ಕರ್ನಾಟಕದಲ್ಲಿ ಎನ್.ಪಿ.ಆರ್ ಜಾರಿಯಾಗದಿರಲಿ :ನಾವು ಭಾರತೀಯರು ಜಂಟಿ ಸಮಿತಿ ವತಿಯಿಂದ ರಾಜ್ಯಾವ್ಯಾಪಿ ಹೊರಾಟ

0
235
 ಮಾನ್ವಿ:ಮಾ.12 ದೇಶದಲ್ಲಿ ಬಲವಾದ ಪ್ರತಿರೋಧಕ್ಕೆ ಕಾರಣವಾಗಿರುವ ಸಿ ಎ ಎ, ಎನ್ ಆರ್ ಸಿ ಎಂಬ ಕೋಮು ವಿಷ ಬೀಜ ಬಿತ್ತುವ ಕಾನೂನಿಗೆ ಜನಗಣತಿ ನೆಪದಲ್ಲಿ ಮಾಡಲು ಹೊರಟಿರುವ ಎನ್ ಪಿ ಆರ್ ಮೊದಲ ಹೆಜ್ಜೆ ಎಂದು  ಸೈಯದ್ ಸಾದೀಖ್ ಪಾಷ‌ ಬಾಬುಲ್ ಹೇಳಿದರು.
ಇಂದು ಮಾನ್ವಿಯ ತಹಶಿಲ್ದಾರರ ‌ಕಾರ್ಯಲಯದ ಮುಂದೆ ಕರ್ನಾಟಕದಲ್ಲಿ ರಾಷ್ಟ್ರೀಯ ‌ಜನ ಸಂಖ್ಯಾ ನೋಂದಣಿಯನ್ನು ಕೈ ಬಿಡುವಂತೆ ‌ಒತ್ತಾಯಿಸಿ ತಹಶಿಲ್ದಾರರ ‌ಮೂಲಕ ‌ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಇವರು‌ ಈ‌ ಹಿಂದೆ ‌ಸರಕಾರ ಮಾಡುತ್ತಿದ್ದ  ರಾಷ್ಟ್ರೀಯ ‌ಜನಸಂಖ್ಯಾ ನೊಂದಣಿ ಕಾರ್ಯಕ್ರಮದ ‌ರೂಪುರೇಷವೆ ಬೇರೆ ಈಗ ಮಾಡಲು ಹೊರಟಿರುವ ಎಮ ಪಿ ಆರ್ ನ ರೂಪುರೇಷವೇ ಬೇರೆ ಈಗಿನ ಎಮ್ ಪಿ ಆರ್ ನಲ್ಲಿ ಏಳು ಗೊಂದಲದ ಪ್ರೆಶ್ನೆಗಳಿದ್ದು ಈ ಏಳು ‌ಗೊಂದಲದ ಪ್ರೆಶ್ನೆಗಳಿಂದ ನಾನು‌ ದೇಶದ ‌ಪೌರತ್ವವನ್ನು ಕಳೆದುಕೊಳ್ಳುತ್ತೆನೆ ಎಂಬ ಭಯ ಜನಸಾಮನ್ಯರಲ್ಲಿ ವ್ಯಾಪಕವಾಗಿದೆ.
ಈ ಪೌರತ್ವ ಕಾಯ್ದೆ ಅಹಿದ ಜನರ ಬದುಕನ್ನು ಕಸಿದು ಕೊಳ್ಳುವ ಕೆಟ್ಟ ಖಾಯ್ದೆಯಾಗಿದ್ದು ಇದರ ‌ವಿರುದ್ದ ಹೋರಾಟ ‌ಮಾಡಲು ಪ್ರತಿಯೊಬ್ಬರೂ ತಯಾರಾಗಬೇಕೆಂದು ಹೇಳಿದರು.
 ಅನಿಲ್ ಕುಮಾರ್ ‌ಮಾತನಾಡಿ ಈ‌ ಖಾಯ್ದೆಯಿಂದ ಯಾರು ಹೆದರಬೇಕಿಲ್ಲ ಅದನ್ನು ಹೆಸರಿಸಲು ನಾವು ‌ಒಗ್ಗಟ್ಟಾಗೋಣ ದೇಶದಲ್ಲಿ ‌ಇರುವ ಅದೆಷ್ಟೋ ಜನಕ್ಕೆ ‌ಮುತ್ಯಾಜ್ಜನವರ ಹೆಸರೆ ಗೊತ್ತಿಲ್ಲ ಇನ್ನೂ ‌ಯಾವ ರೀತಿ ನಾವು ಎಮ ಪಿ ಆರ್ ಗೆ ವಿವರಣೆ ನೀಡಬೇಕು ‌ಹೇಳಿ‌ ಎಂದು ‌ಕೇಂದ್ರ‌ ಸರಕಾರಕ್ಕೆ ‌ಪ್ರೆಶ್ನೆ‌ ಮಾಡಿದರು.
