ನಗರಸಭೆ ಪೌರಕಾರ್ಮಿಕರಿಗೆ ಸುರಕ್ಷಾ ಧಿರಿಸು, ಪರಿಕರಗಳ ವಿತರಣೆ ಸರ್ಕಾರ ಯೋಜನೆಯನ್ನು ಸದ್ಭಳಕೆ ಮಾಡಿಕೊಳ್ಳಿ: ಆರ್.ವಿರೂಪಾಕ್ಷಮೂರ್ತಿ

0
234

ಸಿಂಧನೂರು :05- ಪೌರಕಾರ್ಮಿಕರು ಸರ್ಕಾರದ ದೊರಕುವ ಸೌಲಭ್ಯಗಳನ್ನು ಪಡೆದುಕೊಂಡು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಸಲಹೆ ನೀಡಿದರು.
ಅವರು ನಗರದ ನಗರಸಭೆ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 2019-20ನೇ ಸಾಲಿನ 24.10 ಯೋಜನೆಯ ವೈಯಕ್ತಿಕ ಸೌಲಭ್ಯದ ಸುರಕ್ಷಾ ಧಿರಿಸು ಹಾಗೂ ಪರಿಕರಗಳನ್ನು ವಿತರಿಸಿ ಮಾತನಾಡಿದರು.

ಸರ್ಕಾರದಿಂದ ನಗರಸಭೆ ಪೌರಕಾರ್ಮಿಕರ ಹಿತದೃಷ್ಠಿಯಿಂದ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದು, ಪ್ರತಿಯೊಬ್ಬರು ಸೌಲಭ್ಯಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು
ಶೀಘ್ರದಲ್ಲಿಯೇ ಪೌರಕಾರ್ಮಿಕರಿಗೆ ಬೃಹತ್ ಮಟ್ಟದ ವೈದ್ಯಕೀಯ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗುವುದು. ಪೌರಕಾರ್ಮಿಕರ ಕುಟುಂಬಕ್ಕೆ ಈಗಾಗಲೇ ಸರ್ಕಾರದಿಂದ ಕುಟುಂಬ ವಿಮೆಯನ್ನು ಮಾಡಿಸಲಾಗಿದೆ. ಅದರ ಜೊತೆಗೆ ಅವರ ಮಕ್ಕಳಿಗೆ ಸರ್ಕಾರದ ಸಿಗುವ ಸಮವಸ್ತçಗಳ ಜೊತೆಗೆ ನಗರಸಭೆಯಿಂದಲೂ ಸಮವಸ್ತçವನ್ನು, ಬುಕ್‌ಗಳನ್ನು ಶೀಘ್ರದಲ್ಲಿಯೇ ವಿತರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಿಇಒ ದುರುಗಪ್ಪ ಹಸಮಕಲ್, ನಗರಸಭೆ ಎಇಇ ನಾನಾಸಾಹೇಬ್ ಮಡಿವಾಳ, ವ್ಯವಸ್ಥಾಪಕ ಶರಣಬಸವ, ಅಧಿಕಾರಿಗಳಾದ ಸುಬ್ರಮಣ್ಯಂ, ಲಿಂಗರಾಜ, ಕಿಶನ್ ರಾವ್, ಲಕ್ಷ್ಮಿಪತಿ ಸೇರಿದಂತೆ ನಗರಸಭೆ ಸಿಬ್ಬಂದಿವರ್ಗದವರು ಹಾಗೂ ಪೌರಕಾರ್ಮಿಕರು ಇದ್ದರು.

LEAVE A REPLY

Please enter your comment!
Please enter your name here