ಕರುನಾ ವೈರಸ್ ನಿಂದ ನಮ್ಮ ದೇಶ ಹಾಗೂ ಸಾರ್ವಜನಿಕರ ಜೀವದ ರಕ್ಷಣೆ ಎಮ್ ಐ ಜಿಯ ಆದ್ಯಕರ್ತವ್ಯ : ಹುಸೇನ್ ಬಾಷ ಎಚ್ ಬಿ ಎಮ್

0
279

ಮಾನ್ವಿ. ಮಾರ್ಚ್29 ರವಿವಾರ : ಕರುನಾ ವೈರಸ್ ನಿಂದ ನಮ್ಮ ದೇಶ ಹಾಗೂ ಸಾರ್ವಜನಿಕರ ಜೀವದ ರಕ್ಷಣೆ ಎಮ್ ಐ ಜಿಯ ಆದ್ಯಕರ್ತವ್ಯ : ಹುಸೇನ್ ಬಾಷ ಎಚ್ ಬಿ ಎಮ್

ಅವರು ಇಂದು ಮಾನವಿ ಐಡಿಯಲ್ ಗ್ರೂಪ್ ವತಿಯಿಂದ ಹಮ್ಮಿ ಕೋಳ್ಳಲಾದ ಕುಡಿಯುವ ನೀರು ಹಾಗು ಹಣ್ಣು ವಿತರಿಸುವ ಕಾರ್ಯವನ್ನ ಶ್ಲಾಘಿಸಿ ಮಾತನಾಡಿದರು. ನೀರಡಿಕೆ ತಣಿಸುವುದು ಹಾಗೂ ಹಸಿದ ಹೊಟ್ಟೆಗೆ ಉಣಿಸುವುದು ಮಹಾ ಪುಣ್ಯದ ಕೆಲಸ ಎಂದು ನಂಬಿದ ಮಾನವಿ ಐಡಿಯಲ್ ಗ್ರೂಪ್ ಸಂಘಟನೆ ಅಡಿಯಲ್ಲಿ ಬಹಳಷ್ಟು ವಿವಿಧ ಪುಣ್ಯದ ಕಾರ್ಯಗಳನ್ನ ಮಾಡುತ್ತಾ ಬಂದಿರುವ ನಮ್ಮ ಸಂಘಟನೆ ಜನ ಸೇವೆಗಾಗಿ ಸದಾ ಸಿದ್ಧ ಕರುಣಾ ವೈರಸ್ ಹರಡುವುದನ್ನ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರದ ವತಿಯಿಂದ ವಿಧಿಸಲಾದ ಲಾಕ್ಢೌನ್ ಗೆ ಸಾರ್ವಜನಿಕರು ಸಹಕರಿಸಿ ನಮ್ಮ ದೇಶವನ್ನ ಮಹಾಮಾರಿ ಕರುಣಾ ವೈರಸ್ ನಿಂದ ರಕ್ಷಿಸಬೇಕು ಮತ್ತು ತಮ್ಮ ತಮ್ಮ ಜೀವಕ್ಕೆ ಕುತ್ತು ಬರದಹಾಗೆ ನೋಡಿಕೋಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಪುರಸಭೆ ಸದಸ್ಯ ಹುಸೇನ್ ಬಾಷ ಹೇಳಿದರು.

 

ಕರುನಾ ವೈರಸ್ ಹರಡುವುದನ್ನ ತಡೆಗಟ್ಟುವ ನಿಟ್ಟಿನಲ್ಲಿ ಮಾನವಿ ನಗರ ಸಂಪೂರ್ಣ ಲಾಕ್ಡೌನ್ ಆದಕಾರಣ ಸಾರ್ವಜನಿಕರ ಸೇವೆಯಲ್ಲಿ ನಿರತ ಅಧಿಕಾರಿಗಳು, ಪೋಲೀಸರು, ಪೌರಕಾರ್ಮಿಕರು, ವೈದ್ಯರು, ಆರೊಗ್ಯ ಇಲಾಖೆಯ ಸಿಬ್ಬಂಧಿಗಳು ಮತ್ತು ತೋಂದರೆಗೆ ಸಿಲುಕಿರುವ ಪ್ರಯಾಣಿಕರ ಸೇವೆಗಾಗಿ ಮಾನವಿ ಐಡಿಯಲ್ ಗ್ರೂಪ್ ವತಿಯಿಂದ ಕುಡಿಯುವ ನೀರು ಹಾಗು ಹಣ್ಣು ಹಂಪಲು ವಿತರಿಸಲಾಯಿತು.

ಯುವ ಮುಖಂಡರ ಅನಿಸಿಕೆ:  ಮಾನವಿ ಐಡಿಯಲ್ ಗ್ರೂಪ್ (ಎಮ್ ಐ ಜಿ) ನ  ಯುವಕರು ತಮ್ಮ ಸ್ವಂತ ದುಡ್ಡಿನಿಂದ ಜನಸೇವೆಯ ಕಾರ್ಯ ಮಾಡುತ್ತಿರುವುದು ಸಂತೋಷದ ವಿಷಯ ಎಂದು ರಾಜ ವಸಂತ ನಾಯಕ್ ಹಾಗೂ ಅರುಣ ಚಂದ ಹೇಳಿದರು.

ಈ ಸಂದರ್ಭದಲ್ಲಿ ಮಾನವಿ ಐಡಿಯಲ್ ಗ್ರೂಪ್ ನ ಅಧ್ಯಕ್ಷರಾದ ಹುಸೇನ್ ಪಾಷ, ಹಾಗೂ ಪದಾಧಿಕಾರಿಗಳಾದ ಹಬೀಬ್ ಖಾನ್ ,ಫರ್ಹಾನ್ ಎಮನಿ, ಕೆ ಎಮ್ ಬಾಷ, ಖಾಸಿಮ್ ಮೇಸ್ರಿ, ಮತ್ತು ಪುರಸಭೆ ಸದಸ್ಯರಾದ ಹುಸೇನ್ ಬಾಷ ಎಚ್ ಬಿ ಎಮ್ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here