ವ್ಯಕ್ತಿಗೆ ಜೀವ ಇದ್ದರಷ್ಟೇ ಆತ ಶಿವ. ಇಲ್ಲವಾದಲ್ಲಿ ಶವ : ಮೃತ್ಯುಂಜಯ ಶಿವಾಚಾರ್ಯ

0
159

ಹುಮನಾಬಾದ : ಅ.4:ಮನುಷ್ಯರಲ್ಲಿ ಆತ್ಮವಾಗಿ ದೇವರು ಇರುತ್ತಾನೆ. ಒಬ್ಬ ವ್ಯಕ್ತಿಗೆ ಜೀವ ಇದ್ದರೇಷ್ಟೇ ಆತ ಶಿವ. ಇಲ್ಲವಾದಲ್ಲಿ ಶವ. ವ್ಯಕ್ತಿ ಇರುವಾಗ ಶ್ರೀಮಂತ ಮೊದಲಾದ ಗೌರವ, ಬಿರುದುಗಳು ಸಿಗುತ್ತದೆ. ಜೀವ ಹೋದ ತಕ್ಷಣ ಎಲ್ಲವೂ ಹೋಗುತ್ತದೆ ಎಂದು ಕಲ್ಲೂರನ ಹಿರೇಮಠ ಸಂಸ್ಥಾನದ ಮೃತ್ಯುಂಜಯ ಶಿವಾಚಾರ್ಯ ಹೇಳಿದರು.

ಪಟ್ಟಣದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅಧಿಕಮಾಸ ಎರಡನೇ ಶುಕ್ರವಾರ ಕಾರ್ಯಕ್ರಮ ಹಾಗೂ ಅವರ 48ನೇ ಹುಟ್ಟು ಹಬ್ಬದ ಪ್ರಯುಕ್ತ ಆಯೋಜಿಸಿದ ಪ್ರವಚನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಬದುಕಿರುವಾಗ ಜನತೆ ನೀಡುವ ಬೆಲೆ ಅದು ನಮ್ಮ ಅತ್ಮಕ್ಕೆ ನೀಡುವ ಬೆಲೆ. ಆದ್ದರಿಂದ ಪ್ರತಿಯೊಬ್ಬರು ದೇವರ ಮೋರೆ ಹೋಗುವ ಮೂಲಕ ಪ್ರತಿನಿತ್ಯ ಕನಿಷ್ಠ ಪೂಜೆ, ಧ್ಯಾನ ಮಾಡಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು.

ತಲೆ ಬಾಗಬೆಕಾದರೆ ನಮಗೆ ಸಂಸ್ಕಾರ ಬೇಕು. ವಿನೀತ ಭಾವ ಇರಬೇಕು. ಎಲ್ಲಕ್ಕಿಂತ ಮೀಗಿಲಾಗಿ ನಮ್ಮೊಳಗಿರುವ ಅಹಂಕಾರ ಅಳಿಯಬೆಕು. ಆಗ ಮಾತ್ರ ತಲೆ ಬಾಗಲು ಸಾಧ್ಯ. ದೇವಸ್ಥಾನ, ಮಠ ಮಂದಿರಗಳು, ಶ್ರದ್ಧಾಕೇಂದ್ರಗಳು ಭಕ್ತಿ ಭಾವನೆಗಳ ಸಂಕೇತವಾಗಿವೆ. ಅವುಗಳು ಎಂದಿಗೂ ಹಳೆಯದಾಗುವುದಿಲ್ಲ. ಸದಾ ಇಂತಹ ಸ್ಥಳಗಳಲ್ಲಿ ಧ್ಯಾನ, ಪೂಜೆ ಸಲ್ಲಿಸಿದರೆ ಇದರಿಂದ ನಮ್ಮಗೆ ಉತ್ತಮ ಕಾರ್ಯಗಳಲ್ಲಿ ಸ್ಪೂರ್ತಿ ಸಿಗುತ್ತದೆ.

