ರಾಜಾ ಸುಭಾಶ್ ಚಂದ್ರ ನಾಯಕ ಇವರಿಗೆ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಸನ್ಮಾನ.

0
194

ಮಾನವಿ.ಜ.31- ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಮಾನವಿಯ ಅಧ್ಯಕ್ಷ ಸ್ಥಾನಕ್ಕೆ ಸತತ ಐದನೇ ಬಾರಿಗೆ ಅವಿರೊಧ ಆಯ್ಕೆಯಾದ ಶ್ರೀ ರಾಜ ಸುಭಾಷ್ ಚಂದ್ರ ನಾಯಕ್ ರವರಿಗೆ ಖಾಸಗೀ  ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಮಾನವಿ ತಾಲೂಕ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಹಿರಿಯ ಸದಸ್ಪಯ ಹಾಗು ಪದಾಧಿಕಾರಿಗಳು ಆದ  ಶ್ರೀ ರಾಜ ಸುಭಾಷ್ ಚಂದ್ರ ನಾಯಕ್ ರವರು ಶಿಕ್ಷಣ ಕ್ಷೇತ್ರದಲ್ಲಿ ರಂಗನಾಥ ಶಿಕ್ಷಣ ಸಂಸ್ಥೆಯ ಮುಖಾಂತರ ಬಡ ವಿದಾ್ಯಾರ್ಥಿಗಳಿಗೆ  ವಿದ್ಯಾ ದಾನ ಮಾಡುತ್ತಾ ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸುವುದರ ಮೂಲಕ ರೈತರ ಸೇವೆ ಮಾಡುವ ನಿಟ್ಟಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಮಾನವಿಯಲ್ಲಿ ಸಮಾರು 25 ವರ್ಷಗಳಿಂದ ಸಂಘದ ಅಧ್ಯಕ್ಷರಾಗಿ ರೈತರ ಪಾಲಿಗೆ ಬೆಳಕಾಗಿ ರೈತರನ್ನ ಬಡ್ಡಿರಹಿತ ಸಾಲ ನೀಡಿ ಪ್ರತಿ ವರ್ಷ ಅವಧಿ ಒಳಗೆ ಹಣ ಪಾವತಿಸುವಂತೆ ಜಾಗೃತಿ ಮೂಡಿಸಿ ಪ್ರತಿ ವರ್ಷ ಬಡ್ಡಿರಹಿತ ಸಾಲ ಪಡೆದುಕೊಳ್ಳಲು ರೈತರಿಗೆ ಸಹಕಾರ ನೀಡಿರುವುದ ಹೆಮ್ಮೆಯ ವಿಷಯವೆಂದು ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಶರ್ಫುದ್ದೀನ್ ಪೊತ್ನಾಳ್ ಹೇಳಿದರು.

ಅವರು ಇಂದು ಜ್ಞಾನ ನಿಧಿ ಶಾಲೆಯಲ್ಲಿ ಖಾಸಗಿ ಶಾಲೆಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ರಾಜಾ ಸುಭಾಶ್ ಚಂದ್ರ ನಾಯಕ್ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು ಮತ್ತು ಅವರ ಹುಟ್ಟಿದ ಹಬ್ಬ ಇದ್ದಕಾರಣ ಕೇಕ್ ಕತ್ತರಿಸುವ ಮೂಲಕ ಒಕ್ಕೂಟದ ಪದಾಧಿಕಾರಿಗಳು ಶುಭಾಷಯ ಕೊರಿದರು.

ಈ ಸಂದ್ರಭದಲ್ಲಿ ಕಾರ್ಯದರ್ಶಿ ರಾಜು ತಾಳಿಕೊಟಿ, ಎಮ್ ಏ ಎಚ್ ಮುಖೀಮ್, ಪ್ರವೀಣ ಕುಮಾರ್, ಕುಮಾರಿ ಸರಿತಾ ಜೈನ್, ರಫಿಕ್, ಅಲೀಮ್ ಖಾನ್, ಕೆ ಆನಂದ, ಮಾಫ್ರೈಂಡ್ಸ್ ಗಳಾದ ಮನೊಜ್ ಮಿಶ್ರಾ, ಅನಿಲ್ ಕುಮಾರ್, ಆಂಜನೇಯ ದಡಿ, ಹಾಗು ಎಸ್ ವಿ ಎಸ್ ಶಾಲೆಯ ಅಧ್ಯಕ್ಷ, ಬಿವಿಆರ್ ನೊವಾ ಶಾಲೆಯ ಅಧ್ಯಕ್ಷ, ಮತ್ತು ಇತರೇ ಪದಾಧಿಕಾರಿಗಳು ಉಪಸ್ಥಿತರಿದ್ದರು,

LEAVE A REPLY

Please enter your comment!
Please enter your name here