ಗ್ರಾಮೀಣ ಭಾಗದ ಜನರಿಗೆ ಒಳ್ಳೆಯ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕೆಂಬ ಆಶಯದೊಂದಿಗೆ ಹೃದ್ರೋಗ ಚಿಕಿತ್ಸಾ ಕೇಂದ್ರ ಆರಂಭ: ಪರಮೇಶ್ವರ್

ತಂದೆ ಮತ್ತು ಸಹೋದರರ ಆಶಯದಂತೆ ಹೃದ್ರೋಗ ಚಿಕಿತ್ಸಾ ಕೇಂದ್ರ ಆರಂಭ: ಪರಮೇಶ್ವರ್

0
185

ತುಮಕೂರು. ಅ. 27- ನಮ್ಮ ತಂದೆ ಮತ್ತು ಸಹೋದರರ ಆಶಯದಂತೆ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಹೃದ್ರೋಗ ಚಕಿತ್ಸಾ ಕೇಂದ್ರವನ್ನು ತೆರೆದಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶ್ರೀಸಿದ್ದಾರ್ಥ ಹೈಯರ್ ಎಜುಕೇಷನ್ ಸೊಸೈಟಿಯ ಕುಲಾಧಿಪತಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ನಗರದ ಶ್ರೀಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಅತ್ಯಾಧುನಿಕ, ಸುಸಜ್ಜಿತ ಹೃದ್ರೋಗ ಚಿಕಿತ್ಸೆ ಮತ್ತು ತಪಾಸಣಾ ಕೇಂದ್ರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಲಾಭದ ಉದ್ದೇಶದಿಂದ ಈ ಕೇಂದ್ರ ತೆರೆದಿಲ್ಲ. ಬದಲಾಗಿ ಗ್ರಾಮೀಣ ಜನರಿಗೆ ಕೈಗೆಟುಕುವ ದರದಲ್ಲಿ ಹೃದ್ರೋಗಗಳಿಗೆ ಚಿಕಿತ್ಸೆ ದೊರೆಯುವಂತಾಗಬೇಕು ಎಂಬ ಆಶಯದೊಂದಿಗೆ ಆರಂಭಿಸಲಾಗಿದೆ. ನಿಜಕ್ಕೂ ಇದು ಒಂದು ಸವಾಲು, ಈ ಚಾಲೆಂಜ್‌ನ್ನು ಡಾ. ತಮ್ಮೀಮ್ ಅಹಮದ್ ನೇತೃತ್ವದ ಯುವ ವೈದ್ಯರ ತಂಡ ಸಾಧಿಸಿ ತೋರಿಸಲಿದೆ ಎಂಬ ಆಶಾಭಾವನೆ ನಮ್ಮದು ಎಂದರು.

ಗ್ರಾಮೀಣ ಭಾಗದ ಜನರಿಗೆ ಒಳ್ಳೆಯ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕೆಂಬ ಆಶಯದೊಂದಿಗೆ ಆಸ್ಪತ್ರೆಯನ್ನು ನಡೆಸಿಕೊಂಡು ಹೋಗುತ್ತಿದ್ದೇವೆ. ವಿಶ್ವದರ್ಜೆ ಗುಣಮಟ್ಟದ ಯಂತ್ರೋಪಕರಣಗಳೊಂದಿಗೆ ಹೃದ್ರೋಗ ತಪಾಸಣಾ, ಚಿಕಿತ್ಸೆ, ಶಸ್ತ್ರಚಿಕಿತ್ಸಾ ಕೇಂದ್ರವನ್ನು ಆರಂಭಿಸಲಾಗಿದೆ. ಐಐಎಂನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಲಿತು, ಹತ್ತಾರು ವರ್ಷಗಳ ಕಾಲ ವೈದ್ಯಕೀಯ ವೃತ್ತಿ ನಿರ್ವಹಿಸಿದ ವೈದ್ಯರ ತಂಡ ದಿನದ ೨೪ ಗಂಟೆಯೂ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಿದೆ. ಇದನ್ನು ಹೆಚ್ಚು ಹೆಚ್ಚು ಜನರು ಬಳಸಿಕೊಳ್ಳುವಂತಾಗಬೇಕು ಎಂದರು.

LEAVE A REPLY

Please enter your comment!
Please enter your name here