ಪ್ರತಿನಿತ್ಯ ಬೆಳಿಗ್ಗೆ ದೇವರ ಧ್ಯಾನ, ಪೂಜಾ ಕಾರ್ಯದೊಂದಿಗೆ ವೃತ್ತಿ ಬದುಕು ಆರಂಭಗೊಂಡರೆ ಎದುರಾಗುವ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಇತರರೊಂದಿಗೆ ಸುಮಧುರ ಬಾಂಧವ್ಯವೂ ಮುಂದುವರಿಯುತ್ತದೆ. ಜೀವನ ಜಂಜಾಟದಲ್ಲಿ ಮನಸ್ಸಿಗೆ ಅರೆಕ್ಷಣ ನೆಮ್ಮದಿಯಿಲ್ಲ. ಚಂಚಲ ಮನಸ್ಸು ಎಲ್ಲೆಲ್ಲೋ ಓಡುತ್ತಿರುತ್ತದೆ. ಇಂತಹ ಸಂಧಭ್ದಲ್ಲಿ ಪೂಜೆ ಧ್ಯಾನ ಮನಸ್ಸಿನ ಕಲ್ಮಶವನ್ನು ಹೋಗಲಾಡಿಸುತ್ತದೆ. ಅಸೂಯೆ, ದ್ವೇಷಕ್ಕೆ ಜಾಗವಿಲ್ಲದಂತೆ ಮಾಡುತ್ತದೆ. ಸಾಮೂಹಿಕವಾಗಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಯಾವುದೇ ತಾರತಮ್ಯವಿಲ್ಲದೆ ಎಲ್ಲ ವರ್ಗದವರೂ ಪೂಜೆಯಲ್ಲಿ ಹಾಗೂ ಕೋವಿಡ-19 ಇಂತಹ ಪರಿಸ್ಥಿತಿಯಲ್ಲಿ ನಾನ್ನು ಕನಸ್ಸಿನಲ್ಲೂ ಭಾವಿಸದ ಈ ಒಂದು ದೇವಸ್ಥಾನದಲ್ಲಿ ಹುಟ್ಟುಹಬ್ಬ ಹಾಗೂ ಪ್ರವಚನ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದ್ದು ನಿಮ್ಮೆಲ್ಲರ ಕೃಪಾರ್ಶಿವಾದ ಎಂದರು.

ದೇವಸ್ಥಾನ ಕಾರ್ಯದರ್ಶಿ ಶಿವಶಂಕರ ತರನಳ್ಳಿ ಮಾತನಾಡಿ. ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನಕ್ಕೆ ಅನೇಕ ಪೂಜ್ಯರು ಬಂದು ಹೂಗಿದ್ದಾರೆ. ಅಲ್ಲದೆ ಪ್ರತಿನಿತ್ಯ ದೇವಸ್ಥಾನದಲ್ಲಿ ಲಕ್ಷ್ಮಿ ವೆಂಕಟೇಶ್ವರ, ಶಿವಲಿಂಗನ ಪೂಜೆ, ಹನುಮಾನ ಹಾಗೂ ನಾಗಣ್ಣನ ಪೂಜೆ ಮಾಡುವ ಮೂಲಕ ಈ ಸ್ಥಳ ಸರ್ವ ಧರ್ಮಿಯ ಒಂದು ಕೇಂದ್ರವಾಗಿದೆ. ಅಲ್ಲದೆ ದೇಶ ಸ್ವಾತಂತ್ರದ ಸಮಯದಲ್ಲಿ ಅನೇಕ ಮಹಾಪುರುಷರು ಒಂದು ಗೂಡುವ ಕೇಂದ್ರವು ಇತ್ತು ಎಂದು ಪ್ರಸ್ಥಾಪಿಸಿರು.

ಸದಾನಂದ ಖಮಿತ್ಕರ್ ನಿರೋಪಿಸಿದರು. ದೇವಸ್ಥಾನ ಅರ್ಚಕ ಶಶಿಕಾಂತ ಕುಲ್ಕರ್ಣಿ, ಸುಧಾಕರ ಕುಲ್ಕರ್ಣಿ, ಸಿದ್ದಣ್ಣಾ ಚಕಪಳ್ಳಿ, ಗೋವಿಂದಸಿಂಗ್ ತಿವಾರಿ, ರವಿಕುಮಾರ ಆರ್ಯ, ಪ್ರಶಾಂತ ಸೂರ್ಯವಂಶಿ, ಗಣೇಶಸಿಂಗ್ ತಿವಾರಿ, ಸುರೇಶ ಸಿಂಧೆ, ಮಹಾಂತೇಶ ಪೂಜಾರಿ, ಸಂಜು ಸಜ್ಜನಶಟ್ಟಿ, ಪ್ರಭಾವತಿ, ವಿದ್ಯಾವತಿ, ಕಲಾವತಿ, ವಿಮಲಾಬಾಯಿ, ರತ್ನಮ್ಮಾ, ಅಂಬಿಕಾ, ಮಮತಾ ಸೇರಿದಂತೆ ನೂರಾರು ಭಕ್ತ ರು ಇದ್ದರು.

LEAVE A REPLY

Please enter your comment!
Please enter your name here