ 10 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ 20 ವರ್ಷದ ಯುಕನೋರ್ವನಿಗೆ ಚಾಕುವಿನಿಂದ ಇರಿಯಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
ಟ್ರಂಪ್ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ಬಿಡೆನ್ ಬೆಂಬಲಿಗರು ಹಾಗೂ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಸಂಘಟನೆಯ ಸದಸ್ಯರು ಜಮಾಯಿಸಿದರು. ಈ ವೇಳೆ ‘ರೆಫ್ಯೂಸ್ ಫ್ಯಾಸಿಸಂ(ನಾಜಿವಾದಕ್ಕೆ ತಿರಸ್ಕಾರ) ಘೋಷಣೆಗಳನ್ನು ಕೂಗಿದರು.

ಇದರಿಂದ ಕೆರಳಿದ ಟ್ರಂಪ್ ಬೆಂಬಲಿಗರು, ಬಿಎಲ್‌ಎಂ ಸದಸ್ಯರ ಮೇಲೆರಗಿ ಹಲ್ಲೆ ನಡೆಸಿದರು. ಏಕಾಏಕಿ ಭುಗಿಲೆದ್ದ ಹಿಂಸಾಚಾರದಿಂದ ಸ್ಥಳಧಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಉಭಯ ಬಣಗಳನ್ನು ಸಮಾಧಾನಪಡಿಸಲು ಹರಸಾಹಸಪಡುತ್ತಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here