ಮನುಕುಲದ ಉದ್ಧಾರಕ್ಕಾಗಿ ಎಲ್ಲ ಧರ್ಮಗಳು ಯುಗ ಯುಗಗಳಿಂದಲೂ ಸಾರ್ವತ್ರಿಕ ಸತ್ಯವನ್ನು ಸಾರುತ್ತಲೇ ಬಂದಿವೆ.

0
221

ಸಿಂಧನೂರು, ಮಾ.03: ಮನುಕುಲದ ಉದ್ಧಾರಕ್ಕಾಗಿ ಎಲ್ಲ ಧರ್ಮಗಳು ಯುಗ ಯುಗಗಳಿಂದಲೂ ಸಾರ್ವತ್ರಿಕ ಸತ್ಯವನ್ನು ಸಾರುತ್ತಲೇ ಬಂದಿವೆ.

ಸರ್ವೆ ಜನಃ ಸುಖಿನೋ ಭವಂತೂ ಎಂದು ಹಿಂದೂ ಧರ್ಮ ಸಾರಿದರೆ ಸೃಷ್ಠಿಕರ್ತನ ದೃಷ್ಠಿಯಲ್ಲಿ ಸಕಲ ಮಾನವರೆಲ್ಲ ಸಹೋದರರು ಎಂದು ಇಸ್ಲಾಂ ಜಗತ್ತಿಗೆ ಸಾರಿದರೆ, ಪ್ರೀತಿಯೊಂದನ್ನು ಬಿಟ್ಟು ಈ ಜಗತ್ತಿನಿಂದ ನಾನು ಏನನ್ನು ಸ್ವೀಕರಿಸಲಾರೆ ಎಂದು ಪ್ರೀತಿಯ ಸಾರವನ್ನು ಕ್ರೈಸ್ತ ಧರ್ಮ ಭೂ ಮಂಡಲಕ್ಕೆ ಹಂಚಿದೆ…
ಸಿಂಧನೂರು ಭಾವೈಕ್ಯತೆಯ ತವರೂರು ತಲೆಯ ಮೇಲೆ ಶಾಂತಿ ಸಾರುವ ಬಿಳಿಯ ಟೋಪಿ, ಹೆಗಲ ಮೇಲೆ ಸದ್ಗುಣದ ಸಾರವಾದ ಸಕಲರಿಗೆ ಲೇಸನ್ನೆ ಬಯಸಿದ ಶಿವಶರಣರು ನೀಡಿದ ಕೇಸರಿ ಶಾಲು. ಯುವಕರ ಹೃದಯಗಳಲ್ಲಿ ಭಾವೈಕ್ಯತೆ ಹಾಡು… ಪ್ರತಿಯೊಬ್ಬರು ಪ್ರಸಾದ ಸ್ವೀಕರಿಸಲು ಸಿದ್ಧವಾದ ಪರಿ. ವಿಶ್ವ ಸಿಡಿದೊಡೆಯದಂತೆ ಕಾಪಾಡಬಲ್ಲದು ಮಾನವೀಯತೆ… ಮಾನವೀಯತೆಯ ಪ್ರವಾದಿ ಮನುಷ್ಯನಾಗಬಲ್ಲ ಎಂದು ಸಾರುವುದಕ್ಕೆ ಸುಲ್ತಾನ್-ಎ-ಹಿಂದ್ ಹಜರತ್ ಸಯ್ಯದಿನಾ ಖ್ವಾಜಾ ಮೊಹಿನುದ್ದೀನ್ ಚಿಷ್ತಿ ರಹೆಮುತುಲ್ಲಾ ಅಲೈಹಿ ಖ್ವಾಜಾ ಗರೀಬ್ ನವಾಜರವರ ಉರುಸು ಷರೀಫ್ ನಿಮಿತ್ಯ ಸೋಮವಾರ ಸಂಜೆ ರೋಷನ್ ಯುವಕ ಮಂಡಳಿಯಿಂದ ಹಮ್ಮಿಕೊಂಡಿದ್ದ ಹಿಂದೂ-ಮುಸ್ಲಿಂ ಭಾವೈಕ್ಯತೆಯ ದಾಸೋಹ ಕಾರ್ಯಕ್ರಮ ಸಾಕ್ಷಿಯಾಯಿತು.

ಸಂಜೆ ಫಾತೀಹಾ ಕಾರ್ಯಕ್ರಮಗಳು ಧಾರ್ಮಿಕ ವಿಧಿ-ವಿಧಾನಗಳಿಂದ ಜರುಗಿದವು. ಸರ್ವಧರ್ಮಿಯ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ, ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಿಂಧನೂರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

LEAVE A REPLY

Please enter your comment!
Please enter your name here