ಕುಡಿಯುವ ನೀರಿನ ಕೆರೆ ತುಂಬಿಸುವ ಕಾರ್ಯಕ್ಕೆ ನಗರಸಭಾಧ್ಯಕ್ಷರಿಂದ ಚಾಲನೆ.

ಬೇಸಿಗೆಯಲ್ಲಿ ನೀರಿನ ತೊಂದರೆಯಾಗದತೆ ಕ್ರಮ: ಮಲ್ಲಿಕಾರ್ಜುನ ಪಾಟೀಲ್

0
279

ಕುಡಿಯುವ ನೀರಿನ ಕೆರೆ ತುಂಬಿಸುವ ಕಾರ್ಯಕ್ಕೆ ನಗರಸಭಾಧ್ಯಕ್ಷರಿಂದ ಚಾಲನೆ, ಬೇಸಿಗೆಯಲ್ಲಿ ನೀರಿನ ತೊಂದರೆಯಾಗದತೆ ಕ್ರಮ: ಮಲ್ಲಿಕಾರ್ಜುನ ಪಾಟೀಲ್.

ಸಿಂಧನೂರು,ನ.6 – ತಾಲ್ಲೂಕಿನ ತುರ್ವಿಹಾಳದಲ್ಲಿರುವ ಕುಡಿಯುವ ನೀರಿನ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಚಾಲನೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೩೩೫ ಹೆಚ್ಪಿ ಸಾರ್ಮರ್ಥ್ಯಯುಳ್ಳ ಮೋಟಾರುಗಳಿಂದ ಕುಡಿಯುವ ನೀರಿನ ಕೆರೆಗೆ ನೀರು ತುಂಬಿಸಲಾಗುತ್ತಿದೆ. ೧೫ ದಿನಗಳಲ್ಲಿ ಸಂಪೂರ್ಣ ಕೆರೆ ಭರ್ತಿಯಾಗುವ ವಿಶ್ವಾಸವಿದೆ. ನಗರದ ಜನತೆಗೆ ಬೇಸಿಗೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದAತೆ ಕ್ರಮವಹಿಸಲಾಗುವುದು ಎಂದರು.

ನಗರದಲ್ಲಿರುವ ಬೃಹತ್ ಕುಡಿಯುವ ನೀರಿನ ಕೆರೆಗೆ ಈಗಾಗಲೇ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಶುದ್ಧಿಕರಣ ಘಟಕ ದುರಸ್ಥಿ ಹಾಗೂ ಕೆರೆಯ ಮೇಲೆ ಬೆಳೆದಿರುವ ಜಾಲಿಗಿಡಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ. ಈಗಾಗಲೇ ದೊಡ್ಡ ಕೆರೆಗೆ ನಗರಸಭೆ ಅನುದಾನದಲ್ಲಿ ಬಂಡ್ ಸರಿಪಡಿಸುವ ಕೆಲಸ ನಡೆದಿದ್ದು, ಒಂದು ವಾರದೊಳಗೆ ಕಾಮಗಾರಿ ಪೂರ್ಣಗೊಳಿಸಲು ಗುತ್ತೇದಾರ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಮುರ್ತುಜಾಹುಸೇನ್, ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ಎಇಇ ನಾನಾಸಾಹೇಬ್ ಮಡಿವಾಳ, ೨೪/೭ ಕುಡಿಯುವ ನೀರಿನ ಯೋಜನೆಯ ಎಇಇ ಗಿರೀಶ ನಾಯ್ಕ್, ಎಇ ಶರಣಬಸವ ಇತರರು ಇದ್ದರು.

LEAVE A REPLY

Please enter your comment!
Please enter your name here