ತಿಪ್ಪಣ್ಣ ಬಾಗಲವಾಡ ಮಾತನಾಡಿ ರಾಷ್ಟ್ರೀಯ ‌ಜನ‌ಸಂಖ್ಯಾ ನೊಂದಣಿ ಖಾಯ್ದೆಗೆ ನೊಂದಣಿ ಮಾಡಲು ನಿಮ್ಮ ‌ಮನೆಗೆ ಬರುವ ಅಧಿಕಾರಿಗಳಿಗೆ ‌ಮೊದಲು ನೀವು ಯಾವ ರೀತಿ ‌ಈ ಖಾಯ್ದೆಯಲ್ಲಿ‌ ನೀವು ನಿಮ್ಮ ‌ವಿವರಗಳನ್ನು ನೊಂದಾಣಿ ಮಾಡಿದ್ದಿರಿ ಎಂದು ‌ಕೇಳಿ ಆಮೇಲೆ ‌ನಿಮ್ಮ ವಿವರಗಳನ್ನು ಅವರಿಗೆ ಹೇಳಿ ಇಲ್ಲವಾದರೆ ಅವರಿಗೆ ನಿಮ್ಮ ಮನೆಯಲ್ಲಿ ಬಿಸಿ‌ ಬಿಸಿ ಕಾಫಿ ಕುಡಿಸಿ ಕಳಿಸಿ ಎಂದು ‌ಹೇಳಿದರು.ಈ ಸಂದರ್ಭದಲ್ಲಿ  ರಾಜಾ ವಸಂತ ನಾಯಕ, ತಿಪ್ಪಣ್ಣ ಬಾಗಲವಾಡ,ಅನಿಲ್ ಕುಮಾರ್ ಕೋನಾಪುರ ಪೇಟೆ,  ವಿಶ್ವನಾಥ್ ವಕೀಲರು, ಮೌಲಾನ್ ಜಿಶಾನ್ ಖಾದ್ರಿ, ಮೌಲಾನಾ ಅನ್ವರ್ ಪಾಷಾ, ಮೌಲಾನ್ ಶೇಖ್ ಫರೀದ್ ಉಮ್ರಿ,ಸೈಯ್ಯದ್ ಅಕ್ಬರ್ ಪಾಷಾ, ಸೈಯ್ಯದ್ ಸಾದಿಕ್ ಪಾಷಾ, ಅಬ್ದುಲ್ ಕರೀಂ ಖಾನ್, ಜೆ ಚಾಂದ್ಸಾಬ್, ಹುಸೇನ್ ಬಾಷಾ, ಡಿ ದೇವರಾಜ್, ನಾಗೇಶ್ ಕಬ್ಬೇರ್, ಕ್ಕೆ ಭೀಮರಾಯ ಗುಡದಿನ್ನಿ, ಎಂಡಿ ಮೊಯಿನ್ ಖಾನ್, ದಾವೂದ್ ಸಿದ್ದಕಿ ,ಇಬ್ರಾಹಿಂ  ಭಾಷಾ ಸಾಬ್, ರಾಜಾ ಸುಭಾಷ್ ನಾಯಕ್,ಲಕ್ಷ್ಮಣ ಜಾನೇಕಲ್,   ಕಾಶಿನಾಥ ಕುರ್ಡಿ, ಮುಜಾಯಿದ್, ಮಾರೆಪ್ಪ ಹರವಿ, ನರಸಿಂಹ ಸೀಕಲ್,ಅಬ್ದುಲ್ ರಹಿಮಾನ್, ಅಖಿಲ್ ಜಿಶಾನ್ ಸಿದ್ದಿಕಿ, ಎಂಎಚ್ ಮುಖಿಮ,  ಸಜ್ಜಾದ್,ಪರಶುರಾಮ ಬಾಗಲವಾಡ,ಸೈಯ್ಯದ್ ಮುಜುಮ್ ಖಾದ್ರಿ ಗುರು,ರಸೂಲ್ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here