ಸೊಳ್ಳೆಗಳ ಕಾಟಕ್ಕೆ ಬೇಸತ್ತ ಸರ‍್ವಜನಿಕರು- ಅಧಿಕಾರಿಗಳು ಮೌನ ಯಾಕೆ ?

0
252

ಮಾನ್ವಿ:ಫೆ.11.  ಕಳೆದ ಎರಡು ವಾರದಿಂದ ಪಟ್ಟಣ ಸೇರಿದಂತೆ ತಡಕಲ್ ಪೋತ್ನಾಳ್ ತೋರಣದಿನ್ನಿ ಇನ್ನು ಹಲವಾರು ಗ್ರಾಮೀಣ ಪ್ರದೇಶದಲ್ಲಿ ಸೊಳ್ಳೆಗಳ ಕಾಟ ತೀವ್ರಗೊಂಡಿದೆ. ಮನೆಯ ಒಳಗೆ, ರಸ್ತೆಯ ಇಕ್ಕೆಲಗಳಲ್ಲಿಯೂ ಕುಳಿತುಕೊಳ್ಳಲು ಸಾಧ್ಯವಾಗದಷ್ಟು ಸೊಳ್ಳೆಗಳ ಕಾಟ ಮಿತಿಮೀರಿದೆ. ಹೋಟೆಲ್‌ಗ‌ಳಲ್ಲಿ ಕುಳಿತರು ಸೊಳ್ಳೆಗಳು ಕಾಟ ಎಲ್ಲೆ ಮೀರಿದೆ. ಸೊಳ್ಳೆ ಕಡಿದ ಸ್ವಲ್ಪ ನಿಮಿಷದಲ್ಲಿ ಜಾಸ್ತಿ ತುರಿಕೆಯ ಬಾವು ಬಂದು ಮೈ ಕೈ ನೋವಾಗುವಂತೆ ಯಾತನೆ ಅನುಭವಿಸುವಂತಾಗಿದೆ.
ಪಟ್ಟಣದ ಇತರ ವರ‍್ಡ್‌ಗಳಲ್ಲಿ ಜನ ಸಾಮಾನ್ಯರ ಸಂಕಷ್ಟ ಕೇಳದಂತಾಗಿದೆ. ಇನ್ನೂ ಕೆಲವರು ಸೊಳ್ಳೆ ಕಾಟದಿಂದ ಸಂಜೆಯಾದರೆ ಸಾಕು ಸೊಳ್ಳೆ ಬತ್ತಿ ಹಿಡಿದು ಅಕ್ಕ ಪಕ್ಕದಲ್ಲಿಟ್ಟುಕೊಳ್ಳುತ್ತಿರುವ ಪ್ರಸಂಗ ಕಾಣಬಹುದಾಗಿದೆ.ಇನ್ನೂ ಗ್ರಾಮೀಣ ಪ್ರದೇಶದಲ್ಲಿ ವಿಪರೀತ ಸೊಳ್ಳೆಗಳ ಕಾಟಕ್ಕೆ ಪ್ರತಿಯೊಬ್ಬರು ಸೊಳ್ಳೆ ಪರದೆ ಮಾಡಿಕೊಳ್ಳುತ್ತಿದ್ದಾರೆ.
ಇನ್ನೂ ಹಸುಗಳಿಗೂ ಹುಲ್ಲಿನ ಹೊಗೆ ಹಾಕಿ ಸೊಳ್ಳೆ ಬರದಂತೆ ನೋಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಪಟ್ಟಣ ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶದ ಪಂಚಾಯ್ತಿ ವ್ಯಾಪ್ತಿಯಲ್ಲು ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್‌ ಸಿಂಪಡಿಸುವುದು ಮತ್ತು ಬ್ಲೀಚಿಂಗ್ ಪೌಡರ್ ಸಿಂಪಡಿಸುವುದು ಅವಶ್ಯಕ. ಇದರ ಬಗ್ಗೆ ಅಧಿಕಾರಿಗಳು ಹೆಚ್ಚಿನ ಕ್ರಮ ಕೈಗೊಳ್ಳಬೇಕು.
ವಿಪರೀತ ಸೊಳ್ಳೆಗಳಿಂದ ಸಂಜೆ ಆದರೆ ಸಾಕು ಮನೆಯೊಳಗೆ ಹೋಗಲು ಆಗುತ್ತಿಲ್ಲ. ಇದಕ್ಕೆ ಪುರಸಭೆ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಎಚ್ಚೆತ್ತು ಸೊಳ್ಳೆಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕಾಗಿದೆ

LEAVE A REPLY

Please enter your comment!
Please enter your name here