ಮಾಜಿ ಸಿ.ಎಂ. ಸಿದ್ದರಾಮಯ್ಯ ಅಣಬಿರೋಜಾ ಗ್ರಾಮದ ಹಜರತ್ ತವಕಲ್ ಸಾಹೇಬ್ ದರ್ಗಾಕ್ಕೆ ಬೇಟಿ

ವಿಕ್ಷಣೆ, ಅಹವಾಲಿಗೆ ಮಾತ್ರ ಸೀಮಿತವಾದ ಮಾಜಿ ಸಿ.ಎಂ ಭೇಟಿ

0
71

ಶಹಾಪುರ:ಅ.27: ಪ್ರವಾಹ ಸಮೀಕ್ಷಣೆಗೆಂದು ಆಗಮಿಸಿದ, ಮಾಜಿ ಸಿ.ಎಂ. ಸಿದ್ದರಾಮಯ್ಯನರು ನದಿ ತಟದ ನದಿ ತಟದ ಅಣಬಿ, ರೋಜಾ, ಹುರಸಗುಂಡಗಿ, ನಾಯ್ಕಲ್ ಗ್ರಾಮಗಳಿಗೆ ಬೇಟಿ ನೀಡಿ ಹೊಲಗದ್ದೆಗನ್ನು ವಿಕ್ಷಿಸಿ ಪರಿಸ್ಥಿತಿ ಅವಲೋಕಿಸಿದರು.

ತಾಲೂಕಿನ ಅಣಬಿರೋಜಾ ಗ್ರಾಮದ ಹಜರತ್ ತವಕಲ್ ಸಾಹೇಬ್ ದರ್ಗಾಕ್ಕೆ ಬೇಟಿ ನೀಡಿ ಅಲ್ಲಿಂದ ವಿಶಾಲ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ನಷ್ಠವಾಗಿದ್ದ ಬೆಳೆಗಳನ್ನು ವಿಕ್ಷಿಸಿದರು.

ಆದರೆ ಗ್ರಾಮದ ಜನರ ನೋವನ್ನು ಆಲಿಸದೆ, ಅಹವಾಲುಗಳನ್ನು ಮಾತ್ರ ಸ್ವಿಕರಿಸಿ ಮುನ್ನಡೆದು ನಂತರ ಹುರಸಗುಂಡಗಿ ಗ್ರಾಮಕ್ಕೆ ಪ್ರಯಾಣಿಸಿ ಅಲ್ಲಿಯು ಅಹವಾಲು ಮತ್ತು ಜೈಕಾರಗಳೆ ಮೋಳಗಿದವು, ಗ್ರಾಮದ ಕೆಲ ಜನರು ತಮ್ಮ ನೋವನ್ನು ಹೇಳಿದರು, ನುಕುನುಗ್ಗಾಟ ಮತ್ತು ಭದ್ರತಾ ದೃಷ್ಠಿಯಿಂದ ಜನರಿಗೆ ಸ್ಪಂದನೆ ಸಿಗದ ಕಾರಣ ಗ್ರಾಮಸ್ಥರು ಹತಾಶರಾಗಿದರು.

ಕೊನೆಗೆ ನಾಯ್ಕಲ್ ಗ್ರಾಮಕ್ಕೆ ಬೇಟಿ ನೀಡಿ, ರಸ್ತೆಯಲ್ಲಿಯೆ ಗ್ರಾಮದ ಜನರು ಪತ್ರಗಳನ್ನು ಸ್ವಿಕರಿಸಿ ಮುನ್ನಡೆದರು. ಈ ಗ್ರಾಮದಲ್ಲಿ ಹಲವಾರು ಮಹಿಳೆಯರು ತಮ್ಮ ನೋವನ್ನು ವ್ಯಕ್ತಪಡಿಸುತ್ತಿದರು, ಸಿದ್ದರಾಮಯ್ಯನವರಾಗಲಿ, ಯಾವುದೆ ಜನಪ್ರತಿನದಿಯಾಗಲಿ ಅವರಿಗೆ ಸ್ಪಂದನೆ ಸಿಗಲಿಲ್ಲ, ಉಪ ಚುನಾವಣೆಗಳ ಮದ್ಯಯೆ ವಿರೋಧ ಪಕ್ಷದ ನಾಯಕರ ಪ್ರವಾಹ ಪೀಡಿತ ಗ್ರಾಮಗಳ ಬೇಟಿ, ವಿಕ್ಷಣೆ ಮತ್ತು ಅಹವಾಲುಗಳಿಗೆ ಮಾತ್ರ ಸಿಮಿತವಾದಂತೆ ಕಾಣುತ್ತಿತು.

LEAVE A REPLY

Please enter your comment!
Please enter your name here