ಕೋಲ್ಕತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್ ವಿರುದ್ಧ ಐಪಿಎಲ್ ಗೆಲುವು.

0
244

ದುಬೈ: ನಾಯಕ ಇಯಾನ್ ಮಾರ್ಗನ್ (68*) ಭರ್ಜರಿ ಬ್ಯಾಟಿಂಗ್ ಹಾಗೂ ವೇಗದ ಬೌಲರ್ ಪ್ಯಾಟ್ ಕಮಿನ್ಸ್ (4-34) ಮಾರಕ ಬೌಲಿಂಗ್ ದಾಳಿ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್ ವಿರುದ್ಧ ಇಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ 60 ರನ್‌ಗಳ ಗೆಲುವು ಸಾಧಿಸಿತು.

ಈ ಜಯದೊಂದಿಗೆ ಕೆಕೆಆರ್ ಪ್ಲೇ ಆಫ್ ಆಸೆಯನ್ನು ಜೀವಂತ ಇರಿಸಿಕೊಂಡಿತು.‌ ಆದರೂ ಮುಂದಿನ ಕೆಕೆಆರ್ ನ ಪ್ಲೇ ಆಫ್ ಹಂತಕ್ಕೇರಲು, ಆರ್ ಸಿಬಿ ಹಾಗೂ ಡೆಲ್ಲಿ, ಹೈದ್ರಾಬಾದ್ ಹಾಗೂ ಮುಂಬೈ ವಿರುದ್ಧದ ಫಲಿತಾಂಶ ದ ಮೇಲೆ ನಿರ್ಧಾರವಾಗಲಿದೆ.
ಸೋತ ರಾಜಸ್ಥಾನ, ಟೂರ್ನಿಯಿಂದ‌ ಹೊರಬಿತ್ತು. ಮಾಜಿ ಚಾಂಪಿಯನ್ ರಾಜಸ್ಥಾನ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಐಪಿಎಲ್ ಟೂರ್ನಿಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದೊಂದಿಗೆ ನಿರ್ಗಮಿಸಿತು.

ಕಮಿನ್ಸ್ ಮಾರಕ ದಾಳಿ:

192 ರನ್ ಗಳ ಬೃಹತ್ ಗುರಿ ಬೆನ್ನತ್ತಿದ ರಾಜಸ್ಥಾನ ಕೆಟ್ಟ ಆರಂಭ ಪಡೆಯಿತು. ಕೇವಲ 5 ಓವರ್ ಗಳಲ್ಲಿ ರಾಜಸ್ಥಾನ 37 ರನ್ ಗಳಿಗೆ ಅಗ್ರ ಕ್ರಮಾಂಕದ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಟ್ಲರ್ (35), ತೇವಾಟಿಯ (31), ಕೊನೆಯಲ್ಲಿ ಶ್ರೇಯಸ್ ಗೋಪಾಲ್ ಅಜೇಯ (23) ರನ್ ಗಳಿಸಿದ್ದು ಹೊರತುಪಡಿಸಿದರೆ ಉಳಿದ ಬ್ಯಾಟ್ಸ್‌ಮನ್ ಗಳು ನಿರಾಸೆ ಮೂಡಿಸಿದರು. ಅಂತಿಮ ವಾಗಿ ರಾಜಸ್ಥಾನ 20 ಓವರಲ್ಲಿ 9 ವಿಕೆಟ್ ಗೆ 131 ರನ್ ಗಳಿಸಿ ಸೋಲಪ್ಪಿತು.

ಮಾರ್ಗನ್ ಅಬ್ಬರ:

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ಕೂಡಾ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಇನ್ನಿಂಗ್ಸ್ ನ ಮೊದಲ ಓವರಲ್ಲಿ ನಿತೀಶ್ ರಾಣಾ (00) ನಿರ್ಗಮಿಸಿದರು. ‌2 ನೇ ವಿಕೆಟ್ ಗೆ ಶುಭ್ ಮನ್ ಗಿಲ್ ಹಾಗೂ ತ್ರಿಪಾಠಿ 72 ರನ್ ಗಳ ಜೊತೆಯಾಟದ ‌ಕಾಣಿಕೆ ನೀಡಿದರು. ಗಿಲ್ (36), ನರೈನ್ (0), ಒಬ್ಬರ ಹಿಂದೆ ಒಬ್ಬರು ನಿರ್ಗಮಿಸಿದರು. ರಾಹುಲ್ ತ್ರಿಪಾಠಿ (39) ಹೆಚ್ಚು ಹೊತ್ತು ನಿಲ್ಲಲಿಲ್ಲ. ದಿನೇಶ್ ಕಾರ್ತಿಕ್ (0) ಮತ್ತೆ ನಿರಾಸೆ ಮೂಡಿಸಿದರು. ‌ಬಿರುಸಿನ‌ ಬ್ಯಾಟಿಂಗ್ ನಡೆಸಿದ ಮಾರ್ಗನ್ 35 ಎಸೆತಗಳಲ್ಲಿ 6 ಸಿಕ್ಸರ್, 5 ಬೌಂಡರಿ ಯೊಂದಿಗೆ 68* ರನ್ ಗಳಿಸಿದರೆ, ರಸೆಲ್ 11 ಎಸೆತಗಳಲ್ಲಿ 3 ಸಿಕ್ಸರ್ ಸಹಿತ 25 ರನ್ ಚಚ್ಚಿದರು. ಕೆಕೆಆರ್ 20 ಓವರಲ್ಲಿ 7 ವಿಕೆಟ್‌ ಗೆ 191 ರನ್ ಗಳಿಸಿತು.

