ಕೊರೊನಾ ವೈರಸ್‍ ಹೆಮ್ಮಾರಿಯ ಆರ್ಭಟ ಗರಿಷ್ಠಕ್ಕೇರಿ ಇಳಿಮುಖದತ್ತ ಸಾಗಿದೆ.

0
274

ನವದೆಹಲಿ/ಮುಂಬೈ,ಅ.27-ದೇಶಾದ್ಯಂತ ಮಾರಕ ಕೊರೊನಾ ವೈರಸ್‍ನ ಹಾವಳಿ ಕ್ರಮೇಣ ತಗ್ಗುತ್ತಿದ್ದು, ಪೀಡೆ ತೊಲಗುವ ಸ್ಪಷ್ಟ ಸೂಚನೆಗಳು ಲಭಿಸುತ್ತಿವೆ. ದಿನನಿತ್ಯದ ಸೋಂಕು, ಸಕ್ರಿಯ ಮತ್ತು ಸಾವು ಪ್ರಕರಣಗಳು ದಿನೇ ದಿನೇ ಕ್ಷೀಣಿಸುತ್ತಿರುವುದು ಭಾರತೀಯರಲ್ಲಿ ಸಮಾಧಾನ ಮೂಡಿಸಿದ್ದು, ಭರವಸೆಯ ಬೆಳಕು ಮತ್ತಷ್ಟು ಉಜ್ವಲವಾಗಿದೆ.  ಹೆಮ್ಮಾರಿಯ ಆರ್ಭಟ ಗರಿಷ್ಠಕ್ಕೇರಿ ಇಳಿಮುಖದ ಹಾದಿಯಲ್ಲಿ ಸಾಗುತ್ತಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.

101 ದಿನಗಳ ಬಳಿಕ ದಿನನಿತ್ಯದ ಸೋಂಕು ಪ್ರಕರಣ ಇದೇ ಮೊದಲ ಬಾರಿಗೆ 40,000ಕ್ಕಿಂತ ಕಡಿಮೆಯಾಗಿರುವುದು ಇಲ್ಲಿ ಗಮನಾರ್ಹ. ನಿನ್ನೆ ಮತ್ತೆ ಹೊಸ ಪ್ರಕರಣಗಳಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಸತತ ಒಂಬತ್ತನೇ ದಿನ 60,000ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಪಾಸಿಟಿವ್ ಕೇಸ್‍ಗಳು ವರದಿಯಾಗಿದೆ. ಅಲ್ಲದೇ ಸತತ 12ನೇ ದಿನವೂ ಸಕ್ರಿಯ ಸೋಂಕು ಪ್ರಕರಣಗಳು 8 ಲಕ್ಷಕ್ಕಿಂತ ಕಡಿಮೆ ಮಟ್ಟದಲ್ಲಿ ಇಳಿಮುಖದತ್ತ ಸಾಗಿದೆ.

ಇದಲ್ಲದೇ ಎರಡು ತಿಂಗಳ ಬಳಿಕ ಆಕ್ಟಿವ್ ಕೇಸ್‍ಗಳು ಕಳೆದ ಐದು ದಿನಗಳಿಂದ 7 ಲಕ್ಷಕ್ಕಿಂತ ಕಡಿಮೆಗೆ ಇಳಿದಿದೆ. ಇದೇ ವೇಳೆ ಸಾವಿನ ಸಂಖ್ಯೆಯೂ ಗಣನೀಯವಾಗಿ ತಗ್ಗಿದೆ. 24 ತಾಸುಗಳ ಅವಧಿಯಲ್ಲಿ 36,470 ಮಂದಿಗೆ ಹೊಸದಾಗಿ ರೋಗ ಕಾಣಿಸಿಕೊಂಡಿದೆ.. ಮೊನ್ನೆ ಈ ಪ್ರಮಾಣವು 45,148ರಷ್ಟಿತ್ತು. ಒಂದೇ ದಿನ ಪಾಸಿಟಿವ್ ಕೇಸ್‍ಗಳಲ್ಲಿ ಭಾರೀ ಅಂತರ ಕಂಡುಬಂದಿದೆ.

