ಬಾಲಿವುಡ್ ನಟಿ ಕಂಗನಾ ರಣಾವತ್ ಪ್ರಕರಣ: 9 ಪತ್ರಕರ್ತರಿಗೆ ವಿಮಾನಯಾನ ನಿಷೇಧ

0
151

ಮುಂಬೈ,ಅ. 25- ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಪ್ರಕಣಕ್ಕೆ ಸಂಬಂಧಿಸಿದಂತೆ 9 ಪತ್ರಕರ್ತರಿಗೆ ಎರಡು ವಾರಗಳ ಕಾಲ ಇಂಡಿಗೋ ವಿಮಾನಯಾನ ಸಂಸ್ಥೆ ನಿಷೇದ ಹೇರಿದೆ.

ಸೆಪ್ಟೆಂಬರ್ 9 ರಂದು ನಟಿ ಕಂಗನಾ ಕಣಾವತ್ ಅವರು ಚಂಡಿಗಡದಿಂದ ಮುಂಬೈಗೆ‌ ಇಂಡಿಗೋ ವಿಮಾನದಲ್ಲಿ ನಿಮಯ ಉಲ್ಲಂಘಿಸಿದ ಆರೋಪದ ಮೇಲೆ ಈ ಕ್ರಮ ಕೈಗೊಳಗಳಲಾಗಿದೆ.

ಕಂಗನಾ ವಿಮಾನದಲ್ಲಿ ಬರುವ ವೇಳೆ ವಿಮಾನದಲ್ಲಿ ಮಾದ್ಯಮಗಳು ಚಿತ್ರೀಕರಣ ಮಾಡಿದ್ದವು. ಇದು ನಿಯಮ‌ ಉಲ್ಲಂಘನೆಯಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಯಲ ಇಂಡಿಗೋ ವಿಮಾ ನಯಾ ಸಂಸ್ಥೆಯಿಂದ ವರದಿ ಕೇಳಿತ್ತು.

ಇಂಡಿಗೋ ವಿಮಾನ 6ಇ -264 ವಿಮಾನದಲ್ಲಿ ಚಿತ್ರೀಕರಣ ಮಾಡಿದ್ದ 9 ಪತ್ರಕರ್ತರಿಗೆ ಅಕ್ಟೋಬರ್ 15 ರಿಂದ 30 ರವೆಗೆ ವಿಮಾನಯಾನ ಸಂಚಾರ ಹಾಕಲಾಗಿದೆ.‌ಅದು ಮುಗಿಯಲು ಇನ್ಜು ಕೆಲವೇ ದಿನ‌ಬಾಕಿ ಇದೆ.

ವಿಮಾನದಲ್ಲಿ ಅನುಚಿತವಾಗಿ ವರ್ತಿಸಿದ ವಿಮಾಣಿಕರ ವಿರುದ್ಧ ಕ್ರಮ ಕೈಗೊ್ಳುವಂತೆ ನಾಗರಿಕ ವಿಮಾನಯಾನ ಸಚಿವಾಲಯ ಇಂಡೊಗೋ‌ ವಿಮಾನಯಾನ ಸಂಸ್ಥೆ ಗೆ ಸೂಚನೆ ನೀಡಿತ್ತು.

ಈ‌ ಹಿನ್ನೆಲೆಯಲ್ಲಿ ಇಂಡಿಗೋ‌ ವಿಮಾನ 9 ಪತ್ರಕರ್ತರ‌ ವಿರುದ್ದ. ಹದಿನೈದು ದಿನ ವಿಮಾನ ಸಂಚಾರ ಪ್ರಯಾಣ ನಿಷೇದಿಸಿದೆ.

ಮುಂಬೈ ಪಾಕಿಸ್ತಾನದ ಆಕ್ರಮಿತ ಕಾಶ್ಮೀರದಂತೆ ಇದೆ ಎನ್ನುವ ಮೂಲಕ ನಟಿ ಕಂಗನಾ ರಣಾವತ್ ಆರೋಪ ಮಾಡಿದ್ದರು. ಈ ಆರೋಪ ಆಢಳಿತಾರೂಡ ಶಿವಸೇನೆ ನಾಯಕರು ಮತ್ತು ಕಾರ್ಯಕರ್ತ ರನ್ನು ಕೆರಳಿಸಿತ್ತು.

ಈ ಹಿನ್ನೆಲೆಯಲ್ಲಿ ನಟಿ ಕಂಗನಾಗೆ ಕೇಂದ್ರ ಸರ್ಕಾರ ವೈ ಪ್ಲಸ್ ಶ್ರೇಣಿಯ ಭದ್ರತೆ ನೀಡಿತ್ತು.
ಈ ಘಟನೆಯ ಬಳಿಕವೂ ಮಹಾರಾಷ್ಟ್ರ ಸರ್ಕಾರ ಮತ್ತು ನಟಿ ಕಂಗನಾ ಅವರ ಮಧ್ಯೆ ಆರೋಪ‌ ಪ್ರತ್ಯಾರೋಪ‌ ಮುಂದುವರಿದಿದೆ.

LEAVE A REPLY

Please enter your comment!
Please enter your name here