“ಸಂವಿಧಾನ ಉಳಿಸಿ, ಪೌರತ್ವ ರಕ್ಷಿಸಿ” ವೆಲ್ಫೇರ್ ಪಾರ್ಟಿ ವತಿಯಿಂದ ಜನವರಿ 23-30ರ ವರೆಗೆ ದೇಶವ್ಯಾಪಿ ಅಭಿಯಾನ

0
196

ರಾಯಚೂರು:ಜ,23-  ಪೌರತ್ವ ತಿದ್ದುಪಡಿ ಕಾಯ್ದೆ ಸಿಎಎ ವಿರೋಧಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದೇಶಾದ್ಯಂತ `ಸಂವಿಧಾನ ಉಳಿಸಿ, ಪೌರತ್ವ ರಕ್ಷಿಸಿ’ ಎಂಬ ಅಭಿಯಾನ ನಡೆಸಲಿದೆ. ಈ ಅಭಿಯಾನವು ಜನವರಿ 23 ರಿಂದ ಜನವರಿ 30 ರ ವರೆಗೆ ಒಂದು ವಾರ ಕಾಲ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಮೌಲಾನ ಶೇಕ್ಫರೀದ್ ಉಮರಿ ಹೇಳಿದರು

ಅವರು ಇಂದು ರಾಯಚೂರಿನ ಪತ್ರಿಕಾ ಭವನದಲ್ಲಿ ಸುದ್ದಿಘೊಷ್ಠಿ ನಡೆಸಿ ಮಾತನಾಡಿ ಸಿಎಎ ಕಾಯ್ದೆಯು ದೇಶದ ಸಂವಿಧಾನದ ಮೂಲ ಆಶಯಕ್ಕೆ ಮತ್ತು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಾನೂನಿಗ ವಿರುದ್ಧವಾಗಿದ್ದು, ಜಾತಿ ತಾರತಮ್ಯತೆಯಿಂದ ಕೂಡಿದೆ. ಇದು ಭಾರತದ ಜಾತ್ಯಾತೀತತೆಯ ಪರಂಪರೆಗೆ ಕೊನೆ ಹಾಡಲಿದೆ. ಮಾತ್ರವಲ್ಲದೆ, ಸರಕಾರದ ಅವೈಜ್ಞಾನಿಕ ಸರಕು ಮತ್ತು ಸೇವಾ ತೆರಿಗೆ ಹಾಗೂ ನೋಟ್ ಅಮಾನ್ಯೀಕರಣದಂತಹ ಕರಾಳ ಕ್ರಮಗಳಿಂದ ಈಗಾಗಲೇ ಸಾಕಷ್ಟು ಆರ್ಥಿಕ ಸಂಕಷ್ಟ ಮತ್ತು ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ದೇಶದ ಜನತೆಗೆ ಇವು ಅನಗತ್ಯ ಹೆಚ್ಚುವರಿ ತೊಂದರೆ ನೀಡಲಿವೆ ಎಂದು ವೆಲ್ಫೇರ್ ಪಾರ್ಟಿ ಅಭಿಪ್ರಾಯಿಸಿದೆ. ಸಿಎಎಯನ್ನು ವಿರೋಧಿಸುವುದರ ಜತೆಗೆ ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ಗಳನ್ನು ಇಡೀ ದೇಶದಲ್ಲಿ ಜಾರಿಗೆ ತಂದಿರುವುದನ್ನು ಕೂಡಾ ಪಕ್ಷವ ವಿರೋಧಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಅಧಿಕಾರಕ್ಕೆ ಬಂದಾಗಿನಿಂದಲೂ ಸಂವಿಧಾನದ ಆಶಯಗಳಿಗೆ ವಿರುದ್ದವಾಗಿ ನಡೆ ಆರಂಭಿಸಿದೆ. ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸಿಲ್ಲ, ಕಪ್ಪುಹಣ ವಾಪಾಸ್ ತಂದಿಲ್ಲ, ಸ್ವಾಮಿನಾಥನ್ ವರದಿಜಾರಿಗೊಳಿಸಿಲ್ಲ, ಬೆಲೆ ಏರಿಕೆ ನಿಯಂತ್ರಿಸಿಲ್ಲ, ಬದಲಾಗಿ ದೇಶದ ಸಂಪತ್ತನ್ನು ಅದಾನಿ, ಅಂಬಾನಿಯಂತಹವರಿಗೆಮಾರಾಟ ಮಾಡುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದಸಂಸ್ಥೆಗಳನ್ನು ಖಾಸಗೀಕರಣ ಮಾಡಲುಮುಂದಾಗಿದ್ದಾರೆ. ಇವುಗಳನ್ನು ಮರೆಮಾಚಲು ಸುಳ್ಳಿನಮೇಲೆ ಸುಳ್ಳು ಹೇಳುತ್ತಾ ಜನರ ದಿಕ್ಕು ತಪ್ಪಿಸುತ್ತಿದ್ದಾರೆ.

