ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಪುರಸಭೆ ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ನೂತನ ಮುಖ್ಯ ಅಧಿಕಾರಿಗಳಿಗೆ ಸನ್ಮಾನ.

ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ರಿಗೆ WPI ವತಿಯಿಂದ ಸನ್ಮಾನ

0
192

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮಾನವಿ ವತಿಯಿಂದ ನೂತನ ಪುರಸಭೆ ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ನೂತನ ಮುಖ್ಯ ಅಧಿಕಾರಿಗಳಿಗೆ ಸನ್ಮಾನ.

ಮಾನವಿ, ನ. 13- ನಗರದ ವಾರ್ಡ್ ನಂ 25 ರ ವೆಲ್ಫೇರ್ ಪಾರ್ಟಿಯ ಪುರಸಭೆ ಸದಸ್ಯ ಫರೀದ್ ಉಮರಿ ಯವರು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ನೂತನ ಪುರಸಭೆ ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ನೂತನ ಮುಖ್ಯ ಅಧಿಕಾರಿಗಳಿಗೆ ಮತ್ತು ಮಾಜೀ ತಾಲೂಕು ಪಂಚಾಯಿತಿ ಅಧ್ಯಕ್ಷ ಶ್ರೀ ರಾಜ ವಸಂತ ನಾಯಕರವರಿಗೆ ಸನ್ಮಾನ ಮಾಡುವ ಮೂಲಕ ಗೊರವಿಸಿದರು.

ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಪುರಸಭೆ ಚುನಾವಣೆ ನಡೆದು ಎರಡು ವರ್ಷಗಳ ಕಾಲ ಅಧಿಕಾರವಿಲ್ಲದೇ ಪರದಾಡುವ ಸ್ಥಿತಿ ಎದುರಾಗಿತ್ತು. ಸುಮಾರು ಎರಡು ವರ್ಷಗಳ ಕಾಲ ಅಧ್ಯಕ್ಷ ವಿಲ್ಲದೇ ಇದ್ದುದ್ದರಿಂದ ಅಧಿಕಾರಿಗಳದ್ದೇ ದರ್ಬಾರ್ ಇತ್ತು ಜನರಿಂದ ನೇರವಾಗಿ ಆಯ್ಕೆ ಯಾಗಿದ್ದರೂ ಏನನ್ನೂ ಮಾಡಲಾಗದೆ ಮತಹಾಕಿದ ಜನರ ಪ್ರಶ್ನೆ ಗಳಿಗೆ ಉತ್ತರಿಸಲು ಆಗದೇ ಹೆಣಗಾಡುತ್ತಿದ್ದ ಸದಸ್ಯ ರಿಗೆ ಈಗ ಅಧಿಕಾರಿಗಳಿಂದ ಬಿಡುಗಡೆ ಸ್ವಾತಂತ್ರ್ಯ ಸಿಕ್ಕು ನಿರಾಳ ಭಾವ ಅನುಭವಿಸುವ ಸಂದರ್ಭ ಒದಗಿ ಬಂದಿರುವುದು ಸಂತೋಷ, ಅಧಿಕಾರ ಇಲ್ಲದೇ ಇದ್ದ ಕಾರಣ ಎರಡು ವರ್ಷಗಳಲ್ಲಿ ವಾರ್ಡ್ ಸಭೆ ನಡೆಸಲು ಸಾಧ್ಯವಾಗಲಿಲ್ಲ ಇನ್ನು ಮುಂದೆ ಪ್ರತಿ ಮೂರು ತಿಂಗಳಿಗೊಮ್ಮೆ ವಾರ್ಡ್ ಸಭೆ ಗಳನ್ನ ನಡೆಸಲಾಗುವುದು ಎಂದು ಅವರು ಹೇಳಿದರು,

