ಸರ್ವೋಚ್ಚ ನ್ಯಾಯಾಲಯ ಅನುಮತಿ ನೀಡಿದರೆ ಹೋಸ ಎನ್ ಆರ್ ಸಿ ಉಪಕ್ರಮ; ಅಸ್ಸಾಂ ಸಚಿವ ಹಿಮಂತ ಬಿಸ್ವ ಶರ್ಮ

ಆಧುನಿಕ ಮೋಗಲರು ಅಸ್ಸಾಮ್ ನ ಎಲ್ಲಕಡೆ ಪ್ರವೇಶಿಸಿದ್ದಾರೆ. ಇದನ್ನ ತಡೆಯಲು ಸುಧೀರ್ಗ ಹೊರಾಟ ಮಾಡುವುದು ಅಗತ್ಯವಿದೆ.

0
175

ಸರ್ವೋಚ್ಚ ನ್ಯಾಯಾಲಯ ಅನುಮತಿ ನೀಡಿದರೆ ಹೋಸ ಎನ್ ಆರ್ ಸಿ ಉಪಕ್ರಮ; ಅಸ್ಸಾಂ ಸಚಿವ ಹಿಮಂತ ಬಿಸ್ವ ಶರ್ಮ

ಗುವಾಹಟಿ, ನ.7; ಅಸ್ಸಾಂ ನಲ್ಲಿ ಹಿಂದಿನ ವರ್ಷ ಆಗಸ್ಟ್ ನಲ್ಲಿ ಬಿಡುಗಡೆಯಾಗಿರುವ ಎನ್ ಆರ್ ಸಿ ತಪ್ಪಾಗಿರುವುದು ಗೊತ್ತಿರುವ ವಿಚಾರ, ಸರ್ವೋಚ್ಚ ನ್ಯಾಯಾಲಯ ಅನುಮತಿ ನೀಡಿದರೆ ವಿಧಾನಸಭೆ ಚುನಾವಣೆ ನಡೆದ ನಂತರ ಹೋಸ ಎನ್ ಆರ್ ಸಿ ಉಪಕ್ರಮ ನಡೆಸಲಾಗುವುದು ಎಂದು ಅಸ್ಸಾಂ ಸಚಿವ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ ಎಂದು ಸುದ್ದಿ ತಿಳಿದು ಬಂದಿದೆ.

ಆಧುನಿಕ ಮೋಗಲರು ಅಸ್ಸಾಮ್ ನ ಎಲ್ಲಕಡೆ ಪ್ರವೇಶಿಸಿದ್ದಾರೆ. ಇದನ್ನ ತಡೆಯಲು ಸುಧೀರ್ಗ ಹೊರಾಟ ಮಾಡುವುದು ಅಗತ್ಯವಿದೆ.
ಈ ಎಲ್ಲಾ ಮೋಘಲರನ್ನು ಹೋರಹಾಕಲು ೫ ವರ್ಷದ ರಾಜಕೀಯ ಹೋರಾಟ ನಡೆಸಬೇಕಾಗುತ್ತದೆ. ಎನ್ ಆರ್ ಸಿಯ ಮಾಜಿ ರಾಜ್ಯ ಸಂಯುಜಕ ಪ್ರತೀಕ್ ಹಜೇಲ ಎನ್ ಆರ್ ಸಿ ಯಲ್ಲಿ ತಪ್ಪು ನುಸುಳು ಮೂಲ ಕಾರಣ. ಎನ್ ಅರ್ ಸಿಯ ಶೇ 15ರಷ್ಟು ಪರಿಷ್ಕರಣೆಗೆ ನ್ಯಾಲಯದ ಅನುಮತಿ ಕೋರುತ್ತೇವೆ ಎಂದು ಅವರು ಹೇಳಿದ್ದಾರೆ.

ಹಜೇಲ ಸಿದ್ದಪಡಿಸಿರುವ ಎನ್ ಆರ್ ಸಿಯಲ್ಲಿ ಆರ್ಥಿಕ ಅಸಂಗತತೆಯ ಬಗ್ಗೆ ಲೆಕ್ಕ ಪರಿಶೋಧಕರು ಆಕ್ಷೇಪ ಎತ್ತಿದ್ದಾರೆ.
ಅವರ ವರದಿಯನ್ನು ವಿಧಾನ ಸಭೆಯಲ್ಲಿ ಮಂಡಿಸಲಾಗುವುದು. ಧುಬ್ರಿ ಬರ್ಪೇಟ ಮುಂತಾದ ಕೆಲ ಜಿಲ್ಲೆºಗಳಲ್ಲಿ ಜನರು ತಮ್ಮದೇ ಆದ ಎನ್ ಆರ್ ಸಿ ರಚಿಸಿಕೋಂಡಿರುವ ಕಾರಣ ದತ್ತಸಂಚಯದಲ್ಲೇ ತಪ್ಪಾಗಿದೆ.

ಸುಪ್ರೀಮ ಕೋರ್ಟ್ನ ಮೇಲ್ವಿಚಾರಣೆಯಲ್ಲಿ ಎನ್ ಆರ್ ಸಿ ಪ್ರಕ್ರಿಯೆ ನಡೆದರೂ ಹಜೇಲ ಅವರು ಇದರ ಕೆಲವು ಅಂಶಗಳನ್ನ ತಿರುಚಿದ್ದು ಈಗ ಕಳ್ಳರು ಪೋಲೀಸ್ ಆದಂತಾಗಿದೆ ಎಂದು ಹಿಮಂತ ಬಿಸ್ವ ಶರ್ಮಾ ಅಸಮಧಾನ ವ್ಯಕ್ತ ಪಡಿಸಿದ್ದಾರೆಂದು ವರದಿ ಹೇಳಿದೆ.
ಹಿಂದಿನ ವರ್ಷದ ಆಗಸ್ಟ್ ೩೧ ರ ಎನ್ ಆರ್ ಸಿ ಅಚಿತಿಮ ಪಟ್ಟಿಯಿಂದ ೧೯ ಲಕ್ಷಕ್ಕೂ ಅಧಿಕ ಜನರ ಹೆಸರನ್ನ ಕೈಬಿಡಲಾಗಿದೆ.ಇದನ್ನ ಪ್ರಶ್ನಿಸಿ ಹಲವರು ಮೇಲ್ಮನವಿ ಸಲ್ಲಿಸಿದ್ದಾರೆ.

ಎನ್ ಆರ್ ಸಿ ಯಲ್ಲಿ ಅಕ್ರಮವಾಗಿ ಸರ‍್ಪಡೆಯಾಗಿರುವ ಹೆಸರನ್ನು ಅಳಿಸಿ ಹಾಕಲು ಕಳೆದ ತಿಂಗಳು ಅಸ್ಸಾಂ ಎನ್ ಆರ್ ಸಿ ಸಂಯೋಜಕರು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here