ಇಸ್ಟೇಟ್,ಮಟಕಾ, ಅಕ್ರಮ ಮರಳು ಸಾಗಣೆ: ಆರೋಪಿತರ ಬಂಧನ

0
237

ರಾಯಚೂರು,ಫೆ.27- ಇಸ್ಟೇಟ್, ಮಟಕಾ, ಅಕ್ರಮ ಮರಳು ಸಾಗಣೆ ಮತ್ತು ಇತರೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳ ವಿರುದ್ಧ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.

ಇಬ್ರಾಹಿಂ ತಂದೆ ಅಬ್ದುಲ್ ಖಾದರ್‌ನಿಂದ 60 ಲೀ, ಸೇಂದಿ ಅ.ಕಿ. 600 ರೂ. ಬೆಲೆಬಾಳುತ್ತಿದ್ದು ಇದನ್ನು ಸ್ಥಳದಲ್ಲಿಯೇ ನಾಶಪಡಿಸಲಾಗಿದೆ. 180 ಎಂ.ಎಲ್. ಶಾಂಪಲ್ ಸೇಂದಿ ಬಾಟಲ್ ಎಫ್.ಎಸ್.ಎಲ್.ಗೆ ಕಳುಹಿಸಲಾಗಿದೆ. ಮಾರೆಪ್ಪ ತಂದೆ ಲಕ್ಷ್ಮಣರವರಿಂದ 2010 ರೂ. ನಗದು ಹಣ, 2 ಮಟ್ಕಾ ಚೀಟಿಗಳು, ಒಂದು ಬಾಲಪೆನ್ನು ಮತ್ತು ಸದಾಶಿವಪ್ಪ ತಂದೆ ಗೋವಿಂದರಾಜರವರಿದ 620 ರೂ ನಗದು ಹಣ, ಒಂದು ಪೆನ್ನು, ಒಂದು ಮಟಕಾ ಚೀಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 03 ಪ್ರಕರಣಗಳನ್ನು ದಾಖಲಿಸಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ಬಾಗಿಯಾಗಿದ್ದ 03 ಜನ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ಒಟ್ಟು 2630 ರೂ.ಗಳ ನಗದು ಹಾಗೂ 60 ಲೀ.ಸೇಂದಿ ಅ.ಕಿ. 600 ರೂ. ಬೆಲೆಬಾಳುವದು ಮತ್ತು 03 ಮಟಕಾ ಚೀಟಿಗಳನ್ನು ಆರೋಪಿತರಿಂದ ಜಪ್ತಿಮಾಡಿ ವಶಪಡಿಸಿಕೊಳ್ಳಲಾಗಿದೆ.

ಮುಂದಿನ ದಿನಗಳಲ್ಲಿ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗುವ ವ್ಯಕ್ತಿಗಳ ಮೇಲೆ ದಾಳಿ ಮಾಡಿ ಅಂತವರ ವಿರುದ್ಧ ಗೂಂಡಾ ಕಾಯ್ದೆಯಡಿಯಲ್ಲಿ ಗಡಿಪಾರು ಮಾಡುವ ಕ್ರಮ ಕೈಗೊಳ್ಳುವ ಕುರಿತು ಪೊಲೀಸ್ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಾಗಾಗಿ ಸಾರ್ವಜನಿಕರು ತಮ್ಮ ಪಟ್ಟಣ ಅಥವಾ ಗ್ರಾಮಗಳಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ಸಹಕರಿಸುವಂತೆ ಜಿಲ್ಲೆಯ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here