ಇಂದು ನೂತನ ಅಧ್ಯಕ್ಷರು ಶ್ರೀಮತಿ ಸುಫಿಯಾ ಬೇಗಂ, ನೂತನ ಉಪಾಧ್ಯಕ್ಷ ಶ್ರೀ ಸುಕುಮುನಿ, ನೂತನ ಮುಖ್ಯಾಧಿಕಾರಿ ಶ್ರೀ ಜಗದೀಶ್ ಮತ್ತು ಮಾಜಿ ತಾಲೂಕ ಪಂಚಾಯಿತಿ ಅಧ್ಯಕ್ಷ ಶ್ರೀ ರಾಜಾ ವಸಂತ ನಾಯಕ್ ರವರಿಗೆ ಸನ್ಮಾನಿಸಿ ಗೌರವಿಸುವುದು ಅಭಿನಂದಿಸುವುದು ನಮ್ಮ ಕರ್ತವ್ಯ ಹಾಗಾಗಿ ಇಂದು ವೆಲ್ಫೇರ್ ಪಾರ್ಟಿ ಯಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಸನ್ಮಾನ ಮಾಡುವುದು ತಲೆಯ ಮೇಲೆ ಕಲ್ಲು ಇಟ್ಟ ಹಾಗೆ ಹೊರಾಟ ಮಾಡುವುದಾಗಲಿ ಧರಣಿ ಮಾಡುವುದಾಗಲಿ ಬೇಕಾಗಿಲ್ಲ ಕೇವಲ ಸನ್ಮಾನ ಮಾತ್ರ ಸನ್ಮಾನಿತರಿಗೆ ದೊಡ್ಡ ಜವಾಬ್ದಾರಿ ಹಾಕುತ್ತದೆ. ಮುಂದಿನ ದಿನಗಳಲ್ಲಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ರ ಆಡಳಿತ ದಲ್ಲಿ ನಗರಕ್ಕೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಉತ್ತಮ ವಿದ್ಯುತ್ ದೀಪಗಳ ವ್ಯವಸ್ಥೆ ಮತ್ತು ಚರಂಡಿ ಸ್ವಚ್ಛ ತೆಯ ಕಾರ್ಯ ಅಚ್ಚುಕಟ್ಟಾಗಿ ನಡುಯುತ್ತೆ ಎಂದು ನಿರೀಕ್ಷೆ ಇದೆ ಎಂದು ಮಾಜಿ ತಾಲೂಕ ಪಂಚಾಯಿತಿ ಅಧ್ಯಕ್ಷ ಶ್ರೀ ರಾಜ ವಸಂತ ನಾಯಕ ಸಭಿಕರನ್ನುದ್ದೇಶಿಸಿ ಮಾತನಾಡಿದರು.

ವಾರ್ಡಿನ ಮುಖಂಡರಾದ ಸೈಯದ್ ಬಾಬುಲ್ ಮಾತನಾಡಿ ನಗರದಲ್ಲಿ ಮೂಲ ಸಮಸ್ಯೆ ಏನೆಂದು ತಿಳಿದು ಅದನ್ನು ಬಗೆಹರಿಸುವ ಇಚ್ಚಾಶಕ್ತಿ ಬೇಕಾಗಿದೆ ದೊಡ್ಡ ಸಮಸ್ಯೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮತ್ತು ಪ್ರತಿ ದಿನ ಕುಡಿಯುವ ನೀರು ನಗರಕ್ಕೆ ತಲುಪುವಂತೆ ಮಾಡಲು ಅಧ್ಯಕ್ಷ ರು ಉಪಾಧ್ಯಕ್ಷ ರು ಮೊದಲ ಆದ್ಯತೆಯಾಗಲಿ ಎಂದು ಸಲಹೆ ನೀಡಿದರು.

ನಂತರ ಸನ್ಮಾನ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ರಾಬಿತಯೇ ಮಿಲ್ಲತ್ ನ ಅಧ್ಯಕ್ಷ ಸೈಯದ್ ಅಕ್ಬರ್ ಪಾಷ, ಜಮಾಅತೆ ಇಸ್ಲಾಮಿ ಹಿಂದ್ ನ ಅಧ್ಯಕ್ಷ ಅಬ್ದುಲ್ ಕರೀಂ ಖಾನ್, ಮಹಿಳಾ ಮುಖಂಡರಾದ ಶ್ರೀಮತಿ ಶಕುಂತಲಾ ಮೇಡಮ್, ಬಾಬಾ ಮೇಸ್ತ್ರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜೀಲಾನಿ ಖುರೇಶಿ., ಎಮ್ ಏ ಎಚ್ ಮುಖೀಮ್, ಬಾಬ ಹುಸೇನ್, ಅಬ್ದುಲ್ ರಹ್ಮಾನ್ ಸಾಬ್, ಅಬ್ದುಲ್ ಖೈಯ್ಯೂಮ್, ದಾವೂದ್ ಸಿದ್ದೀಕಿ, ಆಮೀರ್ ಸಿದ್ದೀಕ್, ಫಯಾಜ್, ಇರ್ಫಾನ್, ಟೇಲರ್ ಮಹೇಬೂಬ್ ಸಾಬ್, ಬಾಬ ಬುಡನ್ ಸಾಬ್, ಅಸ್ಲಮ್ ಖಾನ್,ಅಲ್ಲಾಹ್ ಬಕ್ಷ್ ಮೊಜನ್ನು ಸಾಬ್, ಮತ್ತು ಪಕ್ಷದ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here