ಶಿಕ್ಷಕರ ಚುನಾವಣೆ: ರಾಜೇಂದ್ರ ಕುಮಾರ್ ಪೆನಾಲ್‌ಗೆ ವಿಜಯಮಾಲೆ ನಶೆಯಲ್ಲಿ ಚಪ್ಪಲಿ, ಗುರುತಿನ ಚೀಟಿ ಬಿಟ್ಟುಹೋದ ಶಿಕ್ಷಕರು: ಛೀಮಾರಿ

0
337

ಸಿಂಧನೂರು.ಫೆ.02- ಸಿಂಧನೂರು ನಗರದ ಪಿಡಬ್ಲೂö್ಯಡಿ ಕ್ಯಾಂಪಿನ ಬಿಆರ್‌ಸಿ ಕಾರ್ಯಾಲಯದಲ್ಲಿ ಶನಿವಾರ ನಡೆದ ಸಿಂಧನೂರು ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಜಯಗಳಿಸಿದ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಕುಡಿದು ಕುಪ್ಪಳಿಸಿ ಸಂಭ್ರಮಾಚರಣೆ ನಡೆಸಿದ್ದಾರೆ. ನಶೆಯಲ್ಲಿ ಚಪ್ಪಲಿ, ಗುರುತಿನ ಚೀಟಿ ಹಾಗೂ ಮದ್ಯ ಸೇವಿಸಿದ ಬಾಟಲಿಗಳು ಅಲ್ಲೆ ಎಸೆದು ಹೋಗಿದ್ದು, ವಾಯುವಿಹಾರ ನಡೆಸುವವರ ಆಕ್ರೋಶಕ್ಕೆ ಕಾರಣವಾಗಿದೆ.
ಸಂಜೆ 04 ಗಂಟೆ ಸುಮಾರಿಗೆ ಮತದಾನ ಮುಗಿಯುತ್ತಿದ್ದಂತೆ ಮತ ಎಣಿಕೆಯೂ ಆರಂಭವಾಯಿತು. ಮಧ್ಯರಾತ್ರಿ 01 ಗಂಟೆಯವರೆಗೂ ಮತ ಎಣಿಕೆ ನಡೆಯಿತು. ರಾಜೇಂದ್ರಕುಮಾರ ಬಣ 10 ಸ್ಥಾನಗಳನ್ನು ತನ್ನದಾಗಿಸಿಕೊಂಡು ಸ್ಪಷ್ಟ ಬಹುಮತ ಪಡೆದುಕೊಂಡಿತು. ಈ ಸಂದರ್ಭದಲ್ಲಿ ತಾವೊಬ್ಬ ಶಿಕ್ಷಕರು ಎನ್ನುವದನ್ನು ಮರೆತು ಶಾಲಾ ಆವರಣದಲ್ಲಿಯೇ ಕುಡಿದು ಕುಪ್ಪಳಿ ಸಂಭ್ರಮಾಚರಣೆ ಮಾಡಿದ್ದಾರೆ. ಕುಡಿದ ನಶೆಯಲ್ಲಿಯೇ ಬಾಟಲ್‌ಗಳು, ಚಪ್ಪಲ್‌ಗಳು, ಗುರುತಿನ ಚೀಟಿಗಳು ಶಾಲಾ ಆವರಣದಲ್ಲಿಯೇ ಬಿದ್ದಿವೆ. ಶಿಕ್ಷಕರ ಈ ಕಾರ್ಯಕ್ಕೆ ಬೆಳಗ್ಗೆ ವಾಯು ವಿಹಾರಕ್ಕೆ ಬಂದವರು ಶಿಕ್ಷಕರಿಗೆ ಛೀಮಾರಿ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಕಂಡು ಬಂತು.
ಆರೋಪ:
ಚುನಾವಣೆಯಲ್ಲಿ ಗೆಲುವಾಗಲಿ, ಸೋಲಾಗಲಿ ಸಮವಾಗಿ ಸ್ವೀಕರಿಸಿ ಶಾಂತರೀತಿಯಿAದ ಮನೆಗೆ ತೆರಳದೇ ಆವರಣದಲ್ಲಿ ಕುಡಿದು ಕುಪ್ಪಳಿಸಿ ಚಪ್ಪಲಿ, ಗುರುತಿನ ಚೀಟಿ ಬಿಟ್ಟು ಹೋಗಿದ್ದು ಶಿಕ್ಷಕರ ದುರ್ನಡತೆಯನ್ನು ಎತ್ತಿತೋರಿಸುತ್ತದೆ. ಈ ರೀತಿಯ ರಾಜಕೀಯ ಮಾಡುವ ಶಿಕ್ಷಕರು ಮಕ್ಕಳಿಗೆ ಯಾವ ರೀತಿ ಪಾಠ ಕಲಿಸಿ ಸತ್ಪçಜೆಯನ್ನಾಗಿ ನಿರ್ಮಾಣ ಮಾಡುತ್ತಾರೋ ದೇವರೆ ಬಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಮನಹರಿಸಿ ತಪ್ಪಿತಸ್ಥ ಶಿಕ್ಷಕರ ಮೇಲೆ ಕ್ರಮ ಜರುಗಿಸಲಿ ಎಂದು ವಾಯು ವಿಹಾರಕ್ಕೆ ಬಂದಿದ್ದ ಮೌನೇಶ ಚವ್ಹಾಣ್ ಎನ್ನುವವರು ಆರೋಪಿಸಿದರು.

ಜಯ-ಮುಖಭಂಗ:
ಸಿಂಧನೂರು ನಗರದ ಪಿಡಬ್ಲೂಡಿ ಕ್ಯಾಂಪಿನ ಬಿಆರ್‌ಸಿ ಕಾರ್ಯಾಲಯದಲ್ಲಿ ಶನಿವಾರ ನಡೆದ ಸಿಂಧನೂರು ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಶಿಕ್ಷಕ ರಾಜೇಂದ್ರಕುಮಾರ ಪೆನಾಲ್ 10 ಸ್ಥಾನ ಗೆಲ್ಲುವ ಮೂಲಕ ಜಯಭೇರಿ ಬಾರಿಸಿದರೆ, ಕಳೆದ ಅವಧಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ವಿ.ಬಸವರಾಜ ಪೆನಾಲ್ ಕೇವಲ 5 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ.

LEAVE A REPLY

Please enter your comment!
Please enter your name here