ಸತ್ಯ ಗಾರ್ಡನ್‍ನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರ ಹಾಗೂ ಸಂಜೆ ಯದ್ದಲದೊಡ್ಡಿಯಲ್ಲಿ ಬೃಹತ್ ರೈತ ಹಿತಚಿಂತನಾ ಗೋಷ್ಠಿ ; ಶ್ರೀಮಠದ ಮಹಾಲಿಂಗ ಮಹಾಸ್ವಾಮಿಗಳು

0
75

ಸಿಂಧನೂರು.ಮಾ.03 :- ಯದ್ದಲದೊಡ್ಡಿಯ ವಿರಕ್ತಮಠದ ಲಿಂಗೈಕ್ಯ ಸಿದ್ದಲಿಂಗ ಶಿವಯೋಗಿಗಳವರ 73ನೇ ಜಾತ್ರಾ ಮಹೋತ್ಸವದ ಅಂಗವಾಗಿ ಮಾರ್ಚ್ 7 ರಂದು ಸಿಂಧನೂರಿನ ಸತ್ಯ ಗಾರ್ಡನ್‍ನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರ ಹಾಗೂ ಸಂಜೆ ಯದ್ದಲದೊಡ್ಡಿಯಲ್ಲಿ ಬೃಹತ್ ರೈತ ಹಿತಚಿಂತನಾ ಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಮಹಾಲಿಂಗ ಮಹಾಸ್ವಾಮಿಗಳು ತಿಳಿಸಿದರು.

ಅವರು ಮಂಗಳವಾರ ನಗರದ ದುದ್ದುಪೂಡಿ ಮಹಿಳಾ ಕಾಲೇಜಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.ಜಾತ್ರಾ ಸಂದರ್ಭದಲ್ಲಿ ಶ್ರೀಮಠದಿಂದ ಅನೇಕ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗಿದೆ. ಈ ಹಿಂದೆ ಆರೋಗ್ಯ ಶಿಬಿರ, ರೈತ ತಿಳುವಳಿಕೆ ಕಾರ್ಯಕ್ರಮಗಳು ನಡೆಸಿದ್ದೇವೆ. ನಮ್ಮ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನುರಿತ ಹಾಗೂ ಅನುಭವಿ ಕೆಎಎಸ್ ಆದವರಿಂದ ವಿಶೇಷ ತರಬೇತಿ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದರು.

ಮಾರ್ಚ್ 8ರಂದು ಸಂಜೆ 4 ಗಂಟೆಗೆ ಧಾರ್ಮಿಕ ಗೋಷ್ಠಿ ಹಮ್ಮಿಕೊಳ್ಳಲಾಗಿದ್ದು, ನಾಡಿನ ಮಠಾಧೀಶರು, ಸಚಿವರು, ಶಾಸಕರು, ಸಂಸದರು ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಅಧಿಕಾರಿಗಳು ಭಾಗವಹಿಸಲಿದ್ದಾರೆ. ನಂತರ ಶ್ರೀಗುರು ಚೆನ್ನಬಸವ ಶಿವಯೋಗಿಶ್ವರ ಗೋಶಾಲಾದ ಉದ್ಘಾಟನೆ ಜರುಗಲಿದ್ದು, ತದನಂತರ ಅದ್ದೂರಿಯಾಗಿ ರಥೋತ್ಸವ ಜರುಗಲಿದೆ ಎಂದು ತಿಳಿಸಿದರು. ಎರಡು ದಿನಗಳ ಕಾಲ ಜರುಗಲಿರುವ ಕಾರ್ಯಕಮಕ್ಕೆ ತಾಲ್ಲೂಕಿನ ಸಮಸ್ತ ಭಾಗವಹಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ರೋಟರಿ ಕ್ಲಬ್ ಅಧ್ಯಕ್ಷ ಡಾ.ಚನ್ನನಗೌಡ ಪಾಟೀಲ್ ಮಾತನಾಡಿ, ಪದವಿ ಪಡೆದ ಹಾಗೂ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ತುಂಬಾ ಅನುಕೂಲವಾಗಲಿದೆ. ಸುಮಾರು 800ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಈ ನಾಡಿಗೆ ಶೈಕ್ಷಣಿಕ ಪ್ರಗತಿಗೆ ಮಾಠಮಾನ್ಯಗಳ ಕೊಡುಗೆ ಅಪಾರವಾಗಿದೆ. ನಮ್ಮ ರಾಯಚೂರು ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಶ್ರೀಮಠದಿಂದಲೇ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಆರ್.ಸಿ.ಪಾಟೀಲ್, ಸತ್ಯನಾರಾಯಣ ಶ್ರೇಷ್ಠಿ, ವೆಂಕಟನಾರಾಯಣ, ಅನಿಲಕುಮಾರ, ಪರಶುರಾಮ ಮಲ್ಲಾಪುರ, ಚಂದ್ರೇಗೌಡ ಹರೇಟನೂರು, ದೊಡ್ಡಬಸವ ನಗನೂರು ಸೇರಿದಂತೆ ಅನೇಕರು ಇದ್ದರು.

LEAVE A REPLY

Please enter your comment!
Please enter your name here