ಈಗ ಸಂವಿಧಾನ ಪರಿಚ್ಛೇದ 14,15 ಮತ್ತು 21ರಆಶಯಗಳಿಗೆ ವಿರುದ್ಧವಾಗಿ ಕೇಂದ್ರ ಸರಕಾರ ಪೌರತ್ವತಿದ್ದುಪಡಿ ಮತ್ತು ಪೌರತ್ವ ನೊಂದಣಿ ಕಾಯ್ದೆಜಾರಿಗೊಳಿಸಿ ಜಾತಿ, ಧರ್ಮದ ಹೆಸರಿನಲ್ಲಿ ವಿಭಜಿಸಲಾಗುತ್ತಿದೆ.

ಕೇಂದ್ರ ಸರಕಾರ ಈಮಸೂದೆಯನ್ನ ಜಾರಿ ಮಾಡುವ ಮೂಲಕ ದೇಶವನ್ನವಿಭಜಿಸುವ ಕೆಲಸಕ್ಕೆ ಕೈ ಹಾಕಿದೆ ಮುಸ್ಲಿಮ್ ವಿರೊಧಿನೀತಿ ಅನುಸರಿಸುತ್ತಿದೆ ಕೇಂದ್ರ ಸರಕಾರದ ಧೊರಣೆಒಂದು ಸಮುದಾಯಕ್ಕೆ ಬೆಣ್ಣೆ ಇನ್ನೊಂದಕ್ಕೆ ಸುಣ್ಣ ಹಚ್ಚುವ ರೀತಿಯಲ್ಲಿದೆ,
ಮೊದಿ ಸರಕಾರ ಹಿಟ್ಲರ್ ಸಂಸ್ಕೃತಿಯನ್ನೇ ಮೀರಿಸಿದೆ,
ಮೂದಿ ಸರಕಾ ಬ್ರಿಟೀಷ್ ಸರಕಾರಕ್ಕಿಂತಲೂ ಅಧಿಕ ಕ್ರೂರಿಯಾಗಿದೆ,ಸರಕಾರ ಈ ವಿವಾದತ್ಮಕ ಕಾನೂನುಗಳನ್ನ ಜಾರಿಮಾಡಿ ಮುಸ್ಲಿಮ್ ಸಮುದಾಯವನ್ನ ಕೊಲ್ಲುವ ಹಾಗು ಬುಡಕಟ್ಟು ಜನಾಂಗ, ಆದಿವಾಸಿಗಳು, ದಲಿತರನ್ನ ತುಳಿಯುವ ಪ್ರಯತ್ನದಲ್ಲಿದೆ,

