ಮಾಡಸಿರವಾರದಲ್ಲಿ ಹೊಲಿಗೆ ಯಂತ್ರ ವಿತರಣೆ ಮಹಿಳೆಯರು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಿ: ಬಸನಗೌಡ ಬಾದರ್ಲಿ

0
145

ಸಿಂಧನೂರು.ಜ.31- ಮಹಿಳೆಯರು ಹೊಲಿಗೆ ಯಂತ್ರದ ಸದುಪಯೋಗ ಪಡೆದುಕೊಳ್ಳುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಹೇಳಿದರು.
ತಾಲ್ಲೂಕಿನ ಮಾಡಸಿರವಾರ ಗ್ರಾಮದಲ್ಲಿ ಕೆ.ನಾಗಪ್ಪ ಚಾರಿಟೇಬಲ್ ಟ್ರಸ್ಟ್ ಹಾಗೂ ಕೆ.ಕರಿಯಪ್ಪ ಅಭಿಮಾನಿಗಳ ಬಳಗದಿಂದ ಹಮ್ಮಿಕೊಂಡಿದ್ದ ಮಾಡಸಿರವಾರ, ದಿದ್ದಿಗಿ ಹಾಗೂ ಬೆಳಗುರ್ಕಿ ಗ್ರಾಮದ ಮಹಿಳೆಯರಿಗೆ 101 ಹೊಲಿಗೆ ಯಂತ್ರ ವಿತರಣೆ, ಕೆ.ಕರಿಯಪ್ಪ ಅಭಿಮಾನಿ ಬಳಗದ ನಾಮಫಲಕ ಉದ್ಘಾಟನೆ ಹಾಗೂ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆ.ಕರಿಯಪ್ಪ ಅವರು ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಕೆ.ಕರಿಯಪ್ಪ ಮಾತನಾಡಿ, ಹೊಲಿಗೆ ಯಂತ್ರಗಳನ್ನು ಪಡೆದುಕೊಳ್ಳಲು ಆಯ್ಕೆಯಾಗಿರುವ ಮಹಿಳೆಯರಿಗೆಲ್ಲರಿಗೂ ಯುವಕರು ತಲುಪಿಸುವ ಕೆಲಸ ಮಾಡಬೇಕು. ತಮ್ಮ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಶರಣಶ್ರೀ ರ‍್ರಿಸ್ವಾಮಿ ಬೆಳಗುರ್ಕಿ, ಸಿದ್ರಾಮಪ್ಪ ಮಾಡಸಿರವಾರ, ಹನುಮೇಶ ಬಾಗೋಡಿ, ಖಾಜಾಹುಸೇನ್ ರೌಡಕುಂದಾ, ಹುಸೇನಬಾಷಾ ಬಳಗಾನೂರು, ಹನುಮೇಶ ಕೊಡ್ಲಿ, ಬಸವರಾಜ ಗೌಡನ ಬಾವಿ, ರಾಘವೇಂದ್ರ ಭಂಗಿ, ಬಸವಲಿಂಗಪ್ಪ, ಬಸವರಾಜ ಹಿರೇಕುರುಬರ್, ಕರಿಲಿಂಗಪ್ಪ, ವೀರೇಶ ಸಾಲಗುಂದಾ ಇದ್ದರು.

LEAVE A REPLY

Please enter your comment!
Please enter your name here