ಮೂರುವರೆ ತಿಂಗಳ ಬಳಿಕ ಇಷ್ಟು ಪ್ರಮಾಣಗಳಲ್ಲಿ ಪ್ರಕರಣಗಳು ತಗ್ಗಿರುವುದು ಇದೇ ಮೊದಲು. ದಿನನಿತ್ಯದ ಪಾಸಿಟಿವ್ ಕೇಸ್‍ಗಳಲ್ಲಿ ಸತತ ಒಂಭತ್ತನೇ ದಿನ 60,000ಕ್ಕಿಂತ ಕಡಿಮೆ ವರದಿಯಾಗಿರುವುದು ಮತ್ತು ಇಳಿಮುಖದ ಹಾದಿಯ ಸ್ಪಷ್ಟ ಸೂಚನೆ ನೀಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಈ ತಿಂಗಳಲ್ಲಿ ಮೂರನೇ ಬಾರಿ 50,000ಕ್ಕಿಂತ ಕಡಿಮೆ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಅಲ್ಲದೇ 101 ದಿನಗಳ ಬಳಿಕ 37,000ಕ್ಕಿಂತ ಕಡಿಮೆಯಾಗಿದೆ.

ಇದೇ ವೇಳೆ ದಿನನಿತ್ಯದ ಸಾವು ಪ್ರಕರಣಗಳಲ್ಲೂ ಇಳಿಕೆ ಕಂಡು ಬಂದಿದ್ದು, 24 ತಾಸುಗಳ ಅವಧಿಯಲ್ಲಿ 488 ಮಂದಿ ಸೋಂಕು ರೋಗಕ್ಕೆ ಬಲಿಯಾಗಿದ್ದಾರೆ. ಮೂರುವರೆ ತಿಂಗಳ (109 ದಿನಗಳು) ಬಳಿಕ 500ಕ್ಕಿಂತ ಕಡಿಮೆ ಸಾವುಗಳು ದಾಖಲಾಗಿರುವುದು ಇದು ಸತತ ಎರಡನೇ ದಿನ  ಇವುಗಳ ನಡುವೆಯೂ ದೇಶದಲ್ಲಿ ಸೋಂಕಿತರ ಪ್ರಮಾಣ 79.46 ಲಕ್ಷ ಮತ್ತು ಮೃತರ ಸಂಖ್ಯೆ 1.19 ಲಕ್ಷ ದಾಟಿರುವುದು ಜನರಲ್ಲಿ ಆತಂಕ ಮುಂದುವರಿಯುವಂತೆ ಮಾಡಿದೆ.

ಈವರೆಗೆ ಗುಣಮುಖರಾದ ಸೋಂಕಿತರ ಸಂಖ್ಯೆ 72.01 ಲಕ್ಷ ದಾಟಿದೆ. ಚೇತರಿಕೆ ಪ್ರಮಾಣ ಶೇ.90.45ರಷ್ಟು ಏರಿಕೆ ಮತ್ತು ಸಾವಿನ ಪ್ರಮಾಣ ಶೇ.1.50ರಷ್ಟು ತಗ್ಗಿದ್ದು, ಜನರಲ್ಲಿ ನಿರಾಳತೆ ಮೂಡಿದೆ.  ದೇಶದಲ್ಲಿ ಮೃತರ ಸಂಖ್ಯೆ 1,19,502 ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ನಾಳೆ ವೇಳೆಗೆ ಎರಡು ಲಕ್ಷ ದಾಟುವ ಆತಂಕವೂ ಇದೆ.

