ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಆರಂಭ

0
238

ಸಿಂಧನೂರು.ಮಾ.03 :-ನಗರದ 8 ಪರೀಕ್ಷಾ ಕೇಂದ್ರದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಆರಂಭಗೊಳ್ಳಲಿದ್ದು, ಸಿಂಧನೂರು ತಾಲೂಕಿನಲ್ಲಿ 4240 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಎದುರಿಸಲಿದ್ದಾರೆ.

3492 ರೆಗ್ಯೂಲರ್, 655 ರಿಪಿಟರ್ ಹಾಗೂ 93 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಬಾಲಕರ ಸರ್ಕಾರಿ ಪ.ಪೂ. ಕಾಲೇಜ್ ಪರೀಕ್ಷಾ ಕೇಂದ್ರದಲ್ಲಿ 20 ಬ್ಲಾಕ್‍ಗಳಿದ್ದು 570 ವಿದ್ಯಾರ್ಥಿಗಳು ಇತಿಹಾಸ, ಭೌತಶಾಸ್ತ್ರ ಪರೀಕ್ಷೆ ಬರೆಯಲಿದ್ದಾರೆ. ಆರ್‍ಜಿಎಂ ಕಾಲೇಜ್ ಪರೀಕ್ಷಾ ಕೇಂದ್ರದಲ್ಲಿ 19 ಬ್ಲಾಕ್, 590 ವಿದ್ಯಾರ್ಥಿಗಳು, ಶಂಕರ್ ಟ್ರಸ್ಟ್ ಪರೀಕ್ಷಾ ಕೇಂದ್ರದಲ್ಲಿ 16 ಬ್ಲಾಕ್, 464, ಕನಕದಾಸ ಕಾಲೇಜ್ ಪರೀಕ್ಷಾ ಕೇಂದ್ರದಲ್ಲಿ 16 ಬ್ಲಾಕ್ 470, ಎವಿಎಸ್ ಕಾಲೇಜ್ ಪರೀಕ್ಷಾ ಕೇಂದ್ರದಲ್ಲಿ 15 ಬ್ಲಾಕ್, 421, ಸಂಕೇತ ಕಾಲೇಜ್ ಪರೀಕ್ಷಾ ಕೇಂದ್ರದಲ್ಲಿ 10 ಬ್ಲಾಕ್, 270, ಎಕ್ಸಲೆಂಟ್ ಕಾಲೇಜ್ ಪರೀಕ್ಷಾ ಕೇಂದ್ರದಲ್ಲಿ 11 ಬ್ಲಾಕ್ 388 ಹಾಗೂ ಕೃಷ್ಣದೇವರಾಯ ಕಾಲೇಜ್ ಪರೀಕ್ಷಾ ಕೇಂದ್ರದಲ್ಲಿ 15 ಬ್ಲಾಕ್‍ನಲ್ಲಿ 435 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಈ ಬಾರಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀ ನಿಷೇದಾಜ್ಞೆ ಜಾರಿಗೊಳಿಸಿದ್ದು ಪೊಲೀಸ್‍ರನ್ನು ನಿಯೋಜಿಸಲಾಗಿದೆ.

LEAVE A REPLY

Please enter your comment!
Please enter your name here