ಬಾಂಬ್ ಸ್ಫೋಟ : ಪತ್ರಕರ್ತ ಸೇರಿ ಮೂವರು ಹತರಾಗಿದ್ದಾರೆ. 

ಕಳೆದ ವಾರ ಕಾಬೂಲ್ ವಿಶ್ವವಿದ್ಯಾಲಯದಲ್ಲಿ ನಡೆದ ಉಗ್ರರ ದಾಳಿಯಲ್ಲಿ 24 ವಿದ್ಯಾರ್ಥಿಗಳು ಹತರಾಗಿ ಅನೇಕರು ತೀವ್ರ ಗಾಯಗೊಂಡಿದ್ದರು.

0
61

ಕಾಬೂಲ್,ನ.7- ಹಿಂಸಾಚಾರ ಪೀಡಿತ ಆಫ್ಘಾನಿಸ್ತಾನದಲ್ಲಿ ಉಗ್ರಗಾಮಿಗಳ ಅಟ್ಟಹಾಸ ಮುಂದುವರಿದಿದ್ದು, ಬಾಂಬ್ ದಾಳಿಯೊಂದರಲ್ಲಿ ಪರ್ತಕರ್ತ ಮತ್ತು ಮಾಜಿ ವಾರ್ತಾವಾಚಕ ಸೇರಿದಂತೆ ಮೂವರು ಹತರಾಗಿದ್ದಾರೆ.  ಆಫ್ಘಾನಿಸ್ತಾನದ ಟೋಲೊಟಿವಿಯಲ್ಲಿ ವಾರ್ತಾಉದ್ಭೋಕರಾಗಿದ್ದ ಪರ್ತಕರ್ತ ಯಾಮಾ ಸಿಯಾವಾಷ್ ಮತ್ತು ಇನ್ನಿಬ್ಬರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಉಗ್ರರು ಬಾಂಬ್ ದಾಳಿ ನಡೆಸಿದರು.

ಈ ಕೃತ್ಯದಲ್ಲಿ ಪತ್ರಕರ್ತ ಸೇರಿದಂತೆ ಮೂವರು ಹತರಾದರು ಎಂದು ಕಾಬೂಲ್ ಪೊಲೀಸರು ತಿಳಿಸಿದ್ದಾರೆ. ಇದು ತಾಲಿಬಾನ್ ಬಂಡುಕೋರರು ಅಥವಾ ಇಸ್ಲಾಮಿಕ್ ಸ್ಟೇಟ್ ಉಗ್ರರ ಕೃತ್ಯವಿರಬಹುದೆಂದು ಶಂಕಿಸಲಾಗಿದೆ. ಕಳೆದ ವಾರ ಕಾಬೂಲ್ ವಿಶ್ವವಿದ್ಯಾಲಯದಲ್ಲಿ ನಡೆದ ಉಗ್ರರ ದಾಳಿಯಲ್ಲಿ 24 ವಿದ್ಯಾರ್ಥಿಗಳು ಹತರಾಗಿ ಅನೇಕರು ತೀವ್ರ ಗಾಯಗೊಂಡಿದ್ದರು.

LEAVE A REPLY

Please enter your comment!
Please enter your name here