ವಸತಿ ಮತ್ತು ಭೂಮಿ ವಂಚಿತರಿಗೆ ವಸತಿ ಹಾಗೂ ಭೂಮಿಯನ್ನು ಹಂಚಿಕೆ ಮಾಡುವಂತೆ ಆಗ್ರಹಿಸಿ ಕೆಆರ್‌ಎಸ್ ಸಂಘಟನೆಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ .

0
251

ಮಸ್ಕಿ.ಮಾ.03: ತಾಲೂಕಿನ ನಾನಾ ಗ್ರಾಮಗಳಲ್ಲಿ ಹಲವಾರು ವರ್ಷಗಳಿಂದ ವಸತಿಯಿಂದ ವಂಚಿತರಾದ ಮತ್ತು ಭೂಮಿಯನ್ನು ಸಾಗುವಳಿ ಮಾಡುತ್ತಿರುವ ಬಡ ಕುಟುಂಬಗಳಿಗೆ ತಾಲೂಕಾಡಳಿತದಿಂದ ಹಂಚಿಕೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರೈತ ಸಂಘದಿAದ ತಹಸೀಲ್ದಾರ್ ಬಲರಾಮ ಕಟ್ಟಿಮನಿರವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಶನಿವಾರ ಅಗ್ರಹಿಸಿದರು.

ನಂತರ ಕೆಆರ್‌ಎಸ್ ತಾಲೂಕಾಧ್ಯಕ್ಷ ಸಂತೋಷ ಹಿರೇದಿನ್ನಿ ಮಾತನಾಡಿ ಬಡವರು ವಾಸಿಸಲು ಸೂರು ಮತ್ತು ಸಾಗುವಳಿಗೆ ಮಾಡಿಕೊಂಡು ಬದಕಲು ಹಿಂದಿನ ಸರಕಾರಗಳು ಭೂಮಿಯನ್ನು ಹಂಚಿಕೆ ಮಾಡಲು ಫಾರಂ ನಂ ೫೦, ೫೩, ೫೭ ಹಾಗೂ ಮನೆಗಳಿಗಾಗಿ ೯೪ಸಿ/೯೪ಸಿಸಿ ಅಕ್ರಮ-ಸಕ್ರಮದಂಥ ಯೋಜನೆಗಳನ್ನು ಜಾರಿಗೆ ತಂದಿವೆ. ಆದರೆ ಸಾವಿರಾರು ಸಂಖ್ಯೆಯಲ್ಲಿ ಬಡ ಕುಟುಂಬಗಳು ಅರ್ಜಿಗಳನ್ನು ಸಲ್ಲಿಸಿವೆ. ಆದರೆ ರಾಜ್ಯದಲ್ಲಿ ಸರಕಾರಗಳು ಈ ಬಗ್ಗೆ ಗಮನಹರಿಸುತ್ತಿಲ್ಲವೆಂದು ಆರೋಪಿಸಿದರು. ಆದ್ದರಿಂದ ತಾಲೂಕಾಡಳಿತವಾದ್ರೂ ವಸತಿ ಮತ್ತು ಭೂಮಿಗಾಗಿ ಸಲ್ಲಿಸುವ ಅರ್ಜಿಗಳನ್ನು ಪರೀಶಿಲಿಸಿ ಮುಂದಿನ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ದಾಖಲಾತಿಗಳನ್ನು ಕಳುಹಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾರುತಿ ಜಿನ್ನಾಪೂರು, ಅಮರೇಶ ಪಾಮನಕೆಲ್ಲೂರು, ತಿರುಪತಿ ಪರಶುರಾಮ ಹುಸ್ಕಿಹಾಳ, ಮಲ್ಲಪ್ಪ ಗೋನಾಳ, ಆನಂದ ಹುಸ್ಕಿಹಾಳ ಸೇರಿದಂತೆ ಇನ್ನಿತರರಿದ್ದರು.

LEAVE A REPLY

Please enter your comment!
Please enter your name here