ಸುಪ್ರೀಂಕೋರ್ಟ್ ಆದೇಶದಂತೆ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಲಾಗುವುದು; ತಹಶೀಲ್ದಾರ ಮಂಜುನಾಥ ಭೋಗಾವತಿ

0
234

ಸಿಂಧನೂರು.ಮಾ.03 :- ಸುಪ್ರೀಂಕೋರ್ಟ್ ಆದೇಶದಂತೆ ಮಾರ್ಚ್ ಬುಧವಾರದಿಂದ ಸರ್ಕಾರಿ ಜಾಗಗಳಲ್ಲಿ ನಿರ್ಮಿಸಲಾಗಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ನಗರಸಭೆ ಹಾಗೂ ಕಂದಾಯ ಇಲಾಖೆಯಿಂದ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ತಹಶೀಲ್ದಾರ ಮಂಜುನಾಥ ಭೋಗಾವತಿ ತಿಳಿಸಿದರು.

ಅವರು ನಗರಸಭೆ ಕಾರ್ಯಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಸುಪ್ರೀಂ ಕೋರ್ಟ್ ಆದೇಶದನ್ವಯ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಈಗಾಗಲೇ ನಗರಸಭೆ ಕಾರ್ಯಾಲಯದಿಂದ ಸಿಂಧನೂರು ನಗರದಲ್ಲಿ ಸರ್ವೆ ನಡೆಸಲಾಗಿದ್ದು, ಅದರಲ್ಲಿ 23 ದೇವಸ್ಥಾನಗಳು, 31 ಕಟ್ಟೆಗಳು, 6 ಝಂಡಾ ಕಟ್ಟೆಗಳು ಒಟ್ಟು 60 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಗುರುತಿಸಲಾಗಿದೆ. ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಪರವಾನಿಗೆ ಇಲ್ಲದ ಅನಧಿಕೃತ 9 ಧಾರ್ಮಿಕ ಕಟ್ಟಡಗಳನ್ನು ಗುರುತಿಸಲಾಗಿದೆ. ಸಾಲಗುಂದಾದಲ್ಲಿ 4, ಜಾಲಿಹಾಳ 1, ಹುಡಾ 1, ರೌಡಕುಂದಾ 1 ಹಾಗೂ ಇನ್ನೀತರ ಕಡೆ ಗುರುತಿಸಲಾಗಿದೆ. ಪೆÇಲೀಸ್ ಇಲಾಖೆಯ ಸಹಕಾರದಿಂದ ಅವುಗಳ ತೆರವು ಕಾರ್ಯಾಚರಣೆ ನಡೆಸಲಾಗುವುದು. ಯಾರೇ ಅಡ್ಡಿ ಪಡಿಸಿದ್ದಲ್ಲಿ ಅಂತಹವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ನಗರಸಭೆ ಎಇಇ ನಾನೇಸಾಬ್ ಮಡಿವಾಳ, ಜೆಇಗಳಾದ ಶಾಂತಕುಮಾರ, ಪ್ರವೀಣ ಸೇರಿದಂತೆ ನಗರಸಭೆ, ತಹಸೀಲ್ದಾರ ಕಾರ್ಯಲಯದ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here