ಈಸರಕಾರ ದೇಶದ ಪ್ರಗತಿಗೆ ಮಾರಕವಾಗಿದೆ ,ತನ್ನನ್ಯೂನ್ಯತೆಗಳನ್ನ ಮುಚ್ಚಿಹಾಕಲು ಪದೇ ಪದೇ ಇಂತಹ ವಿಷಯಗಳನ್ನ ತಂದು ಜನರ ಗಮನ ಬೇರೆಡೆಗೆ ಸೆಳೆಯುವ ಕುತಂತ್ರ ಮಾಡ್ತಾಬಂದಿದೆ
ಅಸ್ಸಾಮ್ ನ NRC ಮೂಲಕ ತಾನು ಮಾಡಿದ ತಪ್ಪಿನಿಂದ ಹೊರಗುಳಿದ 19 ಲಕ್ಷ ಜನರ ಪೈಕಿ 05 ಲಕ್ಷ ಮುಸಲ್ಮಾನರ ಜೋತೆಗೆ 14 ಲಕ್ಷ ಹಿಂದೂಗಳನ್ನ ತೊಂದರೆ ಪಡುವಂತೆ ಮಾಡಿ ಈಗ ಸಂವಿಧಾನ ವಿರೊಧಿ ಧರ್ಮಾಧಾರಿತ ಮಸೂದೆ ತಂದಿರುವುದು ಖಂಡನೀಯ  ಪ್ರಜಾಪ್ರಭುತ್ವದ ದೇಶ ಭಾರತದಲ್ಲಿ ಸಂವಿಧಾನದ ಮೂಲ ಅಂವಶಗಳಿಗೆ ಧಕ್ಕೆ ತರುವ ಮೂಲಕ ಪ್ರಜಾಪ್ರಭತ್ವ ವ್ಯವಸ್ಥೆಯನ್ನ ಮುಗಿಸಿ ಹಿಂದುತ್ವವನ್ನ
ಜಾರಿಗೆ ತರುವ ದುಷ್ಟ ಯೊಚನೆ ಸರಕಾರದ್ದಾಗಿದೆ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಧರ್ಮದ ಆಧಾರದಲ್ಲಿ ಪೌರತ್ವ ಮಸೂದೆಜಾರಿಯಾಗಿರುವುದು ನಮ್ಮೆಲ್ಲರ ಪಾಲಿಗೆ ಕರಾಳ ದಿನವಾಗಿದೆ  ಪೌರತ್ವ ಮಸೂದೆ ತಿದ್ದುಪಡಿಯ ಹೆಸರಿನಲ್ಲಿ  ಈ ದೇಶದಲ್ಲಿರುವ ಮುಸಲ್ಮಾನರಿಗೆ ದೇಶದ ಹೊರಗೆ ದಬ್ಬುವ ಉದ್ದೇಶ ಇವರದ್ದಾಗಿದೆ  ಮಸೂದೆ NRC ಜಾರಿ ಮಾಡುವ ಮೋದಲನೇ ಮೆಟ್ಟಿಲು ಎಂದೇ ಹೇಳಲಾದ NPR ಪ್ರಾರಂಭ ಮಾಡುತ್ತಿರುವುದು ಸಹ ತಕ್ಷಣವೇ ನಿಲ್ಲಿಸಬೇಕು
ಈಗಾಗಲೇ ಡಿಸಂಬರ್ 25 ರಂದು ಪಕ್ಷವು ಸಿಎಎ ಪ್ರಶ್ನಿಸಿ ಸುಪ್ರೀಮ್ ಕೋರ್ಟ್ ನಲ್ಲಿ ರಿಟ್ ಅರ್ಜಿ ದಾಖಲಿಸಿದೆ, ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರುದ್ಧ ಜನಜಾಗೃತಿ ಮೂಡಿಸುವುದು ನಮ್ಮ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಕಡೆಗಳಲ್ಲಿ ವಿಚಾರಗೋಷ್ಠಿ,

ಕಾರ್ನರ್ ಸಭೆ, ಬೃಹತ್ ಸಾರ್ವಜನಿಕ ಸಭೆ, ‍ರ್ಯಾಲಿ, ಕ್ಯಾಂಡಲ್ ಮಾರ್ಚ್, ಮಾನವ ಸರಪಳಿ, ಬೀದಿ ನಾಟಕ, ಕರಪತ್ರ ಹಂಚಿಕೆ, ಏಕದಿನ ಧರಣಿ, ಪೋಸ್ಟರ್ ಅಭಿಯಾನ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಅಭಿಯಾನದ ಅಂಗವಾಗಿ ಜನವರಿ 26 ರಂದು ಮಾನ್ವಿ,ರಾಯಚೂರು,ಲಿಂಗಸುಗುರು, ಸಿಂಧನೂರಿನಲ್ಲಿ ಮಾನವ ಸರಪಳಿ ಮತ್ತು ವಿಚಾರಗೋಷ್ಟಿ ಹಾಗೂ ಒಂದುವಾರಗಳ ಕಾಲ ವಿವಿಧ ಕಾರ್ಯಕ್ರಮಗಳನ್ನ ಮಾಡಲಾಗುವುದು.

ಈ ಪತ್ರಿಕಾ ಘೊಷ್ಠಿ ನಡೆಯುವ ಸಂದರ್ಭದಲ್ಲಿ
ಕಾರ್ಯ ಅಧಕ್ಷರಾದ ಲತೀಫ್ ಸಾಬ್ ರಾಯಚೂರು
ಪ್ರಾಧಾನ ಕಾರ್ಯದರ್ಶಿ ಅಬ್ದುಲ್ ಗನಿ ಗುಂಜಳ್ಳಿ, ಉಪಾಧ್ಯಕ್ಷರಾದ ಅಬ್ದುಲ್ ಗನಿ ಮಸ್ಕಿ,
ಮಹಿಬೂಬ್ ಖಾನ್ ಸಿಂಧನೂರು,
ಡಾ!! ಮೊಹಮ್ಮದ್ ಶಫಿ ಸಿಂಧನೂರು,
ಜಾಫರ್ ಸಾಬ್ ಲಿಂಗಸ್ಗೂರು ಹಾಗು ಫಾರುಕ್ ಮನಿಯಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here