ಪ್ರತಾಪಗೌಡ ಪಾಟೀಲರಿಗೆ ಮುಂಬರುವ ಉಪ ಚುನಾವಣೆಯಲ್ಲಿ ಸೋಲು ಖಚಿತ. 

ನಕಲಿ ಮತದಾನ ಮಾಡಿಸಿ ಗೆಲುವು ಕಂಡಿದ್ದ ಪ್ರತಾಪಗೌಡ ಪಾಟೀಲ್ ಗೆ ಮುಂಬರುವ ಉಪ ಚುನಾವಣೆಯಲ್ಲಿ ಸೋಲಿ ರುಚಿ ಗ್ಯಾರೆಂಟಿ.

0
201

ಪ್ರತಾಪಗೌಡ ಪಾಟೀಲರಿಗೆ ಮುಂಬರುವ ಉಪ ಚುನಾವಣೆಯಲ್ಲಿ ಸೋಲು ಖಚಿತ. 

ಮಸ್ಕಿ,ನ.14- ಕಳೆದ ವಿಧಾನ ಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ನಕಲಿ ಮತದಾನ ಮಾಡಿಸುವ ಮೂಲಕ ಗೆಲುವು ಕಂಡಿದ್ದ ಪ್ರತಾಪಗೌಡ ಪಾಟೀಲ್ ಮುಂಬರುವ ಉಪ ಚುನಾವಣೆಯಲ್ಲಿ ಸೋಲಿನ ರುಚಿ ಕಾಣಲಿದ್ದಾರೆ ಎಂದು ಮುಖಂಡ ಅರ್. ಸಿದ್ದನಗೌಡ ತುರ್ವಿಹಾಳ ಹೇಳಿದರು.

ಸಮೀಪದ ಅಂತರ ಗಂಗಿ ಗ್ರಾಮ ಬಳಿ ನಡೆದ ಆರ್. ಬಸನಗೌಡ ತುರ್ವಿಹಾಳ ಬೆಂಬಲಿಗರ ಸಭೆಯಲ್ಲಿ ಮಾತನಾಡಿದರು. ವಿಧಾನ ಸಭೆ ಚುನಾವಣೆ ವೇಳೆ ಅಕ್ರಮ ಮತದಾನ ಮೂಲಕ ಪ್ರತಾಪಗೌಡ ಗೆಲುವು ಕಂಡಿದ್ದರು ಬಸನಗೌಡ ತುರ್ವಿಹಾಳ ಸೋಲಿಗೆ ಕ್ಷೇತ್ರದ ಮತದಾರರು ಮರುಕ ಪಟ್ಟಿದ್ದಾರೆ. ಮುಂಬರುವ ಉಪ ಚುನಾವಣೆಯಲ್ಲಿ ಮತದಾರರು ಬಸನಗೌಡ ತುರ್ವಿಹಾಳ ಅವರ ಕೈ ಹಿಡಿಯ ಬೇಕು ಎಂದು ಮನವಿ ಮಾಡಿದರು.

ಉಪ ಚುನಾವಣೆಯಲ್ಲಿ ಪ್ರತಾಪಗೌಡರಿಗೆ ಸೋಲಿನ ಭಯ ಕಾಡುತ್ತಿದೆ ಮತದಾರರು ಪ್ರತಾಪಗೌಡರನ್ನು ತಿರಸ್ಕಾರ ಮಾಡಿರುವ ಕಾರಣ ಉಪ ಚುನಾವಣೆಯಲ್ಲಿ ಪ್ರತಾಪಗೌಡರ ಸೋಲು ಗ್ಯಾರಂಟಿ ಎಂದು ಭಿವಿಷ್ಯ ಹೇಳಿದರು. ಸಿದ್ದಣ್ಣ ಹೂವಿನಬಾವಿ ಮಾತನಾಡಿ ಬಸನಗೌಡ ತುರ್ವಿಹಾಳ ಅವರಿಗೆ ಕಾಡಾ ಅಧ್ಯಕ್ಷ ಸ್ಥಾನ ನೀಡಿ ಕಾಂಗ್ರೆಸ್ ಸೇರದಂತೆ ಒತ್ತಡ ಹಾಕಿದ್ದರು ಬಸನಗೌಡ ತುರ್ವಿಹಾಳ ಅವರಿಗೆ ಅಧಿಕಾರ,ಹಣದ ಆಸೆ ಇದ್ದರೆ ಬಿಜೆಪಿ ಬಿಟ್ಟು ಬರುತ್ತಿರಲಿಲ್ಲ ಸ್ವಾಭಿಮಾನಿ ಕಾರ್ಯಕರ್ತರಿಗೆ ಆದ ಅನ್ಯಾಯ ಪ್ರತಿಭಟಿಸಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ.

ಕ್ಷೇತ್ರದಲ್ಲಿ ನಡೆದಿರುವ ಹಿಟ್ಲರ್ ಮಾದರಿ ಆಡಳಿತ ಕೊನೆಗಾಣಿಸ ಬೇಕು ಎಂದರು. ಮಲ್ಲನಗೌಡ ಗುಂಡಾ, ತಾಪಂ.ಅಧ್ಯಕ್ಷ ಶಿವಣ್ಣ ನಾಯಕ, ಮಹಾಂತೇಶ ಅಮೀನಗಡ, ರುದ್ರಗೌಡ ತಿಡಿಗೋಳ, ತಾಪಂ. ಸದಸ್ಯ ಚಂದ್ರ ಶೇಖರ, ಸಿದ್ದನ ಗೌಡ ನಾಗರ ಬೆಂಚಿ ಸೇರಿದಂತೆ ಅನೇಕ ಮುಖಂಡರಿದ್ದರು.

ಅಂತರಗಂಗಿ ಗ್ರಾಮ ದಿಂದ ಮಸ್ಕಿಯ ಬಸವೇಶ್ವರ ನಗರ ಬಳಿಯ ಕಾಂಗ್ರೆಸ್ ಕಚೇರಿ ವರೆಗೆ ಯುವ ಕಾರ್ಯಕರ್ತರು ಬೈಕ್ ರ್‍ಯಾಲಿ ನಡೆಸಿ ಸಾರ್ವಜನಿಕರ ಗಮನ ಸೆಳೆದರು ಬಿಜೆಪಿ, ಕಾಂಗ್ರೆಸ್ ಮುಖಂಡರು ಪ್ರತ್ಯೇಖ ಸಭೆ ಗಳನ್ನು ನಡೆಸುವ ಮೂಲಕ ಕ್ಷೇತ್ರದಲ್ಲಿ ಚುನಾವಣೆ ರಣ ಕಹಳೆ ಮೊಳಗಿಸಿದ್ದಾರೆ.

LEAVE A REPLY

Please enter your comment!
Please enter your name here