ಸ್ಕೋರ್ ವಿವರ:

ಕೋಲ್ಕತಾ ನೈಟ್ ರೈಡರ್ಸ್ 20 ಓವರಲ್ಲಿ 191/7
ಗಿಲ್ ಸಿ ಬಟ್ಲರ್ ಬಿ ತೇವಾಟಿಯ 36(24)
ರಾಣಾ ಸಿ‌ ಸಂಜು ಬಿ‌ ಆರ್ಚರ್ 00(01)
ತ್ರಿಪಾಠಿ ಸಿ ಉತ್ತಪ್ಪ ಬಿ ಶ್ರೇಯಸ್ 39(34)
ನರೈನ್ ಸಿ ಸ್ಟೋಕ್ಸ್ ಬಿ ತೇವಾಟಿಯ 00(02)
ಮಾರ್ಗನ್ ಅಜೇಯ 68(35)
ಕಾರ್ತಿಕ್ ಸಿ ಸ್ಮಿತ್ ಬಿ ತೇವಾಟಿಯ 00(01)
ರಸೆಲ್ ಸಿ(ಸಬ್) ಮಿಲ್ಲರ್ ಬಿ ತ್ಯಾಗಿ 25(11)
ಕಮಿನ್ಸ್ ಸಿ ಸಂಜು ಬಿ ತ್ಯಾಗಿ 15(11)
ಕಮಲೇಶ್ ಅಜೇಯ 01(01)
ಇತರೆ: 07(ಲೆಗ್ ಬೈ 05, ವೈಡ್ 02)
ವಿಕೆಟ್‌ ಪತನ: 1-1(ರಾಣಾ), 2-73(ಗಿಲ್), 3-74(ನರೈನ್), 4-94(ತ್ರಿಪಾಠಿ), 5-99(ಕಾರ್ತಿಕ್), 6-14(ರಸೆಲ್), 7-184(ಕಮಿನ್ಸ್)

ಬೌಲಿಂಗ್: ಆರ್ಚರ್ 4-0-19-1, ಆ್ಯರೋನ್ 2-0-22-0, ಶ್ರೇಯಸ್ ಗೋಪಾಲ್ 3-0-44-1, ಸ್ಟೋಕ್ಸ್ 3-0-40-0, ತೇವಾಟಿಯ 4-0-25-3, ತ್ಯಾಗಿ 4-0-36-2.

ರಾಜಸ್ಥಾನ ರಾಯಲ್ಸ್ 20 ಓವರಲ್ಲಿ 131/9
ಉತ್ತಪ್ಪ ಸಿ ಕಮಲೇಶ್ ಬಿ ಕಮಿನ್ಸ್ 06(02)
ಸ್ಟೋಕ್ಸ್ ಸಿ ಕಾರ್ತಿಕ್ ಬಿ ಕಮಿನ್ಸ್ 18(11)
ಸ್ಮಿತ್ ಬಿ ಕಮಿನ್ಸ್ 04(04)
ಸಂಜು ಸಿ ಕಾರ್ತಿಕ್ ಬಿ ಮಾವಿ 01(04)
ಬಟ್ಲರ್ ಸಿ ಕಮಿನ್ಸ್ ಬಿ ಚಕ್ರವರ್ತಿ 35(22)
ರಿಯಾನ್ ಸಿ ಕಾರ್ತಿಕ್ ಬಿ ಕಮಿನ್ಸ್ 00(07)
ತೇವಾಟಿಯ ಸಿ ಕಾರ್ತಿಕ್ ಬಿ ಚಕ್ರವರ್ತಿ 31(27)
ಶ್ರೇಯಸ್ ಗೋಪಾಲ್ ಅಜೇಯ 23(23)
ಆರ್ಚರ್ ಸಿ ಮಾವಿ ಬಿ ಕಮಲೇಶ್ 06(09)
ತ್ಯಾಗಿ ಸಿ ಮತ್ತು ಬಿ ಮಾವಿ 02(03)
ಆ್ಯರೋನ್ ಅಜೇಯ 00(08)
ಇತರೆ: 1-19(ಉತ್ತಪ್ಪ), 2-27(ಸ್ಟೋಕ್ಸ್), 3-32(ಸ್ಮಿತ್), 4-32(ಸಂಜು), 5-37(ರಿಯಾನ್), 6-80(ಬಟ್ಲರ್), 7-105(ತೇವಾಟಿಯ), 8-125(ಆರ್ಚರ್), 9-129(ತ್ಯಾಗಿ)

ಬೌಲಿಂಗ್: ಕಮಿನ್ಸ್ 4-0-34-4, 4-1-15-2, ಚಕ್ರವರ್ತಿ 4-0-20-2, ನರೈನ್ 4-0-37-0, ಕಮಲೇಶ್ 4-0-24-1

ಪಂದ್ಯ ಶ್ರೇಷ್ಠ: ಪ್ಯಾಟ್ ಕಮಿನ್ಸ್

LEAVE A REPLY

Please enter your comment!
Please enter your name here