ಉತ್ತಮ ಪರಿಸರದಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ – ಪರಮೇಶ್

0
101

ಮಾನ್ವಿ:ಮಾ.03.ಉತ್ತಮ ಪರಿಸರ ಬೆಳೆಸಿದರೆ ಅತ್ಯುತ್ತಮವಾದ ಆರೋಗ್ಯ ಪಡೆಯಲು ಸಾಧ್ಯ ಎಂದು ಪತ್ರಕರ್ತರಾದ ಪಿ.ಪರಮೇಶ್ ಅವರು ಹೇಳಿದರು.

ಪಟ್ಟಣದ ಬಸವ ಐಟಿಐ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಉಪನ್ಯಾಸ ಕರ‍್ಯಕ್ರಮದಲ್ಲಿ ದಿವಂಗತ ರಾಮಚಂದ್ರಪ್ಪ ಸ್ಮಾರಕ ದತ್ತಿ ಪ್ರಯುಕ್ತವಾಗಿ ಪರಿಸರ ವಿಷಯದ ಉಪನ್ಯಾಸಕರಾಗಿ ಮಾತನಾಡಿದ ಅವರು ಉತ್ತಮವಾಗಿ ಪರಿಸರವನ್ನು ಬೆಳೆಸಿದರೆ ಮಾತ್ರ ನಮಗೆ ಮುಂದಿನ ದಿನದಲ್ಲಿ ಅತ್ಯುತ್ತಮವಾದ ಆರೋಗ್ಯ ಪಡೆಯಲು ಸಾಧ್ಯ.
ದೇಶದ ಕುಟುಂಬಗಳಲ್ಲಿ ೮೦ % ಮೊಬೈಲ್ ಫೋನ್ ಗಳು ಇವೆ ಆದರೆ ದೇಶದ ಕುಟುಂಬಗಳಲ್ಲಿ ಶೌಚಾಲಯ ಸಂಖ್ಯೆ ೫೦% ಇದೆ ಇದು ದುರಂತವೆ ಸರಿ. ನಾವು ವಿದ್ಯುತ್ ಫ್ರಿಡ್ಜ್ ಬಳಸುವುದಕ್ಕಿಂತ ನೈರ‍್ಗಿಕವಾಗಿರುವ ಫ್ರಿಡ್ಜ್ ಬಳಸಬೇಕು.ಪರಿಸರ ರಕ್ಷಣೆ ಅಂದರೆ ಬರೀ ಗಿಡ ಮರಗಳನ್ನು ರಕ್ಷೆಣೆ ಮಾಡುವುದಲ್ಲಾ ಪ್ರಾಣಿ ಪಕ್ಷಗಳನ್ನು ಕೂಡ ರಕ್ಷಣೆ ಮಾಡುವುದು ಅತ್ಯಗತ್ಯವಾಗಿದೆ. ಪ್ರಪಂಚದಲ್ಲಿ ವಿಜ್ಞಾನಿಗಳು ಎಲ್ಲವನ್ನೂ ಕಂಡು ಹಿಡಿದಿದ್ದಾರೆ ಆದರೆ ನೀರು ಉತ್ಪಾದನೆ ಮಾಡುವುದು ಇದುವರೆಗೂ ಯಾವ ವಿಜ್ಞಾನಿ ಕೂಡ ಕಂಡು ಹಡಿಲಿಕ್ಕೆ ಆಗಿಲ್ಲ ಇರುವ ನೀರನ್ನೇ ಶುದ್ಧೀಕರಿಸಬಹುದು ಅಷ್ಟೇ.ಹಲವಾರು ದೇಶಗಳಲ್ಲಿ ಪ್ಲಾಸ್ಟಿಕ್ ಪರಿಸರವನ್ನು ಹಾಳು ಮಾಡುತ್ತದೆ ಎಂದು ಆ ದೇಶದ ಆಡಳಿತ ಅಧಿಕಾರಿಗಳು ಪ್ಲಾಸ್ಟಿಕ್ ನಿಷೇಧ ಮಾಡಿದರೂ ಕೂಡ ಪ್ಲಾಸ್ಟಿಕ್ ಬಳಸುತ್ತಿರುವುದು ದುರಂತ.
ದಿವಂಗತ ರಾಮಚಂದ್ರಪ್ಪ ಸ್ಮಾರಕ ಪರವಾಗಿ ಪರಿಸರ ವಿಷಯದ ಬಗ್ಗೆ ಉಪನ್ಯಾಸಕರಾಗಿ ಮಾತನಾಡುತ್ತಿರುವುದು ನನ್ನ ಭಾಗ್ಯ ಯಾಕೆ ಅಂತ ಹೇಳಿದರೆ ದಿವಂಗತ ರಾಮಚಂದ್ರಪ್ಪ ಅವರು ಪರಿಸರ ಪ್ರೇಮಿಯಾಗಿದ್ದರು ಅವರು ಬದುಕಿರುವ ಸಂರ‍್ಭದಲ್ಲಿ ಸಾಲುಮರದ ತಿಮ್ಮಕ್ಕನವರಿಗೆ ಸನ್ಮಾನ ಮಾಡಿ ಗೌರವಿಸಿದ್ದರು ಎಂದು ಹೇಳಿದರು.
ನಾಗರತ್ನಮ್ಮ ಪಾಟೀಲ್ ನಾಗಲಾಂಬಿಕೆ ಬ್ಯಾಂಕಿನ ಅಧ್ಯಕ್ಷರು ಈ ಕರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇವತ್ತಿನ ದಿನ ಕನ್ನಡ ಉಳಿಸುವುದು ಬಹಳ ಕಷ್ಟವಾಗಿದೆ ಇಂದಿನ ದಿನಗಳಲ್ಲಿ ಹಲವಾರು ಸಾಹಿತಿಗಳು ಅನ್ಯಭಾಷೆಗಳ ಬರ‍್ಡುಗಳನ್ನು ಹೊರಗಡೆ ಇದ್ದರೆ ಒಳಗಡೆಗೆ ಕನ್ನಡ ಭಾಷೆಯಲ್ಲಿ ಉಪನ್ಯಾಸ ಮಾಡುತ್ತಿದ್ದರು ಎಂದು ಹೇಳಿದರು.
ತಿಪ್ಪಣ್ಣ ಹೊಸಮನಿ ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು, ಮಹ್ಮದ್ ಮುಜೀಬ್ ಕಸಾಪ ತಾಲುಕು ಅಧ್ಯಕ್ಷರು ಪ್ರಾಸ್ತಾವಿಕ ನುಡಿ ಮಾತನಾಡಿದರು.ಬಸವರಾಜ ಭೋಗಾವತಿ ಸ್ವಾಗತಿಸಿದರೆ. ರವಿ ರ‍್ಮಾ ಜಾನೇಕಲ್ ನಿರೂಪಿಸಿದರು.ಈ ಸಂರ‍್ಭದಲ್ಲಿ ದತ್ತಿ ದಾನಿಗಳಾದ ರ‍್ಫುದ್ದೀನ್ ಪೋತ್ನಾಳ್, ಎಂ ಆರ್ ವೆಂಕಯ್ಯ ಶೆಟ್ಟಿ, ಎಂ ವೀರೇಶ್, ಮೂಕಪ್ಪ ಕಟ್ಟಿಮನಿ, ಬಾಲಾಜಿ ಸಿಂಗ್, ಶಿವಶಂಕರ್ ಗೌಡ ಬಾಗಲವಾಡ, ಜಗನ್ನಾಥ್ ಚೌದ್ರಿ ಇನ್ನು ಅನೇಕರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here