ಹೊಸ ನಾಯಕತ್ವದಲ್ಲಿ ವಿದ್ಯಾರ್ಥಿ ಸಂಘಟನೆ ಫ್ರೆಟರ್ನಿಟಿ ಮೂವ್ಮೆಂಟ್ ; ರಾಜ್ಯಾಧಕ್ಷರಾಗಿ ಮಂಗಳೂರಿನ ತಫ್ಲೀಲ್ ಯು ಆಯ್ಕೆ

0
200

ಬೆಂಗಳೂರು: ವಿದ್ಯಾರ್ಥಿಗಳಲ್ಲಿ, ಕ್ಯಾಂಪಸ್ ಗಳಲ್ಲಿ ಮೌಲ್ಯಗಳು ಕಾಣೆಯಾಗುತ್ತಿರುವ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನ ಸರಿಯಾದ ದಿಕ್ಕು ಸರಿಯಾದ ಗುರಿ ತೊರಿಸುವ ಮತ್ತು ವಿದ್ಯಾರ್ಥಿಗಳಲ್ಲಿ ಆತ್ಮ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಹುಟ್ಟಿಕೊಂಡಿರುವ ಜಾತ್ಯಾತೀತ  ವಿದ್ಯಾರ್ಥಿ ಯುವ ಸಂಘಟನೆ ಫ್ರೆಟರ್ನಿಟಿ ಮೂವ್ಮೆಂಟ್ ‌ಕರ್ನಾಟಕ ರಾತ್ರೀ ಹಗಲು ಎನ್ನದೇ ರಾಜ್ಯದ ವಿವಿಧ ವಿಶ್ವ ವಿದ್ಯಾಲಯಗಳಿಗೆ ಶಾಲಾಕ್ಯಾಂಪಸ್ ಗಳಿಗೆ ತೆರಳಿ ವಿವಿಧ ವಿದ್ಯಾರ್ಥಿಗಳಿಗೆ ಯುವಕರಿಗೆ ಒಗ್ಗೂಡಿಸಿ ಅವರಲ್ಲಿ ಸಂಘಟನೆಯ ಪರಿಚಯ ಮಾಡಿಸಿ ವಿದ್ಯಾರ್ಥಿಗಳ, ಯುವಕರ ಒಂದು ದೊಡ್ಡ ಬೆಂಬಲ ಪಡೆದು ಬಲಿಷ್ಠವಾದ ಸಂಘಟನೆಯಾಗಿ ಹೊರ ಹೊಮ್ಮಿದಫ್ರೆಟರ್ನಿಟಿ ಮೊವ್ಮಂಟ್ ವಿದ್ಯಾರ್ಥಿ ಸಂಘಟನೆಯನ್ನ ಮುಂದುವರಿಸಲು ರಾಜ್ಯಾದ್ಯಂತ ವಿದ್ಯಾರ್ಥಿಗಳಿಗೆ ತಲುಪಿಸುವ ಉದ್ದೇಶಕ್ಕೆ ಅದಕ್ಕೆ ತಕ್ಕಂತೆ ನಾಯಕತ್ವ ಬೇಕಾಗಿತ್ತು ಆದಕಾರಣ ಮೊನ್ನೆ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನಡೆದ ಸಂಘಟನೆಯ ಆಂತರಿಕ ಚುನಾವಣೆಯಲ್ಲಿ ರಾಜ್ಯಧ್ಯಕ್ಷರಾಗಿ ಮಂಗಳೂರಿನ ತಫ್ಲೀಲ್ ಯು. ನೇಮಕಗೊಂಡರು.

ಬೆಂಗಳೂರಿನಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆಯಾದರು. ಮೂಲತಃ ‌ದಕ್ಷಿಣ ಕನ್ನಡ ಜಿಲ್ಲೆಯವರಾದ ತಪ್ಲೀಲ್ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ‌ವಿಭಾಗದಲ್ಲಿ‌ ಸ್ನಾತಕೋತ್ತರ ಪದವಿಯನ್ನು ಗಳಿಸಿರುತ್ತಾರೆ. ಪ್ರಸ್ತುತ ಮಲ್ಟಿಮೀಡಿಯಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಫ್ಲೀಲ್ ತನ್ನ ಪ್ರತಿಭೆಗಳನ್ನ ಬಳಸುವ ಮೂಲಕ ಸಂಘಟನೆಯನ್ನ ಆಕಾಶದೆತ್ತರಕ್ಕೆ ಒಯ್ಯುತ್ತಾರೆ ಮತ್ತು ಒಬ್ಬ ಮಾದರಿ ನಾಯಕನಾಗುತ್ತಾರೆಂದು ಎಲ್ಲಾ ಸದಸ್ಯರ ಆಶಯವಾಗಿದೆ,

LEAVE A REPLY

Please enter your comment!
Please enter your name here