ರಿಮ್ಸ್ ಆಸ್ಪತ್ರೆಯಲ್ಲಿ ಅವ್ಯವಹಾರ-ಶಿಸ್ತಿನ ಕ್ರಮ

0
155

ರಾಯಚೂರು.ಅ.06- ನಗರದ ರಿಮ್ಸ್ ಆಸ್ಪತ್ರೆ ಕೊಠಡಿ ಸಂಖ್ಯೆ 101 ವಿಕಲಚೇತನರಿಗೆ ವೈದ್ಯಕೀಯ ಪ್ರಮಾಣ ಪತ್ರ ನೀಡುವಲ್ಲಿ ವಿಕಲಚೇತನರ ಪುನರ್ವಸತಿ ಕೇಂದ್ರ (ಡಿಡಿಆರ್‌ಸಿ) ಅವ್ಯವಹಾರ ನಡೆಯುತ್ತಿದೆ ಎಂದು ಆಗ್ರಹಿಸಿ ಹೈದರಾಬಾದ್ ಕರ್ನಾಟಕ ವಿಕಲಚೇತನರ ಹೋರಾಟ ಸಮೀತಿ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ.ಡಿ ರಫೀ ಕಂಪ್ಯೂಟರ್ ಆಪರೇಟರ್ ಮತ್ತು ಹನುಮಂತು ನೋಡಲ್ ಆಪೀಸರ್ ಹಾಗೂ ಆನಂದ, ಚಂದ್ರು ಇವರು ವಿಕಲಚೇತನರಿಗೆ ವೈದ್ಯಕೀಯ ಪ್ರಮಾಣ ಪತ್ರ ನೀಡಲು ವಿಕಲಚೇತನರ ಬಳಿ ಹಣವನ್ನು ಪಡೆದುಕೊಂಡು ಪ್ರಮಾಣ ಪತ್ರ ನೀಡುತ್ತಿದ್ದಾರೆ.
ಈ ಹಣ ಪಡೆದುಕೊಂಡಿರುವುದಕ್ಕೆ ಯಾವುದೇ ರಸೀದಿ ಕೊಡುವುದಿಲ್ಲ ಈ ಅವ್ಯವಹಾರವು ಸುಮಾರು ಒಂದು ವರ್ಷದಿಂದ ನಡೆಯುತ್ತಿದೆಂದು ಕೂಡಲೇ ಇವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ಅಹಮದ್ ರಫಿ, ನಿಂಗನ ಗೌಡ, ಅನ್ವರ್, ನರಸಿಂಹಲು, ಉಮಾಪತಿ, ಸತೀಶ್, ಫೈಯಾಜ್ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here