*ದೆಹಲಿ‌ ಹಿಂಸಾಚಾರದ ಸ್ಪೋನ್ಸಾರ್ ಕೇಂದ್ರ‌ ಸರಕಾರವಾಗಿದೆ – ಅಡ್ವಕೇಟ್‌ ಸರ್ಫರಾಝ್*

0
253

ಮಂಗಳೂರು. ಫೆ.27- ದೆಹಲಿಯ ‌ಬಿಜೆಪಿ‌‌ ನಾಯಕ‌ ಕಪಿಲ್‌‌ ಮಿಶ್ರ ಉದ್ರೇಕಕಾರಿ ಭಾಷಣ ಮತ್ತು ಹಿಂಸಾಚಾರ ಆಕಸ್ಮಿಕವಾದದಲ್ಲ ಬದಲಾಗಿ‌ ಪೂರ್ವನಿಯೋಜಿತ ವಾಗಿದೆ. ಕೇಂದ್ರ ಸರಕಾರಕ್ಕೆ ಘಟನೆಯ ಬಗ್ಗೆ ವಿಷಾದವಿರುತ್ತಿದ್ದಾರೆ ಶಾಂತಿಗಾಗಿ‌ ಶ್ರಮಿಸಿದ ಹೈಕೋರ್ಟ್ ‌ನ್ಯಾಯಧೀಶರನ್ನು ವರ್ಗಾಯಿಸುತ್ತಿರಲಿಲ್ಲ ಎಂದು ವೆಲ್ಪೇರ್ ಪಕ್ಷದ ದ.ಕ‌‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ಸರ್ಫರಾಝ್ ಕಿಡಿಕಾರಿದ್ದಾರೆ.

ದೆಹಲಿಯ‌ ಹಿಂಸಾಚಾರ ಖಂಡಿಸಿ ತೊಕ್ಕೊಟು ಬಸ್ ನಿಲ್ದಾಣದ ಬಳಿ‌ ಪ್ರೆಟರ್ನಿಟಿ‌ ಮೂವ್‌ ಮೆಂಟ್, ಎಸ್.ಐ.ಓ ಮತ್ತು ಜಿ.ಐ.ಓ ಜಂಟಿಯಾಗಿ ಪ್ರತಿಭಟನೆಯನ್ನು‌‌ ಹಮ್ಮಿಕೊಳ್ಳಲಾಯಿತು. ದೆಹಲಿಯಲ್ಲಿ ‌ನಡೆದ ಎಲ್ಲ ಘಟನೆಯು ದೇಶದ ಗೃಹ ಮಂತ್ರಿಯ ವೈಫಲ್ಯತೆ‌ ಎದ್ದು ‌ಕಾಣುತ್ತಿದೆ, ಕೂಡಲೇ‌ ಅಮಿತ್‌ಷಾ‌ ರಾಜಿನಾಮೆ ನೀಡಬೇಕು ಎಂದು ‌‌ಒತ್ತಾಯಿಸಿದರು.

ಪ್ರತಿಭಟನಾ ಸಭೆಯಲ್ಲಿ ಎಸ್.ಐ.ಓ ದ.ಕ ಜಿಲ್ಲಾಧ್ಯಕ್ಷ ಆಶೀರುದ್ದೀನ್, ಜಿ.ಐ.ಓ ಜಿಲ್ಲಾಧ್ಯಕ್ಷೆ ತಬಸ್ಸುಮ್ ಮಾತನಾಡಿದರು. ನೂರಾರು‌ ಮಂದಿ ಭಾಗವಹಿಸಿದರು.

LEAVE A REPLY

Please enter your comment!
Please enter your name here