ಭಾರತದಲ್ಲಿ ಒಟ್ಟು ರೋಗಿಗಳ ಸಂಖ್ಯೆ 79,46,429ರಷ್ಟಿದ್ದು, ನಾಳೆ ವೇಳೆಗೆ 80 ಲಕ್ಷ ದಾಟುವ ಸಾಧ್ಯತೆ ಇದೆ. ಆಗಸ್ಟ್ 7ರಂದು 20 ಲಕ್ಷ ಇದ್ದ ಪಾಸಿಟಿವ್ ಪ್ರಕರಣಗಳು ಆ.23ಕ್ಕೆ 30 ಲಕ್ಷಕ್ಕೇರಿತ್ತು. ನಂತರ ಸೆಪ್ಟೆಂಬರ್ 5ರಂದು 40 ಲಕ್ಷ ದಾಟಿತ್ತು. ಕೇವಲ 11 ದಿನಗಳಲ್ಲಿ ಅಂದರೆ ಸೆ.16ರಂದು 50 ಲಕ್ಷ ದಾಟಿದೆ. ಸೆ.28ರಂದು 60 ಲಕ್ಷ ಮೀರಿದೆ. ಅ.11ರಂದು 70 ಲಕ್ಷ ತಲುಪಿದೆ. ಅ.28ರಂದು 80 ಲಕ್ಷ ಮುಟ್ಟಲಿದೆ.

45 ದಿನಗಳ ಬಳಿಕ ಕಳೆದ ಒಂಭತ್ತು ದಿನಗಳಿಂದ ಆಕ್ಟಿವ್ ಕೇಸ್‍ಗಳು 8 ಲಕ್ಷಕ್ಕಿಂತ ಕಡಿಮೆ ಇಳಿದಿದ್ದು, ಕಳೆದ ಐದು ದಿನಗಳಿಂದಲೂ ಏಳು ಲಕ್ಷಕ್ಕಿಂತ ಕಡಿಮೆ ಮಟ್ಟದಲ್ಲಿ ಸಾಗಿದೆ. ನಿನ್ನೆ 6,25,857ರಷ್ಟು ದಾಖಲಾಗಿದೆ. ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲಿವೆ. ಆದರೂ ಚೇತರಿಕೆ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಮಹಾರಾಷ್ಟ್ರ ರಾಜ್ಯವು ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಅಗ್ರ ಸ್ಥಾನದಲ್ಲೇ ಮುಂದುವರಿದಿದೆ.

ಮತ್ತೊಂದು ಗಮನಾರ್ಹ ಸಂಗತಿ ಎಂದರೆ ಸೋಂಕು ಪ್ರಕರಣಗಳಲ್ಲಿ ಗರಿಷ್ಠ ಮಟ್ಟ ತಲುಪಿದ್ದ ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದಿನನಿತ್ಯದ ಪಾಸಿಟಿವ್ ಕೇಸ್‍ಗಳು ಕಡಿಮೆಯಾಗುತ್ತಿದ್ದು, ಚೇತರಿಕೆ ಪ್ರಮಾಣದಲ್ಲಿ ಗಣನೀಯ ಹೆಚ್ಚಳ ಮುಂದುವರಿದಿದೆ. ಅಲ್ಲದೇ ಸರಾಸರಿ ಸಾವಿನ ಸಂಖ್ಯೆ ಶೇ.1ಕ್ಕಿಂತಲೂ ಕಡಿಮೆ ಇದೆ.

ಈ ಮಧ್ಯೆ ಐಸಿಎಂಆರ್ ದೇಶಾದ್ಯಂತ ನಿನ್ನೆ. 9.58 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾ ವೈರಸ್ ಸೋಂಕು ತಪಾಸಣೆ ನಡೆಸಿದ್ದು, ಈವರೆಗೆ 10.44 ಲಕ್ಷಕ್ಕೂ ಹೆಚ್ಚು ಜನರನ್ನು ಕೋವಿಡ್-19 ಸ್ಯಾಂಪಲ್ ಟೆಸ್ಟ್‍ಗೆ ಒಳಪಡಿಸಲಾಗಿದೆ.

LEAVE A REPLY

Please enter your comment!
Please enter your name here