ಮಾಸ್ಕ್ ಇಲ್ಲದೆ ವಾಹನ ಸವಾರರಿಗೆ 100 ರೂ.ದಂಡ

0
163

ಮಾನ್ವಿ.ಅ.04 ಪಟ್ಟಣದ ಬಸವ ವೃತ್ತದ ಬಳಿ ಪೊಲೀಸ್ ಇಲಾಖೆ ಮತ್ತು ಪುರಸಭೆ ಇಲಾಖೆ ವತಿಯಿಂದ ಮಾಸ್ಕ್ ಇಲ್ಲದೆ ದ್ವಿಚಕ್ರ ವಾಹನ ಸವಾರಿ ಮಾಡುತ್ತಿರುವ ಪ್ರತಿ ವ್ಯಕ್ತಿಗಳಿಗೆ 100 ರೂಪಾಯಿ ದಂಡ ವಿಧಿಸಲಾಗುತ್ತಿದೆ.
ಈ ಹಿಂದೆ ಸೆಪ್ಟೆಂಬರ್ 25 ಮತ್ತು 27 ರಂದು ಮಾಸ್ಕ್ ಇಲ್ಲದೆ ದ್ವಿಚಕ್ರ ವಾಹನ ಸವಾರಿ ಮಾಡುತ್ತಿರುವ ವ್ಯಕ್ತಿಗಳಿಗೆ ದಂಡ ಹಾಕಿರುವುದು ಇಲ್ಲಿಯವರೆಗೆ 4800 ರುಪಾಯಿ ಜಮಾ ಆಗಿದೆ ಎಂದು ಪುರಸಭೆ ಅಧಿಕಾರಿ ಹಂಪಯ್ಯ ಅವರು  ತಿಳಿಸಿದರು.
ಮಾಸ್ಕ್ ಧರಿಸದೇ ದ್ವಿಚಕ್ರ ವಾಹನ ಸವಾರರಿಂದ ದಂಡ ವಿಧಿಸಲಾದ ಜಮಾ ಹಣ ಎಷ್ಟೊಂದು ಪೊಲೀಸ್ ಇಲಾಖೆಯಿಂದ ಅಧಿಕೃತವಾಗಿ ತಿಳಿದು ಬಂದಿಲ್ಲ.

LEAVE A REPLY

Please enter your comment!